ಹೆಚ್ಚಳ ಕಂಡ ಮಕ್ಕಳ ಡಯಾಬಿಟಿಸ್

ಮಕ್ಕಳ ಡಯಾಬಿಟಿಸ್ ಬಗ್ಗೆ ತಿಳುವಳಿಕೆ ಹರಡಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಕ್ಕಳ ಡಯಾಬಿಟಿಸ್ ಬಗ್ಗೆ ತಿಳುವಳಿಕೆ ಹರಡಲು, ೫೦೦ ಕ್ಕೂ ಹೆಚ್ಚಿನ ವೈದ್ಯರು ಒಟ್ಟಿಗೆ ಬಂದು "ನೀಲಿ ವೃತ್ತ"ವನ್ನು ರಚಿಸಿದರು. ನೀಲಿವೃತ್ತ ಡಯಾಬಿಟಿಸ್ ನ ಸಾರ್ವತ್ರಿಕ ಚಿಹ್ನೆ.

ಭಾರತದಲ್ಲಿ ಡಯಾಬಿಟಿಸ್ ಅಧ್ಯಯನದ ಸಂಶೋಧನಾ ಸಂಸ್ಥೆ (ಆರ್ ಎಸ್ ಎಸ್ ಡಿ ಐ) ಆಯೋಜಿಸಿದ್ದ ಬೆಂಗಳೂರಿನ ವಾರ್ಷಿಕ ಸಮಾವೇಶದಲ್ಲಿ ಈ ವೈದ್ಯರು ಭಾಗವಹಿಸಿದ್ದರು.

ರ್ಯಾನ್ ಬಾಕ್ಸಿ ಸಂಸ್ಥೆಯ ಭಾರತ ವಿಭಾಗದ ಮುಖ್ಯಸ್ಥ ರಾಜೀವ್ ಸಿಬಲ್, "ರೋಗದ ತಿಳುವಳಿಕೆಯ ಕೊರತೆಯಿಂದಾಗಿ ಮಕ್ಕಳ ಟೈಪ್ ೧ ಡಯಾಬಿಟಿಸ್ ಅನ್ನು ಸರಿಯಾದ ಸಮಯಕ್ಕೆ ಪತ್ತೆ ಹಚ್ಚುವುದಿಲ್ಲ. ಭಾರತದಲ್ಲಿ ಸುಮಾರು ೭೦೦೦೦ ಮಕ್ಕಳಿಗೆ ಟೈಪ್ ೧ ಡಯಾಬಿಟಿಸ್ ಇದೆ. ನಾವು ನೀಲಿ ವೃತ್ತ ನಿರ್ಮಿಸಿದ ಉದ್ದೇಶವೆಂದರೆ ಸಮಾಜದಲ್ಲಿ ಹೆಚ್ಚುತ್ತಿರುವ ಡಯಾಬಿಟಿಸ್ ಅದರಲ್ಲೂ ಮಕ್ಕಳ ಡಯಾಬಿಟಿಸ್ ಬಗ್ಗೆ ತಿಳುವಳಿಕೆ ಮೂಡಿಸುವುದಕ್ಕೆ. ಡಯಾಬಿಟಿಸ್ ದೊಡ್ಡವರಿಗೆ ಮಾತ್ರ ಬರುತ್ತದೆ, ಮಕ್ಕಳಿಗಲ್ಲ ಎಂಬ ತಪ್ಪು ತಿಳುವಳಿಕೆ ಜನರ ಮಧ್ಯೆ ಇದೆ" ಎಂದಿದ್ದಾರೆ.

ಈ ಸಮಾವೇಶದಲ್ಲಿ ೬೦೦೦ ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು. ನೀಲಿ ವೃತ್ತ ನಿರ್ಮಿಸಿದ ವೈದ್ಯರ ಪರವಾಗಿ ಆರ್ ಎಸ್ ಎಸ್ ಡಿ ಐ ಮತ್ತು ರ್ಯಾನ್ ಬಾಕ್ಸಿ, ಡಯಾಬಿಟಿಸ್ ಪೀಡಿತ ಮಗುವನ್ನು ದತ್ತು ತೆಗೆದುಕೊಂಡು ಒಂದು ವರ್ಷದ ವರೆಗೆ ಅವರ ಇನ್ಸುಲಿನ್ ಅವಶ್ಯಕತೆಯನ್ನು ಪೂರೈಸಲಿವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com