ಅನಿರೀಕ್ಷಿತ ಸಂಭೋಗ ವೀರ್ಯಾಣು ವೃದ್ಧಿಗೆ ಸಹಕಾರಿ

ವೀರ್ಯಾಣುಗಳ ಗುಣಮಟ್ಟ ಮತ್ತು ಸಂಖ್ಯೆ ವೃದ್ಧಿಸಿಕೊಳ್ಳಬೇಕೆ? ಹೊಸ ಸಂಗಾತಿಯೊಂದಿಗೆ ಯಾವುದೇ ಯೋಜನೆಯಿಲ್ಲದ ಆಕಸ್ಮಿಕ ಸಂಭೋಗ ಪ್ರಯತ್ನಿಸಿ ಎನ್ನುತ್ತದೆ ನೂತನ ಅಧ್ಯಯನವೊಂದು!
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ವೀರ್ಯಾಣುಗಳ ಗುಣಮಟ್ಟ ಮತ್ತು ಸಂಖ್ಯೆ ವೃದ್ಧಿಸಿಕೊಳ್ಳಬೇಕೆ? ಹೊಸ ಸಂಗಾತಿಯೊಂದಿಗೆ ಯಾವುದೇ ಯೋಜನೆಯಿಲ್ಲದ ಆಕಸ್ಮಿಕ ಸಂಭೋಗ ಪ್ರಯತ್ನಿಸಿ ಎನ್ನುತ್ತದೆ ನೂತನ ಅಧ್ಯಯನವೊಂದು!

ಪರಿಚಿತ ಮಹಿಳೆಗಿಂತಲೂ, ಆಕಸ್ಮಿಕ-ಗೊತ್ತಿಲ್ಲದ ಮಹಿಳೆಯೊಂದಿಗೆ ಪುರುಷರು ಒಳ್ಳೆಯ ಗುಣಮಟ್ಟದ ವಿರ್ಯಾಣುಗಳನ್ನು ಹೊರಸೂಸುತ್ತಾರೆ ಎಂದು ಸಂಶೋಧಕರು ಗಮನಿಸಿದ್ದಾರೆ.

"ಅಲ್ಲದೆ ಒಬ್ಬ ಮಹಿಳೆಯ ಸಂಪರ್ಕಕ್ಕೆ ಹಲವಾರು ಬಾರಿ ಬಂದ ಪುರುಷನಿಗೆ ಹೊಸ ಮಹಿಳೆಯ ಪರಿಚಯವಾದಾಗ ಅತಿ ಬೇಗನೆ ವಿರ್ಯಾಣುಗಳನ್ನು ಹೊರಹೊಮ್ಮುತ್ತಾನೆ" ಎಂದು ಕೂಡ ಒಹಿಯೋದ ವೂಸ್ಟರ್ ಕಾಲೇಜಿನ ತಂಡ ತಿಳಿಸಿದೆ.

ಎವಲ್ಯೂಶನರಿ ಸೈಕಲಾಜಿಕಲ್ ಸೈನ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಅಧ್ಯಯನದಲ್ಲಿ, ಪುರುಷ ಮತ್ತು ಮಹಿಳೆ ಸಂಭೋಗ ನಡೆಸುತ್ತಿರುವ ಮೂರು ನಿಮಿಷದ ಏಳು ವಿಡಿಯೋ ಕ್ಲಿಪ್ ಗಳನ್ನು  ನೋಡಿ ತಮ್ಮ ವೀರ್ಯಾಣು ಮಾದರಿ ಒದಗಿಸುವಂತೆ ೨೧ ಜನಕ್ಕೆ ತಂಡ ತಿಳಿಸಿತ್ತು.

ಒಂದೇ ಖಾಸಗಿ ಕೊಠಡಿಯಲ್ಲಿ ಈ ಪರೀಕ್ಷೆ ನಡೆದಿದ್ದು, ವಿರ್ಯಾಣು ಮಾದರಿಗಳನ್ನು ನೀಡಲು ಪುರುಷರು ೪೮ ರಿಂದ ೭೨ ಘಂಟೆ ವಿರಾಮ ತೆಗೆದುಕೊಂಡು ಮತ್ತೆ ಮತ್ತೆ ಏಳು ವಿಡಿಯೋ ಕ್ಲಿಪ್ ಗಳನ್ನು ವೀಕ್ಷಿಸಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.

ಮೊದಲ ಆರು ವಿಡಿಯೋ ಕ್ಲಿಪ್ ಗಳಲ್ಲಿ ಅದೇ ಪುರುಷ ಮತ್ತು ಮಹಿಳೆ ಸಂಭೋಗ ನಡೆಸಿದ್ದು, ಏಳನೇ ಕ್ಲಿಪ್ ನಲ್ಲಿ ಮಹಿಳೆಯನ್ನು ಬದಲಿಸಲಾಗಿದೆ.

ವಿರ್ಯಾಣುಗಳ ಗುಣಮಟ್ಟ ಅಲ್ಲದೆ, ವೀರ್ಯಾಣು ಹೊರಸೂಸಲು ತೆಗೆದುಕೊಂಡ ಸಮಯವನ್ನು ಕೂಡ ದಾಖಲು ಮಾಡಲಾಗಿದೆ.

ಏಳನೇ ವಿಡಿಯೋ ಕ್ಲಿಪ್ ನೋಡಿದ ನಂತರ ಪುರುಷರು ಆರೋಗ್ಯಕರ, ಹಾಗು ಹೆಚ್ಚಿನ ಸಂಖ್ಯೆಯ ವೀರ್ಯಾಣುಗಳನ್ನು ಕಡಿಮೆ ಸಮಯದಲ್ಲಿ ಹೊರಸೂಸಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

"ಹೆಚ್ಚಿನ ಸಂಖ್ಯೆಯ ಚಲನಶೀಲ ವೀರ್ಯಾಣುಗಳ ಉತ್ಪತ್ತಿಯಿಂದ ಸಂತಾನಶಕ್ತಿಯೂ ವೃದ್ಧಿಯಾಗುತ್ತದೆ" ಎಂದು ಕೂಡ ಅಧ್ಯಯನ ಯಿಳಿಸಿದೆ.

ಆದರೆ ವಿರ್ಯಾಣು ಉತ್ಪತ್ತಿಯ ಸಮಯ ಕಡಿಮೆಯಾದಂತೆ, ಸಂಗಾತಿಯೊಂದಿಗಿನ ಹೆಚ್ಚುವರಿ ಸಂಭೋಗ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೂಡ ತಿಳಿಯಲಾಗಿದೆ.

ಈ ಅಧ್ಯಯನದಿಂದ ಸಂತಾನಹೀನತೆ ತೊಂದರೆಗಳಿಗೆ ಚಿಕತ್ಸೆ ಕಂಡುಹಿಡುಹಿಡಿಯಲು ಸಹಕಾರಿ ಎನ್ನಲಾಗಿದೆ. "ಏಕೆಂದರೆ ಸಾಮನ್ಯವಾಗಿ ಸಂತಾನಹೀನತೆಗಾಗಿ ವಿರ್ಯಾಣು ಮಾದರಿಗಳನ್ನು ಸಂಗ್ರಹಿಸುವಾಗ ಇತರ ಮಹಿಳೆಯ ಫೋಟೊಗಳನ್ನೇ ಬಳಸಲಾಗುತ್ತದೆ".

"ಅನಿರೀಕ್ಷಿತ ಮಹಿಳೆಯ ಉದ್ರೇಕದಿಂದ ಪುರುಷನ ವಿರ್ಯಾಣು ಉತ್ಪತ್ತಿ ಬದಲಾಗುತ್ತದೆ ಎಂದು ನಮ್ಮ ಅಧ್ಯಯನ ತಿಳಿಸುತ್ತದೆ" ಎಂದಿದ್ದಾರೆ ಸಂಶೋಧಕರು.

ವಿಶೇಷ ಸೂಚನೆ: ಅನಿರೀಕ್ಷಿತ ಸಂಭೋಗ ಅಪಾಯಕಾರಿ ಮತ್ತು ಎಚ್ಚರಿಕೆ ಅಗತ್ಯ. ಇದು ಅಧ್ಯಯನದ ವಿವರಣೆ ಅಷ್ಟೇ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com