
ಚೆನ್ನೈ: ತಮಿಳುನಾಡಿನಲ್ಲಿ ೨೦೦೮ ರಿಂದ ಅಂಗ ಕಸಿ ಕೇಂದ್ರವನ್ನು ಸ್ಥಾಪಿಸಿದಾಗಲಿಂದಲು ೬೩೮ ಜನ ಅಂಗದಾನ ಮಾಡಿ ೩೦೦೦ಕ್ಕು ಹೆಚ್ಚು ಜನ ಇದರ ಫಲಾನುಭವಿಗಳಾಗಿದ್ದಾರೆ ಮತ್ತು ಇದು ದೇಶದಲ್ಲೇ ಅತಿ ಹೆಚ್ಚು ಎಂದು ರಾಜ್ಯದ ಆರೋಗ್ಯ ಸಚಿವ ಸಿ ವಿಜಯ ಭಾಸ್ಕರ್ ತಿಳಿಸಿದ್ದಾರೆ.
ಮೆದುಳು ಸಾವು ಹೊಂದಿದ ರೋಗಿಗಳ ಕುಟುಂಬ ವರ್ಗದವರು ಅಂಗಾಂಗ ದಾನಕ್ಕೆ ಮುಂದು ಬರದ ಹೊರತು ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಅಂಗ ಕಸಿಗಳಲ್ಲಿ ೧೪೪ ಹೃದಯ ಕಸಿ, ೬೯ ಶ್ವಾಸಕೋಶ ಕಸಿ, ೬೩ ಪಿತ್ತಜನಕಾಂಗ ಕಸಿ, ೧೨೩೩ ಕಿಡ್ನಿ ಕಸಿಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಅಂಗ ಕಸಿ ಕೇಂದ್ರವನ್ನು ಸ್ಥಾಪಿಸಲು ಒರಿಸ್ಸಾ ರಾಜ್ಯ ಕೂಡ ಚಿಂತನೆ ನಡೆಸಿದ್ದು ಸಹಾಯ ಮತ್ತು ಸಲಹೆಗಾಗಿ ತಮಿಳು ನಾಡು ಸರ್ಕಾವನ್ನು ಸಂಪರ್ಕಿಸಿದೆ.
ಈ ಕೇಂದ್ರದ ನಿರ್ವಹಣೆಗೆ ರಾಜ್ಯಸರ್ಕಾರ ಬಜೆಟ್ ನಲ್ಲಿ ೪೦೦೦ ಕೋಟಿಯಿಂದ ೮೨೪೫ ಕೋಟಿಗೆ ಅನುದಾನವನ್ನು ಏರಿಸಿದೆ.
Advertisement