ಮೂವರ ಡಿಎನ್‌ಎ ಬಳಸಿ ಮಗು ಜನನ

ಮೂವರ ಡಿಎನ್‌ಎ ಬಳಸಿಕೊಂಡು ಪ್ರಣಾಳ ಶಿಶು ಮಾದರಿಯಲ್ಲಿ ಮಕ್ಕಳ ಜನನಕ್ಕೆ ಅವಕಾಶ ಮಾಡಿಕೊಡುವ...
ಮೂವರ ಡಿಎನ್‌ಎ ಬಳಸಿ ಮಗು ಜನನ

ಲಂಡನ್: ಮೂವರ ಡಿಎನ್‌ಎ ಬಳಸಿಕೊಂಡು ಪ್ರಣಾಳ ಶಿಶು ಮಾದರಿಯಲ್ಲಿ ಮಕ್ಕಳ ಜನನಕ್ಕೆ ಅವಕಾಶ ಮಾಡಿಕೊಡುವ ಕಾನೂನು ತಿದ್ದುಪಡಿಗೆ ಬ್ರಿಟನ್ ಸಂಸತ್ತು ಮಂಗಳವಾರ ಅನುಮೋದನೆ ನೀಡಿದೆ.

ಈ ಮೂಲಕ ಮೂವರ ಡಿಎನ್‌ಎ ಬಳಸಿಕೊಂಡು ಮಕ್ಕಳ ಹುಟ್ಟಿಗೆ ಅವಕಾಶ ಮಾಡಿಕೊಡುವ ವಿಶ್ವದ ಮೊದಲ ದೇಶ ಬ್ರಿಟನ್ ಆಗಲಿದೆ.

ಈ ರೀತಿಯ ವಿಧಾನದಲ್ಲಿ ಗಂಡ-ಹೆಂಡತಿ ಮಾತ್ರವಲ್ಲದೆ ಮತ್ತೊಬ್ಬ ಮಹಿಳೆಯ ಡಿಎನ್‌ಎಯನ್ನು ದಾನ ರೂಪದಲ್ಲಿ ಪಡೆಯಲಾಗುತ್ತದೆ. ನಂತರ ಪ್ರಣಾಳ ಶಿಶು ವಿಧಾನದಲ್ಲಿ ಭ್ರೂಣವನ್ನು ಬೆಳೆಸಲಾಗುತ್ತದೆ. ಈ ರೀತಿಯ ಮೈಟೋಕಾಂಡ್ರಿಯಲ್ ಡಿಎನ್‌ಎ ದಾನ ತಂತ್ರದಿಂದ ಆನುವಂಶಿಕವಾಗಿ ಬರುವ ರೋಗಗಳನ್ನು ಮಕ್ಕಳಿಂದ ದೂರ ಇಡಲು ಸಾಧ್ಯವಿದೆ ಎನ್ನುವುದು ವಿಜ್ಞಾನಿಗಳ ವಾದ. ಈ ತಂತ್ರದಲ್ಲಿ ದಂಪತಿಯ ಶೇ.99.9ರಷ್ಟು ಡಿಎನ್‌ಎ ಹಾಗೂ ದಾನಿ ಮಹಿಳೆಯ ಶೇ.0.1ರಷ್ಟು ಆರೋಗ್ಯ ಯುತ ಡಿಎನ್‌ಎ ಬಳಸಲಾಗುತ್ತದೆ.

ಆದರೆ, ಈ ಕಾನೂನು ತಿದ್ದುಪಡಿಗೆ ಧಾರ್ಮಿಕ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಪಾಪ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಪ್ರಣಾಳ ಶಿಶು ವಿಧಾನದ ಬೆಂಬಲಿಗ ಲಾರ್ಡ್ ರಾಬರ್ಟ್ ವಿನ್‌ಸ್ಟನ್ ಅವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com