
ಕೊಚ್ಚಿ: ಲೇಸರ್ ತಂತ್ರಜ್ಞಾನದೊಂದಿಗೆ ಕ್ಯಾನ್ಸರ್ ರೋಗದ ಚಿಕೆತ್ಸೆಯ ರೂಪವನ್ನೇ ಬದಲಾವಣೆ ಮಾಡಬಲ್ಲ ಮತ್ತು ಸಂವಹನ ತಂತ್ರಜ್ಞಾನದಲ್ಲಿ ಹೊಸ ಅಲೆಗಳನ್ನು ಉಂಟುಮಾಡಬಲ್ಲ ಹೊಸ ಆವಿಷ್ಕಾರ ಭಾರತದಲ್ಲಿ ನಡೆಯುತ್ತಿದೆ ಎಂದು ಬಾಬಾ ಪರಮಾಣು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ, ರಸಾಯನ ಶಾಸ್ತ್ರ ವಿಭಾಗದ ನಿರ್ದೇಶಕ ಡಾ. ಬಿ ಎನ್. ಜಗ್ತಾಪ್ ತಿಳಿಸಿದ್ದಾರೆ.
ಅರಕ್ಕುನ್ನಂ ನ ಟಿ ಒ ಸಿ- ಎಚ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಯಲ್ಲಿ ಲೇಸರ್ ಮತ್ತು ಸಂವಹನ ಕ್ಷೇತ್ರದ ಹೊಸ ಆವಿಷ್ಕಾರಗಳ ಮೇಲೆ ನಡೆದ ೩ ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಜಗ್ತಾಪ್ ಈ ವಿಷಯ ತಿಳಿಸಿದ್ದಾರೆ.
Advertisement