ಭಾರತದಲ್ಲಿ ಪ್ರತಿ ವರ್ಷ ಕ್ಯಾನ್ಸರ್ ಗೆ ಐದು ಲಕ್ಷ ಬಲಿ!

ಭಾರತದಲ್ಲಿ ಪ್ರತಿವರ್ಷ ೮ ರಿಂದ ೧೦ ಲಕ್ಷ ಜನರಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತದೆ ಅವರಲ್ಲಿ ಸುಮಾರು ೫ ಲಕ್ಷ ಜನ ಸಾವನಪ್ಪುತ್ತಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಶಾಖಪಟ್ನಂ: ಭಾರತದಲ್ಲಿ ಪ್ರತಿವರ್ಷ ೮ ರಿಂದ ೧೦ ಲಕ್ಷ ಜನರಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತದೆ ಅವರಲ್ಲಿ ಸುಮಾರು ೫ ಲಕ್ಷ ಜನ ಸಾವನಪ್ಪುತ್ತಾರೆ ಎಂದು ಮಹಾತ್ಮಾ ಗಾಂಧಿ ಕ್ಯಾನ್ಸರ್ ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ತಜ್ಞ ವಿ ಮುರಳಿ ಕೃಷ್ಣ ಹೇಳಿದ್ದಾರೆ.

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಗೀತಂ ವಿಶ್ವವಿದ್ಯಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುರಳಿ ಕೃಷ್ಣ, ೨೦೨೦ರ ವೇಳೆಗೆ ಸ್ತನ ಕ್ಯಾನ್ಸರ್ ಪ್ರಕರಣಗಳು ದ್ವಿಗುಣವಾಗಲಿವೆ ಆದುದರಿಂದ ಜನರಲ್ಲಿ ಇದರ ತಡೆಗೆ ಮತ್ತು ಪತ್ತೆಗೆ ಹೆಚ್ಚಿನ ತಿಳುವಳಿಕೆ ಮೂಡಿಸುವುದು ಅಗತ್ಯ ಎಂದಿದ್ದಾರೆ. ಸ್ವಚ್ಚತೆಯ ಕೊರತೆಯಿಂದಾಗಿ ಗ್ರಾಮೀಣ ಭಾಗಗಳಲ್ಲಿ ಸರ್ವಿಕಲ್ ಕ್ಯಾನ್ಸರ್ ಅತಿ ಹೆಚ್ಚು ಸಂಖ್ಯೆಯಲ್ಲಿ ಕಾಣಸಿಗುತ್ತಿದೆ ಎಂದಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಯಾನ್ಸರ್ ರೋಗಗಳ ಬಗೆಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com