HP ಹೊಸ ಆಲ್-ಇನ್-ಒನ್ PC ಬಿಡುಗಡೆ: ಬೆಲೆ, ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ...

PC ಮತ್ತು TV ಗಳ ಸಾಮರ್ಥ್ಯವನ್ನು ಒಂದೇ ಸಾಧನದಲ್ಲಿ ನೀಡುವ ಆಲ್-ಇನ್-ಒನ್ PC ಗಳ ಹೊಸ ಶ್ರೇಣಿಯನ್ನು HP ಪರಿಚಯಿಸಿದೆ. 
HP ENVY 34-ಇಂಚ್ ಆಲ್-ಇನ್-ಒನ್ ಡೆಸ್ಕ್‌ಟಾಪ್ PC
HP ENVY 34-ಇಂಚ್ ಆಲ್-ಇನ್-ಒನ್ ಡೆಸ್ಕ್‌ಟಾಪ್ PC
Updated on

PC ಮತ್ತು TV ಗಳ ಸಾಮರ್ಥ್ಯವನ್ನು ಒಂದೇ ಸಾಧನದಲ್ಲಿ ನೀಡುವ ಆಲ್-ಇನ್-ಒನ್ PC ಗಳ ಹೊಸ ಶ್ರೇಣಿಯನ್ನು HP ಪರಿಚಯಿಸಿದೆ. 

ಹೊಸ ಆಲ್-ಇನ್-ಒನ್ PC ಗಳಲ್ಲಿ HP ENVY 34-ಇಂಚು ಮತ್ತು ಪೆವಿಲಿಯನ್ 31.5-ಇಂಚಿನ ಮಾನಿಟರ್ ಹೊಂದಿದ್ದು, ಇಂಟೆಲ್ 11th Gen ಮತ್ತು 12th Gen ನ ಶಕ್ತಿಯುತ ಪ್ರೋಸೆಸರ್‌ಗಳನ್ನು ಒಳಗೊಂಡಿದ್ದು, ಅದ್ಭುತ ಕಾರ್ಯಕ್ಷಮತೆ ಒದಗಿಸುತ್ತಿದೆ. ಕೆಲಸ ಮಾಡುವ, ಸೃಜನಶೀಲತೆ ಮತ್ತು ಮನರಂಜನೆ - ಹೀಗೆ ಬಹು-ಕಾರ್ಯಗಳಿಗೆ ಸೂಕ್ತವಾಗಿದೆ. ಕೆಲಸದ ನಡುವೆ ಗೇಮಿಂಗ್‌ಗೆ ಬದಲಾಯಿಸಲು ಅಥವಾ ಟಿವಿ ವೀಕ್ಷಿಸಲೂ ಆಯ್ಕೆಗಳನ್ನು ಹೊಂದಿರುವ ಈ PC ಯು ಹೈಬ್ರಿಡ್ ಪರಿಸರದಲ್ಲಿ ಹೆಚ್ಚಿದ ಉತ್ಪಾದಕತೆಗಾಗಿ AIO ಅನ್ನು ಎರಡನೇ ಪರದೆಯಾಗಿ ಬಳಸಲು ಅನುವು ಮಾಡಿಕೊಡುತ್ತದೆ.

34-ಇಂಚಿನ HP ENVY ಆಲ್-ಇನ್-ಒನ್ ಸೃಜನಶೀಲ ಅಭಿವ್ಯಕ್ತಿಗೆ ಪರಿಪೂರ್ಣ ವೇದಿಕೆಯಾಗಿದೆ. ತೀಕ್ಷ್ಣ ಪ್ರಕಾಶವಿಲ್ಲದ ಇದರ ಡಿಸ್‌ಪ್ಲೇ ಬಳಕೆದಾರರ ಕಣ್ಣುಗಳನ್ನು ಬಳಲಿಸದೆ ನಿರಂತರವಾಗಿ ಸೃಜನಶೀಲತೆಯನ್ನು ಹೊಂದಿರುವಂತೆ ಮಾಡುತ್ತದೆ. ಚಲಿಸಬಲ್ಲ ಕ್ಯಾಮೆರಾ PC ಯ ಕ್ಷಮತೆಗೆ ಹೊಂದಿಕೆಯಾಗುತ್ತಿದೆ. ಅತ್ಯುತ್ತಮ ವೀಕ್ಷಣೆಗಳಿಗಾಗಿ ಹಲವು ಸ್ಥಾನಗಳಿಗೆ ಬದಲಾಯಿಸುವ ಅನುಕೂಲವಿದೆ.

31.5-ಇಂಚಿನ HP ಪೆವಿಲಿಯನ್ ಆಲ್-ಇನ್-ಒನ್ PC ಯನ್ನು ಸುವ್ಯವಸ್ಥಿತ ಕೆಲಸದ ವಾತಾವರಣ ಮತ್ತು ಗೊಂದಲವಿಲ್ಲದ ಮನರಂಜನಾ ಅನುಭವದ ನಡುವೆ ಸುಗಮವಾಗಿ ಟಾಗಲ್ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಒಂದೇ ಜಾಗದಲ್ಲಿ, ಒಂದೇ ಸಾಧನದ ಮೂಲಕ ಕೆಲಸ, ಸೃಜನಶೀಲತೆ ಮತ್ತು ಮನರಂಜನೆಯ ಬಹು ಉದ್ದೇಶಗಳನ್ನು ಪೂರೈಸುವ ಈ PC ಹೈಬ್ರಿಡ್ ಜೀವನಶೈಲಿಗೆ ಸೂಕ್ತ ಮತ್ತು ಮಿತವ್ಯಯಕಾರಿ ಆಯ್ಕೆಯಾಗಿದೆ.

HP ENVY 34-ಇಂಚ್ ಆಲ್-ಇನ್-ಒನ್

ಡಿಸ್‌ಪ್ಲೇ

  • ನೀಲಿ ಬೆಳಕನ್ನು ಕಡಿತಗೊಳಿಸುವ ಮತ್ತು ಹೊಂದಾಣಿಕೆ ಮಾಡಬಹುದಾದ ಫಿಲ್ಟರ್ ಜತೆಗೆ, TÜV ಪ್ರಮಾಣೀಕೃತ ಡಿಸ್‌ಪ್ಲೇ.
  • 5K ಡಿಸ್‌ಪ್ಲೇ ಜತೆಗೆ 21:9 ಆಕಾರ ಅನುಪಾತವು ಸೃಜನಶೀಲ ಕೆಲಸಗಳಿಗೆ ಸೂಕ್ತವಾಗಿದೆ

ವಿನ್ಯಾಸ

  • ಬಿಚ್ಚಬಹುದಾದ, ಮ್ಯಾಗ್ನೆಟಿಕ್ ಕ್ಯಾಮರಾ ಉತ್ತಮ ಕೋನಗಳಿಗಾಗಿ ಬೇರೆ ಬೇರೆ ಸ್ಥಾನಗಳಿಗೆ ಬದಲಾಯಿಸುವ ಸುಲಭ ಅವಕಾಶವನ್ನು ಹೊಂದಿದೆ.
  • ಸುಧಾರಿತ ಕ್ಯಾಮೆರಾ ಸಂವೇದಕಗಳು ಮತ್ತು HP ವರ್ಧಿತ ಲೈಟಿಂಗ್ ವೀಡಿಯೊ ಚಾಟ್‌ಗಳನ್ನು ಆಹ್ಲಾದಕರಗೊಳಿಸುತ್ತವೆ.
  • ಬೆಳಕಿನ ಪರಿಸ್ಥಿತಿ ಬದಲಾಗುತ್ತಿದ್ದರೂ ವೀಕ್ಷಣೆ ಅನುಭವ ಮತ್ತು ಸೌಕರ್ಯವನ್ನು ಸಕ್ರಿಯಗೊಳಿಸಲು ಆಂಟಿ-ರಿಫ್ಲೆಕ್ಷನ್ ಗ್ಲಾಸ್ ಹೊಂದಿದೆ
  • ಅತ್ಯಂತ ತೆಳುವಾದ 3-ಬದಿಯ ಮೈಕ್ರೋ ಎಡ್ಜ್ ಬೆಜೆಲ್ ಡಿಸ್‌ಪ್ಲೇ ಪರಿಣಾಮಕಾರಿ ವಿನ್ಯಾಸದೊಂದಿಗೆ ಸುಂದರವಾಗಿದೆ.

ಕಾರ್ಯಕ್ಷಮತೆ

  • 11th Gen 8-Core i9 ಪ್ರೊಸೆಸರ್ ಮತ್ತು NVIDIA® GeForce RTX 3060 ಬಳಕೆದಾರರಿಗೆ ಸೃಜನಶೀಲ ಅಗತ್ಯಗಳನ್ನು ನಿಭಾಯಿಸುವ ಶಕ್ತಿಯನ್ನು ನೀಡುತ್ತದೆ
  • 16 MP ಕ್ಯಾಮೆರಾ ಬಿನ್ನಿಂಗ್ ತಂತ್ರಜ್ಞಾನ ಮತ್ತು ದೊಡ್ಡ ಸಂವೇದಕದ ಜೊತೆಗೆ ಉತ್ತಮ ಕಾಂಟ್ರಾಸ್ಟ್ ಮತ್ತು ರೆಸಲ್ಯೂಶನ್ ಹೊಂದಿದೆ.
  • HP ಕ್ವಿಕ್ ಡ್ರಾಪ್, ಅಮೆಜಾನ್ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್, HP ವರ್ಧಿತ ಲೈಟಿಂಗ್ ಮುಂತಾದವು ಸೃಜನಾತ್ಮಕ ಉತ್ಪಾದನೆಯನ್ನು ಹೆಚ್ಚಿಸುತ್ತವೆ.
  • ತಳಭಾಗದಲ್ಲಿ ಅಳವಡಿಸಲಾದ ವೈರ್‌ಲೆಸ್ ಚಾರ್ಜಿಂಗ್‌ ಸೌಲಭ್ಯ ಹೊಸ ಮಟ್ಟದ ಅನುಕೂಲವನ್ನು ಅನುಭವಕ್ಕೆ ತರುತ್ತದೆ.

HP ಪೆವಿಲಿಯನ್ 31.5-ಇಂಚ್ ಆಲ್-ಇನ್-ಒನ್

ಡಿಸ್‌ಪ್ಲೇ

  • 31.5-ಇಂಚಿನ UHD ಡಿಸ್‌ಪ್ಲೇ, HDR 400, DCI-P3 98% ಮತ್ತು QHD/sRGB 99% ಹೊಂದಿರುವ ಡಿಸ್‌ಪ್ಲೇ ಇದರ ವೈಶಿಷ್ಟ್ಯವೆನಿಸಿದೆ.
  • HP Eyesafe® ಪ್ರಮಾಣೀಕೃತವಿದ್ದು; ಫ್ಲಿಕರ್-ಫ್ರೀ TUV ಪ್ರಮಾಣೀಕೃತ; ಆಂಟಿ-ಗ್ಲೇರ್ ಪ್ಯಾನಲ್ ಹೊಂದಿದೆ

ವಿನ್ಯಾಸ

  • ENERGY STAR® ಪ್ರಮಾಣೀಕೃತವಾಗಿದೆ ಮತ್ತು EPEAT® ಸಿಲ್ವರ್‌ನಲ್ಲಿ ನೋಂದಾಯಿಸಲಾಗಿದೆ
  • ತೆಳುವಾದ ವಿನ್ಯಾಸವು ಕಡಿಮೆ ಜಾಗದಲ್ಲಿ ಹೊಂದಿಕೊಳ್ಳುತ್ತದೆ. ವೈರ್‌ಲೆಸ್ ಮೌಸ್, ಕೀಬೋರ್ಡ್ ಮತ್ತು ಚಾರ್ಜಿಂಗ್‌ ಸೌಲಭ್ಯಗಳು ವೈರ್‌ಗಳ ಅಗತ್ಯ ಇಲ್ಲದಂತೆ ಮಾಡುತ್ತದೆ.

ಕಾರ್ಯಕ್ಷಮತೆ

  • 12th Gen Intel i5 ಮತ್ತು i7 ಪ್ರೊಸೆಸರ್‌ಗಳಿಂದ ಚಾಲಿತವಾಗಿದೆ.
  • ಹಲವು HDMI ಪೋರ್ಟ್‌ಗಳ ಕಾರಣದಿಂದ ಎಲ್ಲ ಮನರಂಜನಾ ಅಗತ್ಯಗಳನ್ನು ಒಗ್ಗೂಡಿಸಬಹುದು ಮತ್ತು B&O ಮೂಲಕ ಆಡಿಯೋದಲ್ಲಿ ಹೆಚ್ಚು ತಲ್ಲೀನರಾಗಿಬಹುದು.
  • ರಿಮೋಟ್‌ನ ಯುನಿವರ್ಸಲ್ ರಿಮೋಟ್ ಸ್ವಿಚ್ ಮೇಲೆ ಒಂದು ಸಲ ಕ್ಲಿಕ್ ಮಾಡಿದರೆ ಸಾಕು, ಕೆಲಸವನ್ನು ಪ್ಲೇ ಆಗಿ ಪರಿವರ್ತಿಸುವುದು

ಬೆಲೆ

  • HP ENVY 34-ಇಂಚ್ ಆಲ್-ಇನ್-ಒನ್ ಡೆಸ್ಕ್‌ಟಾಪ್ PC ಗಳು ಸೊಗಸಾದ ಟರ್ಬೊ ಸಿಲ್ವರ್ ಬಣ್ಣದ ರೂಪಾಂತರದಲ್ಲಿ ರೂ. 1,75,999/- ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯ.
  • HP ಪೆವಿಲಿಯನ್ 31.5-ಇಂಚ್ ಆಲ್-ಇನ್-ಒನ್ ಡೆಸ್ಕ್‌ಟಾಪ್ PC ಗಳು ರೂ. 99,999/- ರ ಆರಂಭಿಕ ಬೆಲೆಯಲ್ಲಿ ಬೆರಗುಗೊಳಿಸುವ ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com