ಕಲರ್ ಒಎಸ್7 ಇರುವ ಓಪ್ಪೊ ನ ರೆನೋ 3 ಪ್ರೋ ಬಿಡುಗಡೆ: ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ 

ಓಪ್ಪೋ ಮೊಬೈಲ್ ಉತ್ಪಾದಕ ಸಂಸ್ಥೆ ಕಲರ್ ಒಎಸ್7 ಇರುವ ಹೊಸ ಮೊಬೈಲ್ ರೆನೋ 3 ಪ್ರೋ ಯನ್ನು ಬಿಡುಗಡೆ ಮಾಡಿದೆ. 
ಕಲರ್ ಒಎಸ್7 ಇರುವ ಓಪ್ಪೊ ನ ರೆನೋ 3 ಪ್ರೋ ಬಿಡುಗಡೆ: ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ
ಕಲರ್ ಒಎಸ್7 ಇರುವ ಓಪ್ಪೊ ನ ರೆನೋ 3 ಪ್ರೋ ಬಿಡುಗಡೆ: ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಓಪ್ಪೋ ಮೊಬೈಲ್ ಉತ್ಪಾದಕ ಸಂಸ್ಥೆ ಕಲರ್ ಒಎಸ್7 ಇರುವ ಹೊಸ ಮೊಬೈಲ್ ರೆನೋ 3 ಪ್ರೋ ಯನ್ನು ಬಿಡುಗಡೆ ಮಾಡಿದೆ. 

ಒಎಸ್7 ಸ್ಮಾರ್ಟ್ ಟೆಕ್ ನಲ್ಲಿ ಹಲವು ಸ್ಮಾರ್ಟ್ ಟೆಕ್ ವೈಶಿಷ್ಟ್ಯತೆಗಳಿದೆ. ಕಲರ್ ಒಎಸ್7 ನ್ನು ಕಳೆದ ವರ್ಷವೇ ಬಿಡುಗಡೆ ಮಾಡಲಾಗಿತ್ತಾದರೂ ಓಪ್ಪೋ ಸಂಸ್ಥೆಯ 13 ಮೊಬೈಲ್ ಹ್ಯಾಂಡ್ ಸೆಟ್ ಗಳಲ್ಲಿ ಪ್ರಾಯೋಗಿಕ ಆವೃತ್ತಿಯಲ್ಲಷ್ಟೇ ಲಭ್ಯವಿತ್ತು. 

ಈಗ ಕಲರ್ ಒಎಸ್7 ಅಧಿಕೃತವಾಗಿರುವ ರೆನೋ 3 ಪ್ರೋ ಮೊಬೈಲ್ ಹ್ಯಾಂಡ್ ಸೆಟ್ ಬಿಡುಗಡೆಯಾಗಿದ್ದು, ಯುಐ, ಇಂಟ್ಯೂಟಿವ್ ಆನಿಮೇಶನ್ ರೆನೋ 3 ಪ್ರೋ ನ ವಿಷ್ಯುವಲ್ ಎಕ್ಸ್ಪೀರಿಯನ್ಸ್ ನ್ನು ಉತ್ತಮಗೊಳಿಸಲಿದ್ದು ಶಾರ್ಟ್ ವಿಡಿಯೋಗಳಿಗೆ ಉತ್ತಮವಾಗಿರಲಿದೆ. 

ಇನ್ನು ಹೈಪರ್ ಬೂಸ್ಟ್ ಆಕ್ಸಿಲರೇಟರ್ ಸಾಫ್ಟ್ ವೇರ್ ಸ್ಪರ್ಶ ಪ್ರತಿಕ್ರಿಯೆಯನ್ನು ಶೇ.16 ರಷ್ಟು ಉತ್ತಮಗೊಳಿಸಲಿದ್ದು ಫ್ರೇಮ್ ರೇಟ್ ನ್ನು ಶೇ.38 ರಷ್ಟು ಸುಧಾರಣೆಗೊಳಿಸಲಿದೆ. ಇದರಿಂದಾಗಿ ಗೇಮಿಂಗ್ ಆಸಕ್ತಿ ಇರುವವರಿಗೆ ಉಪಯೋಗವಾಗಲಿದೆ.

ಇನ್ನು ಬಹು-ಬಳಕೆದಾರ ಮೋಡ್ ಇರುವುದರಿಂದ ವೃತ್ತಿಗೆ ಸಂಬಂಧಪಟ್ಟಿದ್ದು ಹಾಗೂ ಖಾಸಗಿ ಜೀವನಕ್ಕೆ ಸಂಬಂಧಪಟ್ಟಂತೆ ಎರಡು ಪ್ರತ್ಯೇಕ ಖಾತೆಗಳನ್ನು ನಿರ್ವಹಿಸಿಕೊಳ್ಳಬಹುದಾಗಿದೆ. ಹಾಗೆಯೇ ಖಾಸಗಿತನಕ್ಕೆ ಯಾವುದೇ ಧಕ್ಕೆಯಾಗದಂತೆ ತಮ್ಮ ಮೊಬೈಲ್ ನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬಹುದಾಗಿದೆ. 

ಬ್ರೈಟ್ ಲೈಟ್ ಮೋಡ್ ನಲ್ಲಿಯೂ ಬ್ಯಾಟರಿ ಡ್ರೈನ್ ಆಗುವುದನ್ನು ಶೇ.38 ರಷ್ಟು ಕಡಿಮೆ ಮಾಡುತ್ತದೆ ಎಂದು ಓಪ್ಪೋ ಹೇಳಿದೆ. ಮಾರ್ಚ್ 6 ರಿಂದ ಈ ಮೊಬೈಲ್ ಎಲ್ಲಾ ಓಪ್ಪೋ ಸ್ಟೋರ್ ಹಾಗೂ ಮಳಿಗೆಗಳಲ್ಲಿ ಲಭ್ಯವಿರಲಿದ್ದು, 8+128ಜಿಬಿ ಹಾಗೂ 8+256 ಜಿಬಿ ಗಳಲ್ಲಿ ದೊರೆಯಲಿದೆ. ಬೆಲೆಯನ್ನು ಅನುಕ್ರಮವಾಗಿ 29,990 ರೂಪಾಯಿ ಹಾಗೂ 32,990 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com