
ಲಂಡನ್: ಅತಿ ಹೆಚ್ಚು ಇಂಟರ್ ನೆಟ್ ಗೀಳಿನಿಂದ ಮಾನವನ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ಬ್ರಿಟನ್ ನ ಸ್ವಾನ್‌ಸೀ ವಿಶ್ವವಿದ್ಯಾಲಯದ ಸಂಶೋಧನಾ ವರದಿ ಎಚ್ಚರಿಸಿದೆ.
ಇಂಟರ್ ನೆಟ್ ನಲ್ಲೇ ಅತಿ ಹೆಚ್ಚು ಸಮಯ ಕಳೆಯುವವರು ಇಂಟರ್ ನೆಟ್ ಬಳಸದೇ ಇರುವವರಿಗಿಂತಲೂ ಶೀಘ್ರವಾಗಿ ಶೀತಗಳ ಮತ್ತು ಜ್ವರದಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ. ಒಬ್ಬರೇ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದರಿಂದ ಹೊರಗಿನ ಜನರೊಂದಿಗೆ ಸಂಪರ್ಕ ಕಡಿಮೆಯಾಗಿ, ಅವರಲ್ಲಿನ ಸೂಕ್ಷ್ಮಜೀವಿಗಳೊಂದಿಗಿನ ಸಂಪರ್ಕ ಕಡಿಮೆಯಾಗುವುದರಿಂದ ದೇಹದಲ್ಲಿರುವ ಪ್ರತಿರೋಧಕ ಶಕ್ತಿ ಕುಗ್ಗುತ್ತದೆ.
ಇಂಟರ್ ನೆಟ್ ನಿಂದ ವ್ಯಕ್ತಿಯ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಅಂಶಗಳು ಇತರ ಅಂಶಗಳಿಗಿಂತಲೂ ವಿಭಿನ್ನವಾಗಿವೆ. ಅಂತರ್ಜಾಲಕ್ಕೆ ಅಡಿಕ್ಟ್ ಆಗಿರುವವರು ನೆಟ್ ಸಂಪರ್ಕ ಕಡಿದುಹೋದರೆ ಅತಿ ಹೆಚ್ಚು ಒತ್ತಡದಿಂದ ಬಳಲುತ್ತಾರೆ. ಇದರಿಂದಾಗಿ ಪ್ರತಿರೋಧಕ ಕ್ರಿಯೆ ನಡೆಸಲು ಕಾರಣವಾಗಿರುವ ಹಾರ್ನ್ಮೋನ್ ಮೇಲೆ ಪ್ರತಿಕೂಲ ಪರಿಣಾಮ ಉಂತಾಗಲಿದೆ ಎಂದು ಸ್ವಾನ್ ಸೀ ವಿಶ್ವವಿದ್ಯಾನಿಲಯದ ಸಂಶೋಧನಾ ತಂಡದಲ್ಲಿದ್ದ ಪ್ರಾಧ್ಯಾಪಕರು ತಿಳಿಸಿದ್ದಾರೆ.
ಇಂಟರ್ ನೆಟ್ ನಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮದಿಂಅವನ್ನು ತಿಳಿಯಲು ಸುಮಾರು 18 -101 ವಯಸ್ಸಿನವರೆಗಿನ ಸುಮಾರು 500 ಜನರನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ಇಂಟರ್ ನೆಟ್ ಕಡಿಮೆ ಬಳಸುವವರಿಗಿಂತಲೂ ಹೆಚ್ಚು ಬಳಸುವವರು ಅತಿ ವೇಗವಾಗಿ ಅನಾರೋಗ್ಯಕ್ಕೊಳಗಾಗುತ್ತಾರೆ, ಅಲ್ಲದೆ ನಿದ್ರಾಹಿನತೆಯಿಂದಲೂ ಬಳಲುತ್ತಾರೆ ಎಂಬ ಅಂಶ ಬಹಿರಂಗವಾಗಿದೆ.
Advertisement