ಡಯಾಬಿಟಿಸ್ ನಿಂದ ದೂರ ಇಡುವ ಕಾಫಿ ಸೇವನೆ

ಕಾಫಿ ಸೇವನೆ ಬೊಜ್ಜು ಸಂಬಂಧಿ ರೋಗಗಳಿಂದ ದೂರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಶಿಂಗ್ ಟನ್: ಕಾಫಿ ಸೇವನೆ ಬೊಜ್ಜು ಸಂಬಂಧಿ ರೋಗಗಳಿಂದ ದೂರ ಇಡಲು ಸಹಕಾರಿ ಎಂದು ಹೊಸ ಅಧ್ಯಯನ ತಿಳಿಸಿದೆ.

ಜಾರ್ಜಿಯಾ ವಿಶ್ವವಿದ್ಯಾಲಯದವರು ನಡೆಸಿದ ಅಧ್ಯನದ ಪ್ರಕಾರ, ಕಾಫಿಯಲ್ಲಿರುವ ಕ್ಲೋರೋಜೆನಿಕ್ ಆಸಿಡ್ ಅಥವಾ ಸಿಜಿಎ ಬೊಜ್ಜು ಆಹಾರವನ್ನು ತಿಂದ ಇಲಿಗಳಲ್ಲಿ, ಪಿತ್ತಜನಕಾಂಗದಲ್ಲಿನ ಬೊಜ್ಜು ಶೇಖರಣೆಯನ್ನು ಮತ್ತು ಇನ್ಸ್ಲುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸದೆ.

ಈ ಅಧ್ಯಯನ ನಡೆಸಿದ ವಿಜ್ಞಾನಿಗಳಲ್ಲೊಬ್ಬರಾಗ ಯೋಂಗ್ಜಿ ಮ ತಿಳಿಸುವ ಹಾಗೆ, ಈ ಹಿಂದೆ ನಡೆಸಿದ ಅಧ್ಯಯನಗಳ ಪ್ರಕಾರ ಕಾಫಿ ಸೇವೆನೆ ಡಯಾಬಿಟಿಸ್ ಟೈಪ್-೨ ಮತ್ತು ಹೃದಯ ಸಂಬಂಧಿ ರೋಗದ ಅಪಾಯಗಳನ್ನು ಕಡಿಮೆ ಮಾಡುತ್ತವೆ ಎಂದು ತಿಳಿಸಿತ್ತು. ಈಗ ನಾವು ನಡೆಸಿರುವ ಅಧ್ಯಯನ ಕಾಫಿ ಮತ್ತು ಇತರೆ ತರಕಾರಿ ಹಣ್ಣುಗಳಾದ ಸೇಬು, ಪಿಯರ್ಸ್, ಟೊಮ್ಯಾಟೊಗಳು ಮತ್ತು ಬ್ಲೂಬೆರ್ರಿಗಳಲ್ಲಿ ಹೇರಳವಾಗಿ ದೊರಕುವ ಒಂದು ನಿರ್ಧಿಷ್ಟ ವಸ್ತುವಿನ ಪ್ರಯೋಜನಗಳ ಬಗ್ಗೆ ಸಂಸೋಧನೆ ನಡೆದಿದೆ ಎಂದಿದ್ದಾರೆ.

ಅತಿ ಹೆಜ್ಜು ಬೊಜ್ಜಿರುವ ಇಲಿಗಳ ಮೇಲೆ ೧೫ ದಿನಗಳವರೆಗೆ ಸಿಜಿಎ ದ್ಯವ್ಯವನ್ನು ದಿನಕ್ಕೆರಡು ಬಾರಿ ಚುಚ್ಚುಮದ್ದಿನ ಮೂಲಕ ಹಾಕಿದ ಮೇಲೆ ಅವುಗಳು ತೂಕ ಗಳಿಸುವುದು ಕಡಿಮೆಯಾಗಿದೆ ಮತ್ತು ಅವುಗಳಲ್ಲಿ ಸಕ್ಕರೆ ಅಂಶ ಸಹಜ ಹಂತಕ್ಕೆ ಬಂದದ್ದಲ್ಲದೆ ಯಕೃತ್ತು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com