ಭಾರತದ ಮಾರುಕಟ್ಟೆಗೆ 4ಜಿ ಎಲ್ ಟಿಇ ನೋಟ್ ಬುಕ್ ಪರಿಚಯಿಸಿದ ಹೆಚ್ ಪಿ: ಬೆಲೆ, ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ
ನಿರಂತರ ಸಂಪರ್ಕ ಹೊಂದಿರುವ ಕಂಪ್ಯೂಟರ್ ಗಳ ವಿಭಾಗದ ಮಾರುಕಟ್ಟೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೆಚ್ ಪಿ ಸಂಸ್ಥೆ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ತಾಂತ್ರಿಕ ವೈಶಿಷ್ಟ್ಯ ಹೊಂದಿರುವ ಎಚ್‌ಪಿ14ಎಸ್ ನೋಟ್ ಬುಕ್ ನ್ನು ಬಿಡುಗಡೆ ಮಾಡಿದೆ.
4G LTE ಸಂಪರ್ಕ ಹೊಂದಿರುವ ಈ ನೋಟ್ ಬುಕ್, 10th ಜನರೇಷನ್ ಚಿಪ್ ಗಳನ್ನು ಹೊಂದಿದ್ದು ಅತ್ಯಾಧುಕ ಆಂತರಿಕ ವಿಭಾಗಗಳನ್ನು ಹೊಂದಿದೆ. ಎಚ್‌ಪಿ 14 ಎಸ್ ಹಗುರ ಹಾಗೂ ಸ್ಟೈಲಿಶ್ ಆಗಿದೆ. ಎಚ್‌ಪಿ ಎಲೈಟ್ ಡ್ರ್ಯಾಗನ್ ಫ್ಲೈ ಮತ್ತು ಎಚ್‌ಪಿ ಸ್ಪೆಕ್ಟ್ರಾ ಎಕ್ಸ್ 360 ಸೆರಿದಂತೆ ಎಚ್‌ಪಿಯ ಪ್ರೀಮಿಯಂ ನೋಟ್ ಬುಕ್ ಗಳಿಗಷ್ಟೇ 4ಜಿ ಲಭ್ಯವಿತ್ತು.
ಐ3 ಪ್ರೊಸೆಸರ್ ಹಾಗೂ 4 ಜಿಬಿ ರ್ಯಾಮ್ ಹೊಂದಿರುವ 14 ಎಸ್ ನ ಬೆಲೆ Rs 44,999 ಆಗಿದ್ದರೆ, ಐ5 ಪ್ರೊಸೆಸರ್ ಹಾಗೂ 8 ಜಿಬಿ ರ್ಯಾಮ್ ಹೊಂದಿರುವ 14 ಎಸ್ ನ ಬೆಲೆ 64,999 ಆಗಿದೆ. ವೇಗವಾಗಿ ಚಾರ್ಜ್ ಆಗುವ ಬ್ಯಾಟರಿ ಹೊಂದಿರುವ ಎಚ್‌ಪಿ 14 ಎಸ್ 9 ಗಂಟೆಗಳ ನಿರಂತರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 4ಜಿ ಎಲ್ ಟಿಇ ವೇಗವಾಗಿ ಮತ್ತು ಭದ್ರತೆಯ ಇಂಟರ್ನೆಟ್ ಸಂಪರ್ಕವನ್ನು ಹೊಂದಲು ಮಹತ್ವದ ಪಾತ್ರವನ್ನು ವಹಿಸುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ