ಸುರೇಶ್ ಗುನಗಾ ಕೈಯಲ್ಲರಳಿದ ಗಣೇಶ

ಶ್ರೀಯುತ ಸುರೇಶ್ ಗುನಗಾ ಇವರು ಬಾಲ್ಯದಿಂದಲೇ ಮೂರ್ತಿ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಂಡಿದ್ದು ತಮ್ಮ 12ನೇ ವಯಸ್ಸಿನಿಂದಲೇ...
ಸುರೇಶ್ ಗುನಗಾ ಅವರು ಮೂರ್ತಿ ತಯಾರಿಸುತ್ತಿರುವುದು
ಸುರೇಶ್ ಗುನಗಾ ಅವರು ಮೂರ್ತಿ ತಯಾರಿಸುತ್ತಿರುವುದು
Updated on

ಉತ್ತರ ಕನ್ನಡ ಜಿಲ್ಲೆಯ  ಕುಮಟಾ ತಾಲೂಕಿನ ಕೂಜಳ್ಳಿ ಗ್ರಾಮದ ಶ್ರೀ ಸುರೇಶ್ ಗುನಗಾ ಅವರ ಕುಟುಂಬ ಗಣೇಶ ಮೂರ್ತಿ ತಯಾರಿಯಲ್ಲಿ ತೊಡಗಿದ್ದಾರೆ. ಗಣೇಶ ಚತುರ್ಥಿ ಬಂತೆಂದರೆ ಇವರ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ.  ಸರಿಸುಮಾರು ಒಂದು ತಿಂಗಳು ಮುಂಚೆಯೇ ಇವರ ಮನೆಯಲ್ಲಿ ಗಣೇಶ ಚತುರ್ಥಿಯ ಸಂಭ್ರಮ,ಸಿದ್ದತೆ ಪ್ರಾರಂಭವಾಗುತ್ತದೆ.ವಿಘ್ನ ನಿವಾರಕ ವಿನಾಯಕನನ್ನು ಭಕ್ತಿಯಿಂದ ಆರಾಧಿಸುತ್ತಾ ಮೂರ್ತಿ ತಯಾರಿಕೆಯಲ್ಲಿ ತೊಡಗುವ ಈ ಕುಟುಂಬ ಪ್ರತಿ ವರ್ಷವು ವಿಶೇಷ,ವಿಭಿನ್ನ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾ ಹೆಸರುವಾಸಿಯಾಗಿದೆ.

ಶ್ರೀಯುತ ಸುರೇಶ್ ಗುನಗಾ ಇವರು ಬಾಲ್ಯದಿಂದಲೇ ಮೂರ್ತಿ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಂಡಿದ್ದು ತಮ್ಮ 12ನೇ ವಯಸ್ಸಿನಿಂದಲೇ  ಗಣೇಶ ಮೂರ್ತಿ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂದಿಗೂ ತಮ್ಮ ಕಲೆಯನ್ನು ಉಳಿಸಿಕೊಂಡು ಬಂದಿರುವ ಇವರು ತಮ್ಮ ಮುಂದಿನ ಪೀಳಿಗೆಗೂ ಈ ಕಲೆಯನ್ನು ಕರಗತ ಮಾಡಿಸಿದ್ದಾರೆ.ಸುಮಾರು 50 ವರ್ಷಗಳಿಂದ ಮೂರ್ತಿ ತಯಾರಿಕೆಯಲಿ ತೊಡಗಿರುವ ಇವರು ಅದೆಷ್ಟೋ ಮಣ್ಣು ಮುದ್ದೆಗೆ ರೂಪ ನೀಡಿ ಜೀವ ತುಂಬಿದ್ದಾರೋ ಎಣಿಸಲಾಗದು.

 ಇಂದಿನ ಆಧುನಿಕ ತಂತ್ರಜ್ಞಾನದ ಪೈಪೋಟಿಯ ಯುಗದಲ್ಲಿ ಮೂರ್ತಿ ತಯಾರಿಕೆಯು ಸಹ ಒಂದು ಉದ್ಯಮವಾಗಿದ್ದು. ಅನೇಕ ರೀತಿಯ ತಂತ್ರಜ್ಞಾನ ಬಳಸಿ ಇಂದು ವಿಶಿಷ್ಟ,ವಿಭಿನ್ನ ಮೂರ್ತಿಗಳನ್ನು ತಯಾರಿಸುತ್ತಿದ್ದರೂ ಇವರ ನೈಜ ಕಲೆಗೆ ಆಧುನೀಕರಣ ಸರಿಸಾಟಿಯಾಗಲಾರದು. ಇದಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ಸಹ ಇವರು ತಯಾರಿಸುವ 80 ರಿಂದ 100 ಗಣೇಶ ಮೂರ್ತಿಗಳು ಭಕ್ತರ ಮನೆಯಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲ್ಪಡುತ್ತದೆ ಅಷ್ಟೇ ಅಲ್ಲದೇ ಅದರ ಜೊತೆಯಲಿ ದೊಡ್ಡ ಗಾತ್ರದ ಸಾರ್ವಜನಿಕ ಗಣೇಶ ಮೂರ್ತಿಯನ್ನು ತಯಾರಿಸುವ ಇವರು ಸದ್ಯ 4 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಕುಮಟಾದ ಮಾಸೂರ್ ಕ್ರಾಸ್,ಹಳಕಾರ್ ಕ್ರಾಸ್,ವಾಲಗಳ್ಳಿ ಹಾಗೂ ಗುಂದಾ ಸಾರ್ವಜನಿಕ ಗಣೇಶ ಮೂರ್ತಿಯು ಇವರಿಂದ ತಯಾರಿಸಲ್ಪಡುತ್ತಿದ್ದು ಪ್ರತಿ ವರ್ಷವು ವಿಶಿಷ್ಟ,ವಿಭಿನ್ನ ರೀತಿಯಲ್ಲಿ ಗಣೇಶ ಮೂರ್ತಿ ತಯಾರಿಸಿ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


 ಶ್ರೀಯುತರು 30 ವರ್ಷಗಳ ಹಿಂದೆ ಕಡುರು,ಭದ್ರಾವತಿ,ಅರಸಿಕೆರೆ,ಸಾಲಿಕೆರಿ ಮುಂತದ ಸ್ಥಳಗಳಿಗೆ ತೆರಳಿ ಗಣೇಶ ಮೂರ್ತಿ ತಯಾರಿಸಿಕೊಡುತ್ತಿದ್ದರು.ದಿನ ಕಳೆದಂತೆ ಮೂರ್ತಿ ತಯಾರಿಕೆಯು ಸಹ ಒಂದು ಉದ್ಯಮವಾಗಿ ಪರಿವರ್ತನೆ ಹೊಂದಿ ಪೈಪೋಟಿ ನೀಡಲು ಪ್ರಾರಂಭವಾಯಿತು. ಆದರೂ ಸಹ ಇಂದಿನ ದಿನದಲ್ಲಿ ಇವರು ತಮ್ಮ ಮನೆಯಲ್ಲಿಯೇ ತಮ್ಮ ಕಲೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ ಇದಕ್ಕೆ ಅವರಲ್ಲಿರುವ ಕಲೆಯ ಮೇಲಿನ ಪ್ರೀತಿ ಮತ್ತು ಅವರಲ್ಲಿರುವ ನೈಜ ಕಲೆಯೇ ಕಾರಣ.

 ತಂದೆಯವರ ಬಳುವಳಿಯೋ ಎಂಬಂತೆ ಇವರ ಇಬ್ಬರೂ ಮಕ್ಕಳೂ ಸಹ ತಂದೆಯಂತೆಯೇ ಮೂರ್ತಿ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಂಡೀದ್ದು ಮೂರ್ತಿ ತಯಾರಿಕೆಯಲ್ಲಿ ತಂದೆಯವರೊಂದಿಗೆ ಕೈ ಜೊಡಿಸಿದ್ದಾರೆ. ಹಿರಿಯ ಮಗ ಮಧು ಗುನಗಾ ಮತ್ತು ಕಿರಿಯ ಮಗ ಮಹೇಶ್ ಗುನಗಾ ಸಹ ಮೂರ್ತಿ ತಯಾರಿಕೆಯಲ್ಲಿ ನೈಪುಣ್ಯತೆ ಹೊಂದಿದ್ದು ತಂದೆಯ ಕಲಾವೃತ್ತಿಯನ್ನು ಮುಂದುವರೆಸುವ ಭರವಸೆ ಮೂಡಿಸಿದ್ದಾರೆ.
ಸ್ನೇಹಿತ ಮಹೇಶ್ ಗುನಗಾ ನೀಡಿರುವ ಮಾಹಿತಿಯ ಪ್ರಕಾರ ಮನೆಗಳಲ್ಲಿ ಪ್ರತಿಷ್ಠಾಪನೆಗೆ ತಯಾರಿಸುವ ಚಿಕ್ಕ ಗಣೇಶ ಮೂರ್ತಿಗಳನ್ನು ತಯಾರಿಸಲು 2 ರಿಂದ 3 ದಿನಗಳು ಹಾಗೂ ಸಾರ್ವಜನಿಕ ಗಣೇಶೋತ್ಸವಕ್ಕೆ  ತಯಾರಿಸುವ ದೊಡ್ಡ ಗಣೇಶ ಮೂರ್ತಿಗಳು 4 ರಿಂದ 6 ದಿನಗಳಲ್ಲಿ ತಯಾರಿಸಲ್ಪಡುತ್ತದೆ. ಚಿಕ್ಕ ಮೂರ್ತಿಗಳನ್ನು ಮನೆಯಲ್ಲಿಯೇ ತಯಾರಿಸುವ ಇವರು ಸಾರ್ವಜನಿಕ ಪ್ರತಿಷ್ಠಾಪನೆಗಾಗಿ ದೊಡ್ಡ ಮೂರ್ತಿಗಳನ್ನು ಆಯಾ ಸ್ಥಳದಲ್ಲಿಯೆ ಹೋಗಿ ತಯಾರಿಸಿಕೊಡುತ್ತಾರೆ. ತಂದೆಯವರ ಮಾರ್ಗದರ್ಶನದಂತೆ ಅವರ ಕಲೆಯ ಮುಂದುವರಿಸಿಕೊಂಡು ಹೋಗುವ ಬಯಕೆಯನ್ನು ಮಕ್ಕಳಾದ ಮಧು ಮತ್ತು ಮಹೇಶ್ ಹೊಂದಿದ್ದಾರೆ.ಕಲೆಯನ್ನೇ ಜೀವನವನ್ನಾಗಿಸಿಕೊಂಡಿರುವ ಕಲಾದೇವಿಯ ಸುಪುತ್ರರಿಗೆ ನನ್ನದೊಂದು ನಮನ. ಶ್ರೀ ಗಣೇಶನ ಕೃಪೆ ಸದಾ ಇವರು ಮತ್ತು ಇವರ ಕುಟುಂಬದ ಮೇಲಿರಲಿ ಎಂದು ಆಶಿಸುತ್ತಾ ಇವರ ಕಲೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ, ಮನ್ನಣೆ ಸಿಗಲೆಂದು ಹಾರೈಸುತ್ತೇನೆ.
                        

ಚಿತ್ರ, ಲೇಖನ: ಸುಬ್ರಹ್ಮಣ್ಯ ಮಂಜುನಾಥ ನಾಯ್ಕ.ಕುಮಟಾ
 9900134224
ಬಗ್ಗೊಣ
ಪೋ:ಕಲಭಾಗ
ತಾ:ಕುಮಟಾ(ಉತ್ತರ ಕನ್ನಡ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com