
ಆಸ್ಪತ್ರೆಯಲ್ಲಿ ದೊಡ್ಡ ದೊಡ್ಡ ಇನ್ಸ್‌ಟ್ರುಮೆಂಟ್‌ಗಳನ್ನು ನೋಡಿ ಹೆದರುವ ರೋಗಿಗಳು ಇನ್ನು ಮಂದೆ ಹೆದರಬೇಕಿಲ್ಲ. ಏಕೆಂದರೆ ಇದು ಮನುಷ್ಯನ ಚರ್ಮದ ಮೇಲೆ ಅಂಟಿಸಬಲ್ಲಂಥದ್ದು.
ಇದನ್ನು ಕೈ, ಎದೆ, ಹಣೆಯ ಮೇಲೆ ಟ್ಯಾಟೂವಿನಂತೆ ಅಂಟಿಸಿಕೊಳ್ಳುವುದರಿಂದ ಹೃದಯ ಬಡಿತ, ಮೆದುಳಿನ ಸಿಗ್ನಲ್, ಸ್ನಾಯುಗಳ ಚಟುವಟಿಕೆ, ದೇಹದ ಉಷ್ಣತೆ, ಚಲನೆ ಎಲ್ಲವನ್ನೂ ಕರಾರುವಕ್ಕಾಗಿ ತಿಳಿಸಿಬಲ್ಲದು.
ಇದುವೇ ಬಯೋಸ್ಟಾಂಪ್, ವೈದ್ಯ ವಿಜ್ಞಾನಕ್ಕೆ ಇದರ ನೆರವು ಅಪಾರ. ಇಷ್ಟೇ ಅಲ್ಲ, ಈ ಸೆನ್ಸಾರ್ ಪ್ರಾಡಕ್ಟ್ ವೈರ್‌ಲೆಸ್ ಆಗಿಯೇ ಹತ್ತಿರದ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಆಗಿ ಮಾಹಿತಿ ರವಾನಿಸಬಲ್ಲದು.
ಟ್ರಾನ್ಸ್‌ಪರೆಂಟ್ ಆಗಿರುವ ಸ್ಟಾಂಪ್‌ನಂತೆ ಅಂಟಿಸಬಲ್ಲ ಬಯೋಸ್ಟಾಂಪ್ ಸಾಧನ ನೋಡುತ್ತಿದ್ದರೆ ಸ್ಮಾರ್ಟ್‌ಫೋನ್‌ಗಳಲ್ಲಿ ಕೂಡ ಟ್ಯಾಟೂ ಹಾಕಿಸಿ ಕೊಳ್ಳುವ ಕಾಲ ದೂರವಿಲ್ಲ ಎನಿಸುತ್ತದೆ!
Advertisement