ಇನ್ಫಿನಿಕ್ಸ್ ಎಸ್5 ಪ್ರೊ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳು ಹೀಗಿವೆ

ಪ್ರೀಮಿಯಂ ಸ್ಮಾರ್ಟ್ ಫೋನ್ ಬ್ರಾಂಡ್ ಇನ್ಫಿನಿಕ್ಸ್ ಸಂಸ್ಥೆಯು ಪಾಪ್-ಅಪ್ ಸೆಲ್ಫಿ ಕ್ಯಾಮರಾ ಒಳಗೊಂಡಿರುವ ಎಸ್5 ಪ್ರೊ (S5 Pro) ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Published: 07th March 2020 01:52 PM  |   Last Updated: 07th March 2020 02:03 PM   |  A+A-


Infinix S5 Pro with Pop-Up selfie camera

ಇನ್ಫಿನಿಕ್ಸ್ ಎಸ್5 ಪ್ರೊ

Posted By : Prasad SN
Source : UNI

ಪ್ರೀಮಿಯಂ ಸ್ಮಾರ್ಟ್ ಫೋನ್ ಬ್ರಾಂಡ್ ಇನ್ಫಿನಿಕ್ಸ್ ಸಂಸ್ಥೆಯು ಕೇವಲ ರೂ 9,999 ಕ್ಕೆ ಪಾಪ್-ಅಪ್ ಸೆಲ್ಫಿ ಕ್ಯಾಮರಾ ಒಳಗೊಂಡಿರುವ ಎಸ್5 ಪ್ರೊ (S5 Pro) ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಉತ್ತಮ ಗುಣಮಟ್ಟದ ಪೋಟೊಗಾಗಿ ಕೃತಕ ಬುದ್ಧಿಮತ್ತೆ ಆಧಾರಿತ 16 ಎಂಪಿ ಸೆಲ್ಫಿ ಕ್ಯಾಮರಾ ಕೂಡ ಅಳವಡಿಸಲಾಗಿದೆ. 

ಕಟ್ಟಿಂಗ್ ಎಡ್ಜ್ ಟೆಕ್ನಾಲಜಿ ವೈಶಿಷ್ಟ್ಯಗಳಾದ 3ಡಿ ಗ್ಲಾಸ್ ಫಿನೀಶ್ ಡಿಸೈನ್, ವೈಫೈ ಶೇರಿಂಗ್, ಹೈಡ್ ಆ್ಯಪ್ಸ್, ಸ್ಮಾರ್ಟ್ ಪ್ಯಾನಲ್, ಡಿಜಿಟಲ್ ವೆಲ್ ಬೀಯಿಂಗ್ ಮತ್ತು 48 ಎಂಪಿ ಮೂರು ಹಿಂಬದಿ ಕ್ಯಾಮರಾ ಹೊಂದಿದೆ ಹಾಗೂ 4+64 RAM+ROM ಒಳಗೊಂಡಿದೆ. 

ಮಾರ್ಚ್ 13 ರ ನಂತರ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಗೆ ಈ ಎಸ್5 ಪ್ರೊ ಮೊಬೈಲ್ ಲಭ್ಯ. 6.53 ಇಂಚಿನ ಫುಲ್ ವಿವ್ ಎಫ್ಎಚ್ಡಿ+ ಡಿಸ್ಪ್ಲೆಹೊಂದಿದ್ದು ಡಿಟಿಎಚ್ ಎಚ್ಟಿ ಸೌಂಡ್ ಕ್ವಾಲಿಟಿಯನ್ನು ಈ ಸ್ಮಾರ್ಟ್ ಫೋನ್ ನೀಡುತ್ತದೆ. 

ಸೆಲ್ಫಿ ಪ್ರಿಯರಿಗಾಗಿ ಕೃತಕ ಬುದ್ಧಿಮತ್ತೆ ಪೋರ್ಟ್ರೆಟ್ ಮತ್ತು 3ಡಿ ಫೇಸ್ ಬ್ಯೂಟಿ ಮೋಡ್ ಅನ್ನು ಈ ಮೊಬೈಲ್ ನಲ್ಲಿ ಒದಗಿಸಲಾಗಿದೆ. ಪಾಪ್-ಅಪ್ ಕ್ಯಾಮರಾದ ಲೈಫ್ 1,50,000 ಸಾರಿ. ಅಂದರೆ ದಿನಕ್ಕೆ 50 ಸಲ ಸೆಲ್ಫಿ ಪಾಪ್-ಅಪ್ ಕ್ಯಾಮರಾ ಬಳಸಿದರೆ ಸುಮಾರು 8 ವರ್ಷಗಳ ಕಾಲ ಬಳಕೆ ಮಾಡಬಹುದು ಎಂದರ್ಥ. ಡಸ್ಟ್ ಮತ್ತು ಸ್ಪ್ಯಾಷ್ ಪ್ರೊಟಕ್ಷನ್ ಕೂಡ ಇದು ಹೊಂದಿದೆ.

4GB DDR4 RAM ಮತ್ತು 64 GB ಸ್ಟೋರೆಜ್ ಕ್ಯಾಪಸಿಟಿ ಮತ್ತು 4000 mAh ಬ್ಯಾಟರಿ ಹೊಂದಿದೆ. ಪರಿಣಾಮ 11 ಗಂಟೆಗಳ ಕಾಲ ಸತತ ವಿಡಿಯೋ, 28 ಮ್ಯೂಸಿಕ್ ಮತ್ತು 8 ಗಂಟೆಗಳ ಕಾಲ ಗೇಮ್ ಆಡಬಹುದು. ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಲಾಕರ್ ಸೌಲಭ್ಯ ಕೂಡ ಇದೆ.

Stay up to date on all the latest ಗ್ಯಾಡ್ಜೆಟ್ಸ್ news with The Kannadaprabha App. Download now
facebook twitter whatsapp