ಚರ್ಮದ ಜೀವಕೋಶ ಬಳಸಿ ವೀರ್ಯ, ಅಂಡಾಣು ಅಭಿವೃದ್ಧಿ

ಭಾರತೀಯ ಮೂಲದ ವಿಜ್ಞಾನಿ ಆಜಿಂ...
ಚರ್ಮದ ಜೀವಕೋಶ ಬಳಸಿ ವೀರ್ಯ, ಅಂಡಾಣು ಅಭಿವೃದ್ಧಿ

ಲಂಡನ್: ಭಾರತೀಯ ಮೂಲದ ವಿಜ್ಞಾನಿ ಆಜಿಂ ಸುರಾನಿ ನೇತೃತ್ವದ ಸಂಶೋಧಕರು ಇದೇ ಮೊದಲ ಬಾರಿಗೆ ಚರ್ಮದ ಜೀವ ಕೋಶಗಳನ್ನು ಬಳಸಿ ಪ್ರಾಥಮಿಕ ವೀರ್ಯ ಮತ್ತು ಅಂಡಾಣುಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಸಂಶೋಧನೆ ಫಲವಂತಿಕೆ(ಫರ್ಟಿಲಿಟಿ) ಚಿಕಿತ್ಸೆಯಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದೇ ನಂಬಲಾಗಿದೆ.

ಕ್ಯಾಂಬ್ರಿಡ್ಜ್ ವಿವಿ ವಿಜ್ಞಾನಿಗಳು ಮಾನವನನ್ನು 5 ದಿನಗಳ ಕಾಲ ನಿಯಂತ್ರಿತ ಪರಿಸ್ಥಿತಿಯಲ್ಲಿ ಬೆಳೆಸುವ ಮೂಲಕ ಅಂಡಾಣು ಅಭಿವೃದ್ಧಿಪಡಿಸಿದ್ದಾರೆ. ಇದೇ ಪ್ರಕ್ರಿಯೆಯಲ್ಲಿ ವಯಸ್ಕರ ಚರ್ಮಕೋಶಗಳನ್ನೂ ಅಂಡಾಣು, ವೀರ್ಯವಾಗಿ ಪರಿವರ್ತಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಈ ಜೀವಕೋಶಕಗಳೇ ಬಳಿಕ ಬಲಿತ ಅಂಡಾಣು ಹಾಗೂ ವೀರ್ಯವಾಗಿ ಬೆಳೆಯಲಿದೆ ಎಂಬುದು ವಿಜ್ಞಾನಿಗಳ ನಂಬಿಕೆ. ಮುಂದಿನ ಹಂತದಲ್ಲಿ ವಿಜ್ಞಾನಿಗಳು ಈ ಆರಂಭಿಕ ಜೀವಕೋಶಗಳನ್ನು ಇಲಿಗಳ ಅಂಡಾಶಯಕ್ಕೆ ತೂರಿಸಲಿದ್ದಾರೆ. ಅವರು ಸಂಪೂರ್ಣವಾಗಿ ಬೆಳೆದರೆ ಚರ್ಮದ ಜೀವಕೋಶಗಳನ್ನು ಕುಲಾಂತರಿ ಅಂಡಾಣು ಅಥವಾ ವೀರ್ಯಾಣು ಆಗಿ ಪರಿವರ್ತಿಸಿ ಐವಿಎಫ್ ಥೆರಪಿಗೆ ಒಳಗಾಗುವವರಿಗೆ ಬಳಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com