ಸ್ತನ ಕ್ಯಾನ್ಸರ್ ಗೆದ್ದ ಪುರುಷ!

ಸ್ತನ ಕ್ಯಾನ್ಸರ್ ಬರೀ ಮಹಿಳೆಯರಿಗಷ್ಟೆ ಬರುವುದಿಲ್ಲ, ಪುರುಷರಿಗೂ ಸಹ ಬರುವ ಸಾಧ್ಯತೆ ಇದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ತನ ಕ್ಯಾನ್ಸರ್ ಬರೀ ಮಹಿಳೆಯರಿಗಷ್ಟೆ ಬರುವುದಿಲ್ಲ, ಪುರುಷರಿಗೂ ಸಹ ಬರುವ ಸಾಧ್ಯತೆ ಇದೆ ಆದುದರಿಂದ ಗಡ್ಡೆಗಳನ್ನು ಆಗಾಗ ಪರೀಕ್ಷಿಸುವುದು ಒಳಿತು ಎಂದು ಸ್ತನ ಕ್ಯಾನ್ಸರ್ ಗೆದ್ದ ಬಂದ ಶಿವ ಕುಮಾರ್ ವಿಶ್ವ ಕ್ಯಾನ್ಸರ್ ದಿನದಂದು ತಿಳಿಸಿದ್ದಾರೆ.

ಲೇಖಕ ಕುಮಾರ್ ಮನಸ್ಸು ಮತ್ತು ಮಾನಸಿಕ ಸ್ವಾಸ್ಥ್ಯದ ಬಗ್ಗೆ ಬರೆಯುತ್ತಾರೆ. ಆದರೆ ಅವರಿಗೆ ೨೦೦೩ರಲ್ಲಿ ಸ್ತನ ಕ್ಯಾನ್ಸರ್ ಇದೆ ಎಂದು ಪತ್ತೆಯಾದಾಗ ಅವರ ಶಾಂತಿ ಮುದುಡಿ ಹೋಗಿತ್ತು. ಆಯುರ್ವೇದಿಕ್ ಚಿಕಿತ್ಸೆ ಪಡೆದರೂ ಉಪಯೋಗವಾಗದೆ ಕ್ಯಾನ್ಸರ್ ಉಲ್ಬಣವಾಗಿ, ೨೦೦೪ ರಲ್ಲಿ ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೊಂಡರು.

"ನಾನು ಮೂರು ವರ್ಷಕ್ಕಿಂತಲೂ ಹೆಚ್ಚು ದಿನ ಉಳಿಯುವುದಿಲ್ಲ ಎಂಬುದು ಡಾಕ್ಟರ್ ಗಳ ಅಭಿಪ್ರಾಯವಾಗಿತ್ತು. ಆದರೆ ರೇಡಿಯೇಶನ್ ಮತ್ತು ಕೀಮೋತೆರಪಿಯಿಂದ ಮತ್ತೆ ಜಿಗಿದೆದ್ದೆ. ಚಿಕಿತ್ಸೆಯ ನಂತರ ಯೋಗ, ಧ್ಯಾನದ ಮೂಲಕ ಒಳ್ಳೆಯ ಆರೋಗ್ಯವನ್ನು ಹೊಂದಿದ್ದೇನೆ" ಎನ್ನುತ್ತಾರೆ ಕುಮಾರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com