ಒತ್ತಡದಲ್ಲಿದ್ದೀರಾ? ಕಣ್ಣೀರಿಟ್ಟು ಸುಧಾರಿಸಿಕೊಳ್ಳಿ; ಉಲ್ಲಸಿತರಾಗಿ

ನಮ್ಮ ಮನಸ್ಥಿತಿಯನ್ನು ಉಲ್ಲಸಿತವಾಗಿರಿಸಿಕೊಳ್ಳಲು, ಸುಧಾರಿಸಿಕೊಳ್ಳಲು ಕಣ್ಣೀರಿಡುವುದು ಮನುಷ್ಯನಿಗಿರುವ ವರ ಎನ್ನುತ್ತದೆ ನೂತನ ಅಧ್ಯಯನವೊಂದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ನಮ್ಮ ಮನಸ್ಥಿತಿಯನ್ನು ಉಲ್ಲಸಿತವಾಗಿರಿಸಿಕೊಳ್ಳಲು, ಸುಧಾರಿಸಿಕೊಳ್ಳಲು ಕಣ್ಣೀರಿಡುವುದು ಮನುಷ್ಯನಿಗಿರುವ ವರ ಎನ್ನುತ್ತದೆ ನೂತನ ಅಧ್ಯಯನವೊಂದು.

"ಹೌದು, ಒಂದು ಒಳ್ಳೆಯ ಅಳು ನಿಮ್ಮನ್ನು ಉಲ್ಲಸಿತಗೊಳಿಸಲು ಅತಿ ಒಳ್ಳೆಯ ವಿಧಾನ" ಎನ್ನುತ್ತಾರೆ ನೆದರ್ಲ್ಯಾಂಡ್ಸ್ ನ ಟಿಲ್ಬರ್ಗ್ ವಿಶ್ವವಿದ್ಯಾಲಯದ ಆಸ್ಮಿರ್ ಗ್ರಾಕಾನಿನ್.

ಅಳುವುದರ ಮಹತ್ವದ ಬಗ್ಗೆ ಸ್ವಲ್ಪವಷ್ಟೇ ತಿಳಿದಿದೆ. ಕೆಲವು ಸಂಶೋಧಕರು ಬೆಂಬಲಕ್ಕಾಗಿ ಅಳು, ಸಮಾಧಾನ ಮತ್ತು ಸಹಾಯಕ್ಕಾಗಿ, ಇನ್ನೂ ಕೆಲವರು ಭಾವನೆಗಳಿಂದ ಬಿಡಿಸಿಕೊಳ್ಳಲು ಅಳು ಸಹಾಯ ಎಂದು ನಂಬಿದ್ದಾರೆ.

ಎರಡು ಭಾವನಾತ್ಮಕ ಸಿನೆಮಾಗಳಾದ ಲಾ ವಿಟಾ ಎ ಬೆಲ್ಲಾ ಮತ್ತು ಹಾಚಿ - ಎ ಡಾಗ್ಸ್ ಟೇಲ್ ಸಿನೆಮಾ ನೋಡುತ್ತಿದ್ದ ವೀಕ್ಷಕರ ೬೦ ಜನರನ್ನು ಮನೋಭಾವನೆಗಳನ್ನು ಈ ಅಧ್ಯಯನಕ್ಕಾಗಿ ವಿಡಿಯೋ ಟೇಪ್ ಮಾಡಿಕೊಳ್ಳಲಾಗಿದೆ. ಈ ಎರಡು ಸಿನೆಮಾಗಳು ಕಣ್ಣೀರು ಹರಿಸುವ ಸಿನೆಮಾಗಳೆಂದೇ ಪ್ರಸಿದ್ಧಿ.

ಸಿನೆಮಾ ನೋಡಿದ ನಂತರ ಅತ್ತ ೨೮ ವೀಕ್ಷಕರನ್ನೂ ಮತ್ತು ಅಳದ ೩೨ ವೀಕ್ಷಕರನ್ನು ಅವರ ಅನುಭವದ ಬಗ್ಗೆ ಕೇಳಲಾಗಿದೆ. ೨೦ ಮತ್ತು ೯೦ ನಿಮಿಷಗಳ ನಂತರ ತಮ್ಮ ಮನಸ್ಥಿಯನ್ನು ರೇಟ್ ಮಾಡಲು ಅವರಿಗೆ ತಿಳಿಸಲಾಗಿದೆ.

ನಿರೀಕ್ಷೆಯಂತೆ ಸಿನೆಮಾ ನೋಡಿದ ತಕ್ಷಣ ಅಳದ ಮಂದಿಯ ಮನಸ್ಥಿಯಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ, ಆದರೆ ಅತ್ತವರ ಮನಸ್ಥಿತಿ ಖಿನ್ನತೆಗೆ ಒಳಪಟ್ಟಿದೆ.

ಆದರೆ ೨೦ ನಿಮಿಷಗಳ ಬಳಿಕ ಅತ್ತವರ ಮನಸ್ಥಿತಿ ಸಿನೆಮಾ ನೋಡುವುದಕ್ಕಿಂತ ಮುಂಚಿದ್ದ ಮನಸ್ಥಿತಿಗೆ ವಾಪಸಾಗಿದೆ ಹಾಗೂ ೯೦ ನಿಮಿಷಗಳ ಬಳಿಕ ಅವರ ಮನಸ್ಥಿತಿ ಇನ್ನೂ ಉತ್ತಮಗೊಂಡು ಉಲ್ಲಸಿತರಾಗಿದ್ದಾರೆ ಎನ್ನುತ್ತದೆ ಅಧ್ಯಯನ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com