ಏಕಾಂಗಿಯಾಗಿರುವವರು ಸಂಬಂಧ ಹೊಂದಿದಾಗಿರುವಷ್ಟೇ ಸಂತಸದಿಂದ ಇರುತ್ತಾರೆ!

ಏಕಾಂಗಿಯಾಗಿರುವವರು ಸಂಬಂಧ ಹೊಂದಿದಾಗಿರುವಷ್ಟೇ ಸಂತಸದಿಂದ ಇರುತ್ತಾರೆ!

ಏಕಾಂಗಿಯಾಗಿರುವ ವ್ಯಕ್ತಿಗಳು ಸಂಬಂಧಗಳನ್ನು ಹೊಂದಿರುವ ವ್ಯಕ್ತಿಗಳಷ್ಟೆ ಸಂತೋಷವಾಗಿರುತ್ತಾರೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.
Published on

ವಾಷಿಂಗ್ ಟನ್: ಏಕಾಂಗಿಯಾಗಿರುವ ವ್ಯಕ್ತಿಗಳು ಸಂಬಂಧಗಳನ್ನು ಹೊಂದಿರುವ ವ್ಯಕ್ತಿಗಳಷ್ಟೆ ಸಂತೋಷವಾಗಿರುತ್ತಾರೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.

ಸಂಬಂಧಗಳನ್ನು ಹೊಂದಿರುವವರಿಗಿಂತಲೂ ಏಕಾಂಗಿಯಾಗಿರುವ ವ್ಯಕ್ತಿಗಳು ಕಡಿಮೆ ಸಂತೋಷವಾಗಿರುತ್ತಾರೆ ಎಂಬದು ಅನೇಕ ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ, ಆದರೆ ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ. ಏಕಾಂಗಿಯಾಗಿರುವವರೂ ಸಹ ಸಂಬಂಧಗಳನ್ನು ಹೊಂದಿರುವವರಷ್ಟೇ ಸಂತಸವಾಗಿರುವುದಕ್ಕೆ ಸಾಧ್ಯ ಎಂದು ಸಂಶೋಧನೆ ನಡೆಸಿದ ಆಕ್ಲೆಂಡ್ ನ ವಿಶ್ವವಿದ್ಯಾನಿಲಯದ ಪ್ರಮುಖ ಸಂಶೋಧಕರೊಬ್ಬರು ಹೇಳಿದ್ದಾರೆ.

ನ್ಯೂಯೂಜಿಲ್ಯಾಂಡ್ ನ 4 ,000 ಜನರು ಸಂಬಂಧಗಳಲ್ಲಿ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ಮತ್ತು ಸಂಘರ್ಷ ತಪ್ಪಿಸಲು ಪ್ರಯತ್ನಿಸಿದ್ದು, ಸಂಬಂಧಗಳನ್ನು ಹೊಂದಿರುವವರಿಗಿಂತಲೂ ಹೆಚ್ಚು ಸಂತಸವಾಗಿರುವುದಾಗಿ ತಿಳಿಸಿದ್ದಾರೆ. ಸಂಬಂಧಗಳಲ್ಲಿ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ತಡೆಗಟ್ಟಲು ಯತ್ನಿಸದೇ ಇರುವವರು ಏಕಾಂಗಿಯಾಗಿದ್ದಾಗ ಕಡಿಮೆ ಸಂತೋಶದಿಂದ ಇರುತ್ತಾರಂತೆ.  ಈ ಅಧ್ಯಯನ ನಡೆದಾಗ ಸಮೀಕ್ಷೆಗೊಳಗಾದ ಐದನೇ ಒಂದರಷ್ಟು ಜನರು ಏಕಾಂಗಿಯಾಗಿದ್ದರು. ಈ ಅಧ್ಯಯನ ವರದಿ ಸಾಮಾಜಿಕ ಮನಃಶಾಸ್ತ್ರ ಮತ್ತು ವ್ಯಕ್ತಿತ್ವ ವಿಜ್ಞಾನಕ್ಕೆ ಸಂಬಂಧಿಸಿದ ಜರ್ನಲ್ ನಲ್ಲಿ ಪ್ರಕಟವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com