ಬಾಳೆಹಣ್ಣಿನ ಸಿಪ್ಪೆಯಲ್ಲಿದೆ ಪೋಷಕಾಂಶ

ಬಾಳೆಹಣ್ಣು ತಿನ್ನುವಾಗ ಸಿಪ್ಪೆ ತೆಗೆದು ಬಿಸಾಡುತ್ತೇವೆ. ಆದರೆ ಆ ಸಿಪ್ಪೆಯಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದು ಆರೋಗ್ಯ ತಜ್ಞರು...
ಬಾಳೆಹಣ್ಣು ಸಿಪ್ಪೆ
ಬಾಳೆಹಣ್ಣು ಸಿಪ್ಪೆ

ಬಾಳೆಹಣ್ಣು ತಿನ್ನುವಾಗ ಸಿಪ್ಪೆ ತೆಗೆದು ಬಿಸಾಡುತ್ತೇವೆ. ಆದರೆ ಆ ಸಿಪ್ಪೆಯಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದು ಆರೋಗ್ಯ  ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಬಾಳೆ ಹಣ್ಣಿನ ಸಿಪ್ಪೆಯಲ್ಲಿರುವ ಪೋಷಕಾಂಶಗಳು


ಸಿಪ್ಪೆಯಲ್ಲಿ ವಿಟಮಿನ್ ಎ ಇದೆ. ವಿಟಮಿನ್ ಎ ಇಂದ ದೇಹದಲ್ಲಿ ರೋಗ ಪ್ರತಿರೋಧ ಶಕ್ತಿ ಹೆಚ್ಚುತ್ತದೆ

ಆ್ಯಂಟಿ ಓಕ್ಸಿಡೆಂಟ್ ಯುಕ್ತವಾಗಿರುವ ಸಿಪ್ಪೆಯಲ್ಲಿ ವಿಟಮಿನ್ ಬಿ, ಬಿ 6 ಕೂಡಾ ಯಥೇಚ್ಛವಾಗಿದೆ

ಸಿಪ್ಪೆಯಲ್ಲಿರುವ ಲುಟೈನ್ ಎಂಬ ಪದಾರ್ಥ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ನಾರುಯಕ್ತವಾಗಿರುವ ಸಿಪ್ಪೆ ಸೇವನೆಯಿಂದ ದೇಹದಲ್ಲಿ ಕೊಬ್ಬು ಕರಗುತ್ತದೆ ಮಾತ್ರವಲ್ಲದೆ ಪಚನ ಕ್ರಿಯೆಗೆ ಸಹಾಯವಾಗುತ್ತದೆ.

ಬಾಳೆಹಣ್ಣಿನಲ್ಲಿರುವುದಕ್ಕಿಂತ ಹೆಚ್ಚು ಪೊಟಾಷಿಯಂ ಮತ್ತು ಫೈಬರ್ ಸಿಪ್ಪೆಯಲ್ಲಿದೆ.

ಹಾಗಾದರೆ ಬಾಳೆಹಣ್ಣಿನ ಹಸಿರು ಸಿಪ್ಪೆ ತಿನ್ನಬೇಕೋ?  ಹಳದಿ ಬಣ್ಣದ ಸಿಪ್ಪೆ ತಿನ್ನಬೇಕೋ? ಎಂಬ ಸಂಶಯ ಸಹಜ. ಬಾಳೆಹಣ್ಣಿನ ಹಳದಿ ಸಿಪ್ಪೆ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಇದು ಕ್ಯಾನ್ಸರ್ ಪ್ರತಿರೋಧ ಶಕ್ತಿ  ಹೆಚ್ಚಿಸುವುದು ಮಾತ್ರವಲ್ಲದೆ ಬಿಳಿ ರಕ್ತ ಕಣಗಳನ್ನು ವೃದ್ಧಿಸುತ್ತದೆ.  ಹಸಿರು ಬಣ್ಣದ ಸಿಪ್ಪೆಯನ್ನು ಸೇವಿಸುವುದಾದರೆ ಸಿಪ್ಪೆಯಲ್ಲಿ 10 ನಿಮಿಷ ನೀರಲ್ಲಿ ಕುದಿಸಿ, ಸಿಪ್ಪೆ ಮೃದುವಾದ ನಂತರ ಸೇವಿಸುವುದು ಒಳ್ಳೆಯದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com