ಗಣೇಶ ರಾಕ್ಷಸ ಸಿಂಧುರಾಸುರನನ್ನು ಮರ್ಧಿಸಿದ ಕಥೆ

ಗಣೇಶನ ಪ್ರಸನ್ನ ಮುಖವನ್ನು ನೋಡಿರುವುದೇ ಹೆಚ್ಚು. ಗಣಪತಿಯು ಹೇಗೆ ತನ್ನ ಮಾರಕರೂಪದಿಂದ ರಾಕ್ಷಸರ ವಧೆಯನ್ನು ಮಾಡಿ ದೇವತೆಗಳನ್ನು ತೊಂದರೆಯಿಂದ ಪಾರು...
ಗಜಮುಖ
ಗಜಮುಖ

ಗಣೇಶನ ಪ್ರಸನ್ನ ಮುಖವನ್ನು ನೋಡಿರುವುದೇ ಹೆಚ್ಚು. ಗಣಪತಿಯು ಹೇಗೆ ತನ್ನ ಮಾರಕರೂಪದಿಂದ ರಾಕ್ಷಸರ ವಧೆಯನ್ನು ಮಾಡಿ ದೇವತೆಗಳನ್ನು ತೊಂದರೆಯಿಂದ ಪಾರು ಮಾಡಿದ ಎಂಬ ಸ್ವಾರಸ್ಯದ ಕಥೆ. 

ಸಿಂಧುರಾಸುರ ಎಂಬ ರಾಕ್ಷಸ ತುಂಬಾ ಶಕ್ತಿಶಾಲಿ. ಅವನ ಬಳಿ ದೊಡ್ಡ ಸೈನ್ಯವೊಂದಿತ್ತು. ಸಿಂಧುರಾಸು ದೇವತಗಳಿಗೆ ತೊಂದರೆ ನೀಡುತ್ತಿದ್ದ. ಋಷಿಮುನಿಗಳ ಯಾಗಗಳಿಗೆ ತೊಡಕನ್ನುಂಟು ಮಾಡುತ್ತಿದ್ದ. ಇದರಿಂದ ಬೇಸತ್ತ ದೇವತೆಗಳು ಮತ್ತು ಋಷಿಮುನಿಗಳು ಅವನನ್ನು ಮರ್ಧಿಸಬೇಕು ಎಂದು ನಿರ್ಧಾರ ಮಾಡಿದರು. ಆದರೆ ಇಷ್ಟು ದೊಡ್ಡ ರಾಕ್ಷಸನನ್ನು ಯಾರು ಸಾಯಿಸಬಹುದು ಎಂದು ಗೊತ್ತಾಗಲಿಲ್ಲ. ಆಗ ಪರಾಶರ ಋಷಿಯು ಗಣಪತಿಯ ಕಡೆ ಹೋದರು ಮತ್ತು ರಾಕ್ಷಸನನ್ನು ವಧಿಸಬೇಕೆಂದು ವಿನಂತಿಸಿದರು. 
ಗಣಪತಿಯು ಇಲಿಯ ಮೇಲೆ ಆರೂಢರಾಗಿ ರಾಕ್ಷಸನನ್ನು ವಧಿಸಲು ತನ್ನ ಸೈನ್ಯದೊಂದಿಗೆ ಹೊರಟರು. ಗಣಪತಿಯು ತನ್ನ ಸೈನ್ಯದೊಂದಿಗೆ ಬರುತ್ತಿರುವುದನ್ನು ಸಿಂಧುರಾಸುರನ ಕಾವಲುಗಾರರು ನೋಡಿ ಸಿಂಧುರಾಸುರನಿಗೆ ಹೇಳಿದರು. ನನ್ನೊಂದಿಗೆ ಯುದ್ಧಕ್ಕೆ ಬರಲು ಯಾರಿಗೆ ಧೈರ್ಯವಿದೆ ಎಂದು ಅವನಿಗೆ ತುಂಬಾ ಆಶ್ಚರ್ಯವಾಯಿತು. ಗಣಪತಿಯಂತ ಸಣ್ಣ ಹುಡುಗನು ನನ್ನೊಂದಿಗೆ ಯುದ್ಧ ಮಾಡುತ್ತನೆಂದು ತಿಳಿದು ಅವನಿಗೆ ನಗು ಬಂತು. 
ಇಷ್ಟರಲ್ಲೇ ಗಣಪತಿಯು ಅವನ ಮುಂದೆ ಬಂದು ನಿಂತರು. ಗಣಪತಿಯು ಅವನನ್ನು ಯುದ್ಧಕ್ಕೆ ಕರೆದರು. ರಾಕ್ಷಸನು ನೋಡ ನೋಡುತ್ತಿದ್ದಂತೆಯೇ ಅವನ ಮೂರುಪಟ್ಟು ದೊಡ್ಡದಾದರು. ಗಣಪತಿಯು ಅವನನ್ನು ಎತ್ತಿ ಹೊಡೆಯಲು ಪ್ರಾರಂಭಿಸಿದರು. ರಾಕ್ಷಸನು ರಕ್ತಮಯವಾಗಿದ್ದನು. ಇದನ್ನು ನೋಡಿ ರಾಕ್ಷಸ ಸೈನಿಕರು ಅಲ್ಲಿಂದ ಹೆದರಿ ಓಡಿಹೋದರು. ರಾಕ್ಷಸನ ರಕ್ತದಿಂದ ಗಣಪತಿಯು ಕೆಂಪಾಗಿ ಕಾಣುತ್ತಿದ್ದರು. ಶಕ್ತಿಶಾಲಿ ರಾಕ್ಷಸನ ವಧೆಯನ್ನು ಬಾಲ ಗಣಪತಿಯು ಮಾಡಿದರೆಂದು ಎಲ್ಲಾ ದೇವತೆಗಳು ಅವನ್ನು ಸ್ತುತಿಸಿದರು ಮತ್ತು ಜಯಕಾರ ಹಾಕಿದರು. 
ಹೀಗೆಯೇ ಅಂಗಲಾಸುರ ಎಂಬ ಒಬ್ಬ ದುಷ್ಟ ರಾಕ್ಷಸನಿದ್ದನು. ಅವನೂ ಕೂಡ ಸಿಂಧುರಾಸುರನಂತೆ ಎಲ್ಲಾರಿಗೆ ತೊಂದರೆ ನೀಡುತ್ತಿದ್ದನು. ಅಂಗಲಾಸುರನು ತನ್ನ ಬಾಯಿಂದ ಬೆಂಕಿಯನ್ನು ಎಸೆಯುತ್ತಿದ್ದರು. ಅವನ ಕಣ್ಣಿಗೆ ಕಂಡವರನ್ನೆಲ್ಲರನ್ನು ಸಾಯಿಸುತ್ತಿದ್ದನು. ಅವನ ಕಣ್ಣುಗಳಿಂದ ಬೆಂಕಿಯ ಜ್ವಾಲೆಗಳು ಬರುತ್ತಿದ್ದವು. ಅವನು ಬಾಯಿಂದ ಹೊಗೆಯನ್ನು ಬಿಡುತ್ತಿದ್ದನು. ಜನರಿಗೆ ಇದರಿಂದ ತುಂಬಾ ಭಯವಾಗುತ್ತಿತ್ತು. 
ಅಂಗಲಾಸುರನು ಈ ರೀತಿ ಅನೇಕ ಅರಣ್ಯಗಳನ್ನು ಸುಟ್ಟು ಹಾಕಿದ್ದನು. ಮನುಷ್ಯರು, ಪ್ರಾಣಿ ಪಕ್ಷಿಗಳನ್ನು ಸುಟ್ಟು ಬೂದಿ ಮಾಡಿದ್ದನು. ಗಣಪತಿಯು ಅನೇಕ ರಾಕ್ಷಸರನ್ನು ಸಾಯಿಸಿದ್ದಾನೆಂದು ಅವನಿಗೆ ತಿಳಿದಿತ್ತು. ಅವನು ಸೇಡು ತೀರಿಸಿಕೊಳ್ಳಬೇಕೆಂದು ಕಾಯುತ್ತಿದ್ದನು. ಗಣಪತಿಯನ್ನು ಸಾಯಿಸಬೇಕೆಂದು ಅವನು ಹುಡುಕುತ್ತದ್ದನು, ಆದರೆ ಗಣಪತಿಯು ಅವನಿಗೆ ಸಿಗಲಿಲ್ಲ. ಒಂದು ದಿನ ಗಣಪತಿಯು ತನ್ನ ಚಿಕ್ಕರೂಪವನ್ನು ಬದಲಾಯಿಸಿ ಅಂಗಲಾಸುರನ ಮೂರುಪಟ್ಟು ದೊಡ್ಡವನಾದನು. ಅವನನ್ನು ನೋಡಿ ರಾಕ್ಷಸನು ಹೆದರಿದನು. ಆ ರಾಕ್ಷಸನ್ನು ಕೈಯಲ್ಲಿ ಎತ್ತಿ ಗಣಪತಿಯು ಅಡಕೆಯನ್ನು ತಿನ್ನುವಂತೆ ತಿಂದರು. ಇದರಿಂದಾಗಿ ಗಣಪತಿಯು ಬೆಂಕಿ ಬೆಂಕಿಯಾದರು. ಇದನ್ನು ಶಮನ ಮಾಡಲು ದೇವತೆಗಳು ಮತ್ತು ಋಷಿಮುನಿಗಳು ಅವನಿಗೆ ದೂರ್ವೆಯನ್ನು ಹಚ್ಚಿದರು. ದೂರ್ವೆಯಿಂದ ಬೆಂಕಿಯು ತಣ್ಣಗಾಯಿತು ಮತ್ತು ಗಣಪತಿಯು ಶಾಂತವಾಗಿದ್ದರು. 
ಮುಂದೆ ಗಣಪತಿಯು ವಿಘ್ನಾಸುರ ರಾಕ್ಷಸನನ್ನು ಸಾಯಿಸಿದರು ಹಾಗಾಗಿ ಗಣಪತಿಗೆ ವಿಘ್ನೇಶ್ವರ ಎಂದು ಕರೆಯುತ್ತಾರೆ. ಮಕ್ಕಳೇ ಗಣಪತಿಯು ವಿದ್ಯೆಯ ದೇವರಾಗಿದ್ದಾರೆ. ಓದುವ ಮೊದಲು ನಾವು ಗಣಪತಿಯನ್ನು ಪ್ರಾರ್ಥಿಸಿದರೆ ನಮಗೆ ವಿದ್ಯೆಯಲ್ಲಿ ಬರುವ ಅಡಚಣೆಗಳು ದೂರವಾಗುತ್ತದೆ.
- ವಿಶ್ವನಾಥ್.ಎಸ್ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com