ತಲೆಗೂದಲು ಚಿಕಿತ್ಸೆಯ ಸಾಮಾನ್ಯ ಔಷಧಗಳು ಲೈಂಗಿಕ ಜೀವನಕ್ಕೆ ಮಾರಕವಾಗಬಲ್ಲವು!

ಅಲೋಪೇಸಿಯಾ ಎಂದು ಕರೆಯಲ್ಪಡುವ ಪುರುಷರ ತಲೆಗೂದಲು ಉದುರುವ ತೊಂದರೆಗೆ ನೀಡಲಾಗುವ ಸಾಮಾನ್ಯ ಔಷಧಗಳು, ಲೈಂಗಿಕಾಸಕ್ತಿಗೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಅಲೋಪೇಸಿಯಾ ಎಂದು ಕರೆಯಲ್ಪಡುವ ಪುರುಷರ ತಲೆಗೂದಲು ಉದುರುವ ತೊಂದರೆಗೆ ನೀಡಲಾಗುವ ಸಾಮಾನ್ಯ ಔಷಧಗಳು, ಲೈಂಗಿಕಾಸಕ್ತಿಗೆ ಮಾರಕವಾಗಿ ಲಿಬಿಡೋ ನಷ್ಟ, ಉದ್ರೇಕತೆಯ ತೊಂದರೆಗೆ ಎಡೆಮಾಡಿಕೊಡಬಲ್ಲವು ಎನ್ನುತ್ತದೆ ನೂತನ ಅಧ್ಯಯನವೊಂದು.

ಪ್ರೋಸ್ಕಾರ್ ಮತ್ತು ಅವೋಡಾರ್ತ್ ಎಂದು ಜನಪ್ರಿಯವಾಗಿರುವ ಔಷಧಗಳನ್ನು ಸೇವಿಸುವ ಶೇಕಡಾ ೨೫ ಜನಗಳಲ್ಲಿ ಈ ಚಿಕಿತ್ಸೆಯಿಂದ ಯಾವುದೇ ಉಪಯುಕ್ತತೆ ಕಂಡುಬಂದಿಲ್ಲ. ಅಲ್ಲದೆ ಈ ಔಷಧಗಳು ಪುರುಷರಲ್ಲಿ ಅಡ್ಡಪರಿಣಾಮಗಳನ್ನು ಬೀರಿರುವುದು ಕೂಡ ಅಧ್ಯಯನದಲ್ಲಿ ಕಂಡುಬಂದಿದೆ.

ಈ ಚಿಕಿತ್ಸೆ ನಿಲ್ಲಿಸಿದ ಮೇಲೂ ಲಿಬಿಡೋ ನಷ್ಟ, ಉದ್ರೇಕತೆಯ ಕೊರತೆ ಇಂತಹ ಲೈಂಗಿಕ ತೊಂದರೆಗಳು ಮುಂದುವರೆದಿರುವುದು ತಿಳಿದುಬಂದಿದೆ.

ಲೈಂಗಿಕ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಲ್ಲದೇ ಹ್ರದಯದ ಸಂಬಂಧಿ ತೊಂದರೆಗಳಿಗೂ ಈ ಡ್ರಗ್ ಗಳು ಎಡೆ ಮಾಡಿಕೊಡುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಅಧ್ಯಯಾನದ ಲೇಖಕರು ಅಮೆರಿಕಾದ ಮೆಸೆಚ್ಚ್ಯುಸೆಟ್ಸ್ ನ ಬೋಸ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com