ವಿಶ್ವದ ಎಲೆಕ್ಟ್ರಾನಿಕ್ ತ್ಯಾಜ್ಯ ಕಳೆದ ವರ್ಷ ದಾಖಲೆಯ ಏರಿಕೆ!

ಫ್ಲ್ಯಾಟ್ ಸ್ಕ್ರೀನ್ ಟಿವಿಗಳು, ಮೊಬೈಲ್ ಫೋನ್, ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಸರಕುಗಳ ತ್ಯಾಜ್ಯ 2019 ರಲ್ಲಿ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಗೆ ಸಂಬಂಧಿಸಿದ ಅಧ್ಯಯನ ವರದಿಯ ಮೂಲಕ ತಿಳಿದುಬಂದಿದೆ.
ವಿಶ್ವದ ಎಲೆಕ್ಟ್ರಾನಿಕ್ ತ್ಯಾಜ್ಯ ಕಳೆದ ವರ್ಷ ದಾಖಲೆಯ ಏರಿಕೆ!
ವಿಶ್ವದ ಎಲೆಕ್ಟ್ರಾನಿಕ್ ತ್ಯಾಜ್ಯ ಕಳೆದ ವರ್ಷ ದಾಖಲೆಯ ಏರಿಕೆ!

ಬರ್ಲಿನ್: ಫ್ಲ್ಯಾಟ್ ಸ್ಕ್ರೀನ್ ಟಿವಿಗಳು, ಮೊಬೈಲ್ ಫೋನ್, ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಸರಕುಗಳ ತ್ಯಾಜ್ಯ 2019 ರಲ್ಲಿ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಗೆ ಸಂಬಂಧಿಸಿದ ಅಧ್ಯಯನ ವರದಿಯ ಮೂಲಕ ತಿಳಿದುಬಂದಿದೆ. 

ಈ ವರದಿಯ ಪ್ರಕಾರ 2019 ರಲ್ಲಿ 53.6 ಮೆಟ್ರಿಕ್ ಟನ್ ನಷ್ಟು ಅಂದರೆ ಕಳೆದ ವರ್ಷಕ್ಕಿಂತಲೂ  ಅಂದಾಜು 2 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಈ ಬಾರಿ ಹೆಚ್ಚುವರಿ ತ್ಯಾಜ್ಯ ಸಂಗ್ರಹಣೆಯಾಗಿದೆ. ಪ್ಲಗ್ ಹಾಗೂ ಬ್ಯಾಟರಿ ಸಹಿತವಾಗಿರುವ ಉಪಕರಣಗಳ ತೂಕ 350 ಕ್ರೂಸ್ ಶಿಪ್ ನಷ್ಟಕ್ಕೆ ಸಮವಾಗಿದೆ ಎಂದು ವರದಿ ಹೇಳಿದೆ.
 
ತ್ಯಾಜ್ಯಗಳ ಪೈಕಿ ವಿದ್ಯುತ್ ಪ್ರವಹಿಸುವುದಕ್ಕೆ ಅನುಕೂಲಕರವಾಗಿರುವ ಸರ್ಕ್ಯೂಟ್ ಬೋರ್ಡ್ ಗಳಲ್ಲಿ ಬಳಕೆ ಮಾಡುವಂತಹ ತಾಮ್ರ ಹಾಗೂ ಇನ್ನಿತರ ಲೋಹಗಳು ಇರುತ್ತವೆ. ಈ ಪೈಕಿ ಆರನೇ ಒಂದರಷ್ಟು ಮಾತ್ರ ಮರುಬಳಕೆಗೆ ಯೋಗ್ಯವಾಗಿರುತ್ತವೆ ಹಾಗೂ 57 ಬಿಲಿಯನ್ ಡಾಲರ್ ನಷ್ಟು ಮರುಬಳಕೆಗೆ ಬರುವುದಿಲ್ಲ ಎಂದು ವರದಿ ಹೇಳಿದೆ. ಬಳಕೆ ಯೋಗ್ಯವಲ್ಲದ, ಎಸೆದ ತ್ಯಾಜ್ಯಗಳು ಪರಿಸರ ಹಾಗೂ ಆರೋಗ್ಯಕ್ಕೆ ಹಾನಿಕಾರಕವಾಗಲಿದ್ದು, ಮರ್ಕ್ಯುರಿಯಂತಹ ವಸ್ತುಗಳು ನರಮಂಡಲಗಳಿಗೆ ಮಾರಕ ಎಂದು ವಿಶ್ಲೇಷಿಸಲಾಗಿದೆ. ಈ ಸಂಶೋಧನೆಯ ಬರಹಗಾರರ ಪ್ರಕಾರ 2030ರ ವೇಳೆಗೆ ಜಾಗತಿಕ ಇ-ತ್ಯಾಜ್ಯ 74 ಮಿಲಿಯನ್ ಮೆಟ್ರಿಕ್ ಟನ್ ನಷ್ಟಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com