ಐಫಾಲ್ಕಾನ್ ಸಂಸ್ಥೆಯ ಆಂಡ್ರಾಯ್ಡ್ ಟಿವಿ ಮಾರುಕಟ್ಟೆಗೆ ಬಿಡುಗಡೆ

ಹೆಸರಾಂತ ಐಫಾಲ್ಕಾನ್ ಸಂಸ್ಥೆಯು ಕೃತಕ ಬುದ್ಧಿಮತ್ತೆ ಆಧಾರಿತ ಆಂಡ್ರಾಯ್ಡ್ ಟಿವಿ ಮಾದರಿಗಳಾದ ಎಫ್2ಎ ಮತ್ತು ಕೆ31 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇವುಗಳ ಆರಂಭಿಕ ಬೆಲೆಯು ಕೇವಲ ರೂ 9,999 ಆಗಿದೆ. 

Published: 20th March 2020 09:45 PM  |   Last Updated: 20th March 2020 09:46 PM   |  A+A-


iFFALCON F2A and K31 Android TV series to be available on Flipkart at a starting price of Rs 9,999

ಐಫಾಲ್ಕಾನ್ ಸಂಸ್ಥೆಯ ಆಂಡ್ರಾಯ್ಡ್ ಟಿವಿ ಮಾರುಕಟ್ಟೆಗೆ ಬಿಡುಗಡೆ

Posted By : Srinivas Rao BV
Source : UNI

ಬೆಂಗಳೂರು: ಹೆಸರಾಂತ ಐಫಾಲ್ಕಾನ್ ಸಂಸ್ಥೆಯು ಕೃತಕ ಬುದ್ಧಿಮತ್ತೆ ಆಧಾರಿತ ಆಂಡ್ರಾಯ್ಡ್ ಟಿವಿ ಮಾದರಿಗಳಾದ ಎಫ್2ಎ ಮತ್ತು ಕೆ31 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇವುಗಳ ಆರಂಭಿಕ ಬೆಲೆಯು ಕೇವಲ ರೂ 9,999 ಆಗಿದೆ. 

ಮಾರ್ಚ್ 19 ರಿಂದ 22ರ ವರೆಗೆ ಫ್ಲಿಪ್ ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. 32 ಇಂಚಿನ ಮತ್ತು 40 ಇಂಚಿನ ಎಪ್2ಎ ಮಾದರಿಗಳು ಕ್ರಮವಾಗಿ ರೂ 9,999 ಮತ್ತು16,999 ರೂಪಾಯಿಗೆ ಖರೀದಿಗೆ ಲಭ್ಯವಿದೆ. 

49 ಇಂಚಿನ ಎಫ್2ಎ , 55 ಇಂಚಿನ ಕೆ3ಎ ಮತ್ತು 65 ಇಂಚಿನ ಕೆ3ಎ ಟಿವಿ ಮಾದರಿಗಳು ಕ್ರಮವಾಗಿ ರೂ 22,999 ಹಾಗು ರೂ 34,999 ಮತ್ತು 52,999 ರೂಪಾಯಿಗೆ ಖರೀದಿಗೆ ಲಭ್ಯವಿವೆ. ಕೆ31 ಮಾದರಿಗಳ ಮೇಲೆ ಸಹ ಭಾರೀ ರಿಯಾಯಿತಿಯನ್ನು ಸಂಸ್ಥೆ ಘೋಷಿಸಿದೆ. 43 ಇಂಚಿನ, 50 ಇಂಚಿನ ಮತ್ತು 55 ಇಂಚಿನ ಕೆ31 ಟಿವಿ ಮಾದರಿಗಳು ಕ್ರಮವಾಗಿ ರೂ 20,999 ಹಾಗು ರೂ 24,999 ಮತ್ತು 27,999 ರೂಪಾಯಿಗೆ ಖರೀದಿಗೆ ಲಭ್ಯವಿವೆ.

Stay up to date on all the latest ಗ್ಯಾಡ್ಜೆಟ್ಸ್ news with The Kannadaprabha App. Download now
facebook twitter whatsapp