ಮಲ್ಟಿಪಲ್ ಎಪಿಲೆಪ್ಟಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ಯಶಸ್ವಿ ಚಿಕಿತ್ಸೆ

ಸಲ್ಮಾ ಮತ್ತು  ಕುಟುಂಬ
ಸಲ್ಮಾ ಮತ್ತು ಕುಟುಂಬ

ದುಬೈ ಮೂಲದ ಮೊಹಮ್ಮದ್ ಎಂಬುವವರು ತಮ್ಮ ಐದು ವರ್ಷದ ಪುತ್ರಿ ಸಲ್ಮಾ ಮಲ್ಟಿಪಲ್ ಎಪಿಲೆಪ್ಸಿ ಸೀಜಸರ್್ ಸಮಸ್ಯೆಯಿಂದ ಬಳುತ್ತಿರುವುದನ್ನು ಕಂಡು ಬಹಳ ಮನೊಂದಿದ್ದರು. ಒಂದುವರೆ ವರ್ಷ ವಯಸ್ಸಿನಿಂದಲೂ ಸಲ್ಮಾ ಈ ಸಮಸ್ಯೆ ಎದುರಿಸುತ್ತಿದ್ದು, ಜೊತಗೆ ಅನೈಚಿಕವಾದ ಸ್ನಾಯುಸೆಳೆತ ಹಾಗೂ ಇದ್ದಕ್ಕಿದ್ದಂತೆಯೇ ಮೂಛೆರ್ೆಹೋಗುವಂತಹ ಸಮಸ್ಯೆಗಳಿಂದ ಬಳಲಿದ್ದರು. ಈ ಸಮಸ್ಯೆಯ ಸಲುವಾಗಿ ಹಲವಾರು ಆಸ್ಪತ್ರೆಗಳಲ್ಲಿನ ನರರೋಗತಜ್ಞರ ಬಳಿ ಸಲಹೆ ಮತ್ತು ಚಿಕಿತ್ಸೆ ಪಡೆದರೂ, ವಿವಿಧ ಔಷಧಗಳನ್ನು ಬಳಕೆ ಮಾಡಿದರೂ ಆಕೆಯ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಾಣದಂತಾಯಿತು.
ಈ ಸಲುವಾಗಿ ಪಡೆಯಲಾದಂತಹ ಹಲವು ಚಿಕಿತ್ಸೆಗಳು ಫಲಕಾರಿಯಾಗದೇ ಇದ್ದ ಕಾರಣ ಸಲ್ಮಾ ಅವರ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಆರಂಭಿಸಿತು. ಇದರಿಂದಗಾಗಿ ಆಕೆಯಲ್ಲಿ ಕನಿಷ್ಠ ಕಲಿಕಾ ಹಾಗೂ ಶೈಕ್ಷಣಿಕ ಕಲಿಕೆಯ ಸಾಮಥ್ರ್ಯ ಕ್ಷೀಣಿಸುವಂತಾಯಿತು ಅಲ್ಲದೆ ಮಾತನಾಡಲು ಕಷ್ಟವಾಗುವಿಕೆಯಂತಹ ಸಮಸ್ಯೆಗಳು ಕೂಡ ಆರಂಭವಾದವು.

ಆದರೆ, ಸಲ್ಮಾ ಮತ್ತು ಅವರು ಕುಟುಂಬದವರು ಅನುಭವಿಸುತ್ತಿದ್ದ ಈ ಎಲ್ಲಾ ಸಮಸ್ಯೆಗಳು ಕೊನೆಗೂ ಅಂತ್ಯಗೊಂಡವು. ಮೊಹಮ್ಮದ್ ಅವರ ಸ್ನೇಹಿತರೊಬ್ಬರು ಬೆಂಗಳೂರಿನ ಪರಿಜ್ಮಾ ನ್ಯೂರೋಡಯೋಗ್ನಾಸ್ಟಿಕ್ಸ್ & ರಿಹ್ಯಾಬಿಲೇಷನ್ ಸೆಂಟರ್ನ ವೈದ್ಯಾಧಿಕಾರಿಗಳಾದ ಡಾ. ಸುರೇಶ್ ರಾವ್ ಅರೂರ್ ಅವರನ್ನು ಭೇಟಿ ಮಾಡುವಂತೆ ಸಲಹೆ ನೀಡಿದರು. ಪರಿಜ್ಮಾ, ಸೆರೆಬ್ರಲ್ ಪಾಲ್ಸಿ ಹಾಗೂ ಡೆವೆಲೊಪ್ಮೆಂಟಲ್ ಡಿಸ್ಸೆಬಿಲಿಟೀಸ್ ನಂತಹ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗಾಗಿ ಮೀಸಲಿರುವ ಮಲ್ಟಿಪಲ್ ಡಿಸಿಪ್ಲಿನರಿ ಟ್ರೀಟ್ಮೆಂಟ್ ಸೆಂಟರ್ ಆಗಿದೆ.
ಆರಂಭದಿಂದಲೂ ಸಲ್ಮಾ ಅವರ ಪ್ರಕರಣ ಕೊಂಚ ಸವಾಲಿನದ್ದಾಗಿತ್ತು. ಏಕೆಂದರೆ, ಆಕೆ ಲೆನಾಕ್ಸ್-ಗ್ಯಾಸ್ಟೋಟ್ ಸಿಂಡ್ರೋಮ್ ನಿಂದ ಬಳಲಿದ್ದ ಕಾರಣ ಬಹುಸ್ವರೂಪದ ರೋಗಗಳ ಸಮಸ್ಯೆ ಎದುರಿಸುತ್ತಿದ್ದರು. ಈ ರೀತಿಯ ಸಮಸ್ಯೆಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸ, ಇದೇ ವೇಳೆ ದೀರ್ಘಕಾಲದವರೆಗೆ ಆ್ಯಂಟಿ-ಎಪಿಲೆಪ್ಟಿಕ್ ಔಷಧ ಅಗತ್ಯವಿರುತ್ತದೆ. ಇನ್ನು ಆಕೆಯ ಇಜಿಜಿ (ಎಲೆಕ್ಟ್ರಿಕಲ್ ರೆಕಾಡಿಂಗ್ ಆಓ ತಹೆ ಬ್ರೇನ್ ಆಕ್ಟಿವಿಟಿ) ಕೂಡ ಸಹಜ ಸ್ಥಿತಿಯಲ್ಲಿತ್ತು, ಎಂದು ಪರಿಜ್ಮಾದಲ್ಲಿನ ನಿದರ್ೇಶಕರು ಹಾಗೂ ಪ್ರಧಾನ ಪೀಡಿಯಾಟ್ರಿಕ್ ನ್ಯೂರೊಲಾಜಿಸ್ಟ್ ಆಗಿರುವ ಡಾ. ಸುರೇಶ್ ರಾವ್ ಅರೂರ್ ಹೇಳಿದ್ದಾರೆ.

ಸಲ್ಮಾ ಅವರನ್ನು ಬೆಂಗಳೂರಿನ ಪರಿಜ್ಮಾ ಕೇಂದ್ರಕ್ಕೆ ಕರೆತಂದ ಬಳಿಕ ಪರಿಣಿತ ವೈದ್ಯಾಧಿಕಾರಿಗಳ ತಂಡವು ಚಿಕಿತ್ಸೆಯ ರೂಪುರೇಶೆಯನ್ನು ಸಿದ್ಪಡಿಸಿತು. ಪೀಡಿಯಾಟ್ರಿಕ್ ನ್ಯೂರಾಜಾಜಿಸ್ಟ್ , ಕ್ಲಿನಿಕಲ್ ಸೈಕಾಲಾಜಿಸ್ಟ್, ಸ್ಪೀಚ್ & ಆಕ್ಯುಪೇಷನಲ್ ಥೆರಪಿಸ್ಟ್ ಹೀಗೆ ಮೊದಲಾದ ಪರಿಣಿತ ವೈದ್ಯರುಗಳ ತಂಡ ಚುರುಕಿನ ಕಾಯರ್ಾಚರಣೆ ನಡೆಸಿ ಸಲ್ಮಾ ಚಿಕಿತ್ಸೆ ಸಲುವಾಗಿ ಅಗತ್ಯದ ಕ್ರಮಗಳನ್ನು ಹಾಗೂ ರೂಪುರೇಶೆಯನ್ನು ಸಿದ್ದಪಡಿಸಿ, ಬಳಕೆಗೆ ತಂದರು. ಚಿಕಿತ್ಸೆ ಫಲಕಾರಿಯಾಗಲು ತಿಂಗಳೂಗಳ ಕಾಲ ಸಮಯ ಬೇಕಾಗುತ್ತದೆ ಏಕೆಂದರೆ ಆ್ಯಂಟಿ ಎಪಿಲೆಪ್ಟಿಕ್ ಔಷಧಗಳಿಗೆ ಶರೀರ ಹೊಂದಿಕೊಳ್ಳುವ ಅಗತ್ಯವಿರುತ್ತದೆ. ಹೀಗಾಗಿ ಒಂದು ವರ್ಷ ಅವಧಿಯ ಹೊತ್ತಿಗೆ ಸಲ್ಮಾ ಅವರ ರೋಗ ಲಕ್ಷಣಗಳು ನಿಯಂತ್ರಣಕ್ಕೆ ಬಂದವು. ಆದರೆ, ಮೂಛರ್ೆ ಬೀಳುವ ಸಮಸ್ಯೆ ಮಾತ್ರವೇ ಮುಂದುವರಿದಿತ್ತು.

ಕಳೆದ ಹಲವು ವರ್ಷಗಳ ಅವಧಿಯಲ್ಲಿ ಈ ರೀತಿಯ ಎಪಿಲೆಪ್ಸಿ ಸಮಸ್ಯೆಗಳ ಚಿಕಿತ್ಸೆ ಸಲುವಾಗಿ ಅತ್ಯಾಧುನಿಕ ತಂತ್ರಜ್ಞಾನಗಳು ಬಂದಿವೆ. ಇಂದು ಕೇವಲ ಔಷದೋಪಚಾರ ಮಾತ್ರವಲ್ಲ ಸುರಕ್ಷಿತ ಶಸ್ತ್ರ ಚಿಕಿತ್ಸಾ ವಿಧಾನಗಳು ಕೂಡಾ ಲಭ್ಯವಿದ್ದು, ಸೂಕ್ತ ಕಾಲಕ್ಕೆ ಈ ಚಿಕಿತ್ಸೆಗಳು ಲಭ್ಯವಾದಲ್ಲಿ ರೋಗಿಗಳು ಉತ್ತಮ ಚೇತರಿಕೆ ಕಾಣಲು ಸಾಧ್ಯವಾಗುತ್ತದೆ. ಅಂದಹಾಗೆ ಸಲ್ಮಾ ಅವರ ಪ್ರಕರಣದಲ್ಲಿ ಔಷಧೋಪಚಾರಗಳಿಂದ ಮೂಛರ್ೆ ಸಮಸ್ಯೆ ಬಗೆಹರಿಯದೇ ಇದ್ದ ಕಾರಣಕ್ಕೆ ಶಸ್ತ್ರಚಿಕಿತ್ಸಾ ವಿಧಾನದ ಸಲಹೆ ನೀಡಿದೆವು, ಎಂದು ಡಾ. ಸುರೇಶ್ ರಾವ್ ಅರೂರ್ ವಿವರಿಸಿದ್ದಾರೆ.

ಜುಲೈ 2011, ಸಲ್ಮಾ ಅವರು ಕಾರ್ಪಸ್ ಕಾಲ್ಲೊಸ್ಟೊಮಿ (ಮಿದುಳಿನ ಒಂದು ಭಾಗವನ್ನು ನಿಷ್ಕ್ರಿಯೆ ಮಾಡುವುದು) ಚಿಕಿತ್ಸೆಗೆ ಒಳಪಟ್ಟರು. ಈ ಚಿಕಿತ್ಸೆ ಪಡೆಉ ಇದೀಗ ಮೂರು ವರ್ಷಗಳು ಕಳೆದಿದೆ. ಸಲ್ಮಾ ಮೂಛರ್ೆ ರೋಗದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನು ದಿನನಿತ್ಯ ಸೇವಿಸುತ್ತಿರುವಂತಹ ಆ್ಯಂಟಿ ಎಪಿಲೆಪ್ಟಿಕ್ ಔಷಧಗಳ ಪ್ರಮಾಣ ಕೂಡ 6 ರಿಂದ 2ರ ಪ್ರಮಾಣದ ವರೆಗೆ ತಗ್ಗಿಸಲಾಗಿದೆ. ಇನ್ನು ಪರಿಜ್ಮಾದಲ್ಲಿ ಆಕೆ ಪಡೆದಂತಹ ಸ್ಪೀಚ್ ಮತ್ತು ಬಿಹೇವಿಯರಲ್ ಥೆರಪಿಯಿಂದಾಗಿ ಮಾತನಾಡಲು ಹಾಗೂ ಹಾವಭಾವಗಳಲ್ಲಿನ ಸಮಸ್ಯೆಗಳಿಂದಲೂ ಸಂಪೂರ್ಣ ಮುಕ್ತಿ ಪಡೆಯಲು ಸಾಧ್ಯವಾಗಿದೆ.

ಪರಿಜ್ಮಾದಲ್ಲಿ ಒಂದು ವರ್ಷಗಳ ಯಶಸ್ವೀ ಚಿಕಿತ್ಸೆ ಪಡೆದ ನಂತರ ನನ್ನ ಹುಟ್ಟೂರಾದ ಕೇರಳಕ್ಕೇ ಬಂದು ನೆಲೆಸಲು ನಿರ್ಧರಿಸಿದೆ. ಇದೇ ವೇಳೆ ಹಣಕಾಸಿನ ಸಮಸ್ಯೆ ಕೂಡಾ ಸಾಕಷ್ಟು ಕಾಡಿತು. ಆದರೆ, ಇಂದು ನನ್ನ ಮಗಳು ಗುಣಮುಖಳಾಗಿರುವುದನ್ನು ಕಂಡು ನನ್ನ ಜೀವನದಲ್ಲಿನ ಅತ್ಯಂತ ಮಹತ್ವದ ನಿಧರ್ಾರವನ್ನೇ ತೆಗೆದುಕೊಂಡಿದ್ದೇನೆ ಎಂದೆನಿಸಿತು, ಎಂದು ಧನ್ಯತಾಭಾವದಲ್ಲಿ ಮೊಹಮ್ಮದ್ ಅವರು ಮಾತನಾಡಿದರು.

ಹಲವು ವಿಧದ ಎಪಿಲೆಪ್ಸಿ ಸಿಂಡ್ರೋಮ್ ಅಥವಾ ಎಪಿಲೆಪ್ಸಿಯ ಉಪವಿಧಗಳಿವೆ. ಇವು ಅತ್ಯಂತ ಗಂಭೀರವಾದ ಸಮಸ್ಯೆಗಳಾಗಿರುತ್ತದೆ. ಆದ್ದರಿಂದಲೇ ಕೇವಲ ಔಷಧಗಳಿಂದ ಇದನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದಲೇ ಶಸ್ತ್ರ ಚಿಕಿತ್ಸೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಸಲ್ಮಾ ರೀತಿಯ ಹಲವು ಪ್ರಕರಣಗಳಿಗೆ ಪರಿಜ್ಮಾದಲ್ಲಿ ಯಶಸ್ವೀ ಚಿಕಿತ್ಸೆ ನೀಡಲಾಗಿದೆ. ಒಬ್ಬ ಪೀಡಿಯಾಟ್ರಿಕ್ ನ್ಯೂರೊಲಾಜಿಸ್ಟ್ ಆಗಿ ಎಪಿಲೆಪ್ಸಿಯ ಯಾವ ವಿಧದ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಹೊಂದಿಕೊಳ್ಳುತ್ತದೆ ಎಂಬುದನ್ನು ಗುರುತಿಸುವುದು ಅತ್ಯಂತ ಮಹತ್ವದ್ದಾಗಿರುತ್ತದೆ. ಸೂಕ್ತ ಸಮಸಯಕ್ಕೆ ಶಸ್ತ್ರಚಿಕಿತ್ಸೆ ಪಡೆದುಕೊಳ್ಳುವವರು ಮೂಛರ್ೆ ರೋಗದ ಸಮಸ್ಯೆಯಿಂದ ಮುಕ್ತರಾಗುವುದಲ್ಲದೆ, ಅವರು ಸೇವಿಸುವಂತಹ ಔಷಧ ಪ್ರಮಾಣವನ್ನೂ ತಗ್ಗಿಸಲು ಸಾಧ್ಯವಾಗುತ್ತದೆ, ಎಂದು ಡಾ. ಸುರೇಶ್ ರಾವ್ ಅರೂರ್ ವಿವರಿಸಿದ್ದಾರೆ.

ಆನ್ಮಜಾತವಾಗಿ ಬರುವಂತಹ ಉಸಿರಾಟದ ಸಮಸ್ಯೆ ಅಥವಾ ಪೆರಿನಾಟಲ್ ಸಮಸ್ಯೆಗಳಿಂದಾಗಿ ಎಪಿಲೆಪ್ಸಿಗೆ ತುತ್ತಾಗುವ ಮಕ್ಕಳು, ಮಾನಸಿಕವಾಗಿ ಬೆಳವಣಿಗೆ ಕಾಣುವುದರಲ್ಲಿ ಹಿನ್ನಡೆ ಸನುಭವಿಸುತ್ತಾರೆ, ಇದರಿಂದಾಗಿ ಶೈಕ್ಷಣಿಕ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಆದ್ದರಿಂದಲೇ ಈ ರೀತಿಯ ಮಕ್ಕಳಿಗೆ ಸೂಕ್ತ ರೀತಿಯ ಚಿಕಿತ್ಸೆ ಒದಗಿಸಲು ಪರಿಣಿತ ವೈದ್ಯಾಧಿಕಾರಿಗಳ ತಂಡದ ಅಗತ್ಯವಿರುತ್ತದೆ ಪೀಡಿಯಾಟ್ರಿಕ್ ನ್ಯೂರೊಲಾಜಿಸ್ಟ್, ಚೈಲ್ಡ್ ಸೈಕಾಲಜಿಸ್ಟ್, ಆಕ್ಯುಪೇಷನಲ್ ಥೆರಪಿಸ್ಟ್ ಹಾಗೂ ಸ್ಪೀಚ್ ತೆರಪಿಸ್ಟ್ಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿರುತ್ತದೆ.

ಮಕ್ಕಳಲ್ಲಿನ ಎಪಿಲೆಪ್ಸಿ ಸಮಸ್ಯೆಗೆ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡುವುದು ಅತ್ಯಗತ್ಯ. ಇಲ್ಲದಿದ್ದ ಮಗು ಬಹು ಸ್ವರೂಪದ ರೋಗಗಳ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕಲಿಕೆಯಲ್ಲಿ ಹಿಂದುಳಿಯುವುದು, ಮೂಛರ್ೆ ಹೋಗುವಿಕೆ, ಮೊದಲಾದ ಸಮಸ್ಯೆ ಆಡುತ್ತದೆ. ಇನ್ನು ಮೆಟ್ಟಿಲೇರುವಾಗ ಅಥವಾ ಈಜುವಂತಹ ಸಂದರ್ಭಗಳಲ್ಲಿಯೂ ಕೂಡ ಇದ್ದಕ್ಕಿದ್ದಂತೆಯೇ ಮೂಛರ್ೆಹೋಗುವ ಸಾಧ್ಯತೆಗಳಿರುತ್ತದೆ. ಇನ್ನು ಸಂವಹನ ಸಂದರ್ಭದಲ್ಲಿನ ಹಾವ ಭಾವಗಳ ಸಮಸ್ಯೆ ಹಾಗೂ ಪ್ರಮುಖವಾಗಿ ಪದೇ ಪದೇ ಮೂಛರ್ೆ ಬೀಳುವುದರಿಂದ ಮಗುವಿನ ಆತ್ಮವಿಶ್ವಾಸ ಕುಂದಿಹೋಗುತ್ತದೆ, ಎಂದು ಡಾ. ಅರೂರ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com