ಫೇಸ್ ಕ್ಲಿನಿಕ್

ಹಿಂದೆ ಹಿರಿಯರು ಮುಖ ಲಕ್ಷಣವನ್ನು ನೋಡಿಯೇ ಕಾಯಿಲೆ ಏನೆಂದು...
ಫೇಸ್ ಕ್ಲಿನಿಕ್

ಹಿಂದೆ ಹಿರಿಯರು ಮುಖ ಲಕ್ಷಣವನ್ನು ನೋಡಿಯೇ ಕಾಯಿಲೆ ಏನೆಂದು ಊಹಿಸುತ್ತಿದ್ದರು. ಜೀವನಾನುಭವ ಅವರನ್ನು ಪಂಡಿತರನ್ನಾಗಿಸಿತ್ತು. ಸೂಕ್ತ ಕಾಲದಲ್ಲಿ ಅವರು ನೀಡುತ್ತಿದ್ದ ಎಚ್ಚರಿಕೆಗಳು ಅನಾರೋಗ್ಯದಿಂದ ರಕ್ಷಿಸುತ್ತಿತ್ತು. ಈಗ ಅವರ ಸ್ಥಾನವನ್ನು ವೈದ್ಯರು ಆಕ್ರಮಿಸಿಕೊಂಡಿದ್ದಾರೆ. ಏನೇ ಆಗಲಿ, ಕೆಲವು ದೈಹಿಕ ಸೂಚನೆಗಳನ್ನು ನಿರ್ಲಕ್ಷಿಸಬೇಡಿ.

ಮುಖ ನೋಡಿ ಮಣೆ ಹಾಕಿ ಅನ್ನೋದು ಒಂದು ಗಾದೆ. ಆಸ್ತಿ, ಅಂತಸ್ತಿಗೆ ಸಂಬಂಧಪಟ್ಟಿದ್ದು ಬಿಡಿ. ಮುಖ ನೋಡಿ ಏನು ರೋಗ ಎಂಬುದನ್ಮೂ ಪತ್ತೆ ಹಚ್ಚಬಹುದು ಎನ್ನುತ್ತದೊಂದು ಸಂಶೋಧನೆ.

ಕೆನ್ನೆಗಳು ಕೆಂಪ್ ಕೆಂಪಾಗಿದ್ದರೆ ಅಯ್ಯೋ ನಾಚಿನೀರಾಗ್ತಿರೋದ ನೋಡು ಅಂತಾರೆ. ಅದರಿದು ಶರೀರದ ಒಳಭಾಗದ ಆರೋಗ್ಯ ಸಮಸ್ಯೆಯೂ ಹೌದು. ಮುಖ ಹೀಗಾದಲ್ಲಿ ಪಿತ್ತ ಜನಕಾಂಗದಲ್ಲಿ ಸಮಸ್ಯೆ ಎನ್ನಬಹುದು. ಮುಖದಲ್ಲಿ ಆಳವಾದ ಗೆರೆಗಳಿದ್ದರೆ ಮೂಳೆ ಸವೆತವಿದೆ. ಮಹಿಳೆಯರಿಗೂ ಬಾಲ್ಡ್ ಆಗುವ ಲಕ್ಷಣಗಳೂ ಕಾಣಿಸಿಕೊಳ್ಲುತ್ತಿವೆ. ಎಂದರೆ ಥೈರಾಯ್ಡ್ ಎಂದರ್ಥ. ಒಟ್ಟಾರೆ ಮುಖ ನೋಡಿ ಯಾವ ರೋಗ ಬೆನ್ನಟ್ಟಿದೆ ಎಂಬುದನ್ನು ಅರಿತುಕೊಳ್ಳಿ.

  • ಉಬ್ಬಿದ ಕಣ್ಣು ಥೈರಾಯ್ಡ್ ಸಮಸ್ಯೆ ಸೂಚಕ.
  • ರಕ್ತದಲ್ಲಿ ಅತಿ ಹೆಚ್ಚು ಕೊಬ್ಬಿದ್ರೆ ಕಣ್ಣಿನ ಪಾಪೆಯಲ್ಲಿ ಬೆಳ್ಳನೆಯ ವೃತ್ತಾಕಾರದ ಗೆರೆ ಮೂಡುತ್ತದೆ. ಇದಲ್ಲದೆ ಕಣ್ಣಿನ ಬಿಬಿಭಾಗದಲ್ಲಿ ಕೊಬ್ಬಿನ ಸಣ್ಣ ಕಣಗಳು ಬಿಳಿ ಮಚ್ಚೆಗಳಂತೆ ಕಾಣಿಸಿಕೊಳ್ಳಲೂಬಹುದು.
  • ರೆಪ್ಪೆ ಮೇಲೆ ಹಾಗೂ ಕಣ್ಣಿನ ಸುತ್ತ ಚರ್ಮದಲ್ಲಿ ಸಣ್ಣ ಕೊಬ್ಬಿನ, ರವೆ ಗಾತ್ರದ ಕಣಗಳು, ಮೊಡವೆಗಳು ಕಾಣಿಸಿಕೊಂಡರೂ ಕೊಲೆಸ್ಟೆರಾಲ್ ಹೆಚ್ಚಿದೆ ಎಂದರ್ಥ. ಈ ರೀತಿಯಾದಲ್ಲಿ ರಕ್ತನಾಳಗಳು ಮುಚ್ಚಿಕೊಳ್ಳುವ ಸಾಧ್ಯತೆ ಇದ್ದು, ಹೃದ್ರೋಗ ಮತ್ತು ಪಾರ್ಶ್ವವಾಯುನಂಥ ಗಂಭೀರ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ.
  • ಕಣ್ಣಿನ ರೆಪ್ಪೆ ಜೋತು ಬಿದ್ದರೆ, ರಕ್ತ ಪೂರೈಸುವ ನರಕ್ಕೆ ಹಾನಿಯಾಗಿದೆ ಎಂದರ್ಥ. ಸಾಮಾನ್ಯವಾಗಿ ನರಕ್ಕೆ ವೈರಸ್‌ನಿಂದ ಹಾನಿಯಾದಾಗ ಹೀಗಾಗುತ್ತದೆ. ವೈರಸ್‌ನಿಂದ ಊದಿಕೊಳ್ಳುವ ನರ, ಪಾರ್ಶ್ವವಾಯುವಿಗೂ ಇದು ಮಾಡಿಕೊಳ್ಳಬಹುದು.
  • ಆಮ್ಲದ ಹರಿವು ಹೆಚ್ಚಾದರೆ ಹಲ್ಲುಗಳು ಸವೆಯುತ್ತವೆ.
  • ನಾಲಗೆ ಮೇಲೆ ಕೆಲವೊಮ್ಮೆ ಸಣ್ಣ ಗುಳ್ಳೆಗಳು ಮೂಡಿ, ತಾನಾಗಿಯೇ ಮಾಯವಾಗುತ್ತವೆ. ಈ ಗುಳ್ಳೆಗಳಲ್ಲಿರುವ ಬ್ಯಾಕ್ಟೀರಿಯಾದಿಂದ ನಾಲಗೆ ಕಪ್ಪಾಗುತ್ತದೆ. ನಾಲಗೆ ಮೇಲೆ ಕೂದಲಿನಂಥ ರಚನೆಗಳೂ ಕಾಣಿಸಿಕೊಳ್ಳಬಹುದು. ಬಾಯಿ ಸ್ವಚ್ಛತೆ ಕಡಿಮೆ ಇರುವದು ಧೂಮಪಾನ ಅಥವಾ ಕೆಲವರಲ್ಲಿ ಆ್ಯಂಟಿ ಬಯೋಟಿಕ್ ಸೇವನೆಯಿಂದ ಹೀಗಾಗುತ್ತದೆ.
  • ನಾಲಗೆ ತಿಕ್ಕಿ ಸ್ವಚ್ಛಗೊಳಿಸುವುದು, ಮೌತ್‌ವಾಷ್‌ನ ಬಳಕೆಯಿಂದ ಇದಕ್ಕೆ ಮುಕ್ತಿ ಹಾಡಬಹುದು.
  • ಚರ್ಮ ಹಳದಿಯಾದರೆ ಕಾಮಾಲೆ ಎನ್ನುವುದು ಗೊತ್ತು. ಅಷ್ಟೇ ಅಲ್ಲ ಇದು ಮಧು ಮೇಹ ಹಾಗೂ ಅಧಿಕ ರಕ್ತದೊತ್ತಡದ ಸೂಚಕವೂ ಹೌದು. ಕೆಲವು ಔಷಧಿ ಸೇವನೆಯ ಅಡ್ಡ ಪರಿಣಾಮವೂ ಇರಬಹುದು. ಒಟ್ಟಿನಲ್ಲಿ ಪಿತ್ತ ಜನಕಾಂಗಕ್ಕಾದ ಗಂಭೀರ ಸಮಸ್ಯೆ ಎಂದರ್ಥ.
  • ಮುಖದಲ್ಲಿ ಕಂದು ಅಥವಾ ಬೂದು-ಕಂದು ಬಣ್ಣದ, ಮೆಲಸ್ಮಾ ಎಂಬ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಇವು ಪುರುಷರಿಗಿಂತಲೂ ಮಹಿಳೆಯರಲ್ಲಿ ಹೆಚ್ಚು. ಈ ಮಚ್ಚೆಗಳು ಬೆರಳಿನ ಉಗುರಿನಷ್ಟು ಸಣ್ಣದಾಗಿ ಅಥವಾ ಎರಡೂ ಕೆನ್ನೆಗಳನ್ನು ವ್ಯಾಪಿಸುವಷ್ಟು ದೊಡ್ಡದಾಗಿರಬಹುದು.
  • ಈಸ್ಟ್ರೇಜೆನ್ ಎಂಬ ಹಾರ್ಮೋನ್ ಇದಕ್ಕೆ ಕಾರಣ. ಗರ್ಭಿಣಿಯಾದಾಗ ಅಥವಾ ಕೆಲವು ಮಾತ್ರೆಗಳನ್ನು ತೆಗೆದುಕೊಂಡರೆ ಹೀಗಾಗಬಹುದು. ಬಿಸಿಲೂ ಕಾರಣವಾಗಬಹುದು.
  • ಮುಖದ ಮೇಲಿನ ಆಳವಾದ ಗೆರೆ ಅಥವಾ ನೆರಿಗೆಗಳು ಮೂಳೆ ಸವೆತದ ಲಕ್ಷಣ. ರಜೋನಿವೃತ್ತಿ ಅವಧಿಯ ನಂತರ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು.
  • ಕಿವಿಯಾಲೆಯಲ್ಲಿ ಅಡ್ಡಲಾದ ನೆರಿಗೆ ಅಥವಾ ಗೆರೆ ಹೃದ್ರೋಗದ ಚಿಹ್ನೆ. ಸಾಮಾನ್ಯವಾಗಿ ಈ ಲಕ್ಷಣ ಕಂಡುಬಂದರೆ, ಅಪಧಮನಿಗಳ ತೊಡಕಿನಿಂದ ಬಳಲುತ್ತಿರುತ್ತಾರೆ.
  • ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ ಇದ್ದರೆ, ಆ್ಯಂಡ್ರೋಜನ್ ಹಾರ್ಮೋನ್‌ಗಳು ಕಡಿಮೆ ಬಿಡುಗಡೆಯಾಗುತ್ತವೆ. ಅದಕ್ಕೆ ಮುಖದಲ್ಲಿ ಮೊಡವೆ. ಕೂದಲು ಕಾಣಿಸಿಕೊಳ್ಳುತ್ತದೆ.
  • ಹುಬ್ಬುಗಳು ತೆಳುವಾದರೆ, ಕೂದಲ ಗ್ರಂಥಿಗಳಿಗೆ ಅಗತ್ಯವಾದ ಹರ್ಮೋನ್ ಉತ್ಪತ್ತಿಯಾಗುತ್ತಿಲ್ಲ ಎಂದರ್ಥ.
  • ಕೆನ್ನೆಗಳು ಕೆಂಪಾಗೋದಕ್ಕೆ ರೊಸೇಸಿಯಾ (ಉರಿಯೂತದ ಕಾರಣದಿಂದ ಉಂಟಾಗುತ್ತದೆ) ಎನ್ನುತ್ತಾರೆ. ಮುಖದ ರಕ್ತನಾಳಗಳು ಉಬ್ಬಿಕೊಂಡಿರುವ ಕಾರಣವಿದು. ಇದು, ಶರೀರದ ಆಂತರಿಕ ಭಾಗದ ಸಮಸ್ಯೆಗಳ ಸೂಚಕ.
  • ಕೆನ್ನೆಗಳು ನೀಲಿ ಅಥವಾ ನೇರಳೆ ಬಣ್ಣಕ್ಕೆ ತಿರುಗಿದರೆ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿದೆ ಎಂದರ್ಥ. ಶ್ವಾಸಕೋಶಗಳಿಗೆ ರಕ್ತ ಪೂರೈಸುವ ಧಮನಿಗಳಲ್ಲಿ ಒತ್ತಡ ಹೆಚ್ಚಾದರೆ ಹೀಗಾಗುತ್ತೆ.
  • ಇದಲ್ಲದೆ ಸಣ್ಣ ಪ್ರಮಾಣದ ಕೆಂಪುದದ್ದು, ಉಬ್ಬಿದ ಮೂಗೂ ಸಹ ವಿವಿಧ ರೋಗಗಳ ಲಕ್ಷಣಗಳು.
-ಪ್ರೇಮ್ ರಾಜ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com