
ಅಹಮದಾಬಾದ್: ಜಿಲ್ಲಾಡಳಿತದ ಅನುಮತಿ ಇಲ್ಲದೆ ಗುಂಪು ಕೂಡವುದನ್ನು ನಿಷೇಧಿಸುವ ಅಪರಾಧಿ ಕಾಯ್ದೆ ಸೆಕ್ಷನ್ ೧೪೪ನ್ನು ಅಹಮದಾಬಾದಿನಲ್ಲಿ ಜಾರಿಗೆ ತರಲಾಗಿದೆ. ಇದು ವ್ಯಾಪಕವಾಗಿ ಹರಡುತ್ತಿರುವ ಹಂದಿ ಜ್ವರವನ್ನು ಹದ್ದುಬಸ್ತಿನಲ್ಲಿಡಲು ತೆಗೆದುಕೊಂಡಿರುವ ನಿರ್ಧಾರ. ಆದರೆ ಮದುವೆ ಸಮಾರಭಗಳು ಮತ್ತು ಸಾವಿನ ಮೆರವಣಿಗೆಗಳನ್ನು ಇದರಿಂದ ಹೊರತುಪಡಿಸಲಾಗಿದೆ.
ವರದಿಗಳ ಪ್ರಕಾರ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದು ಪಡಿಸದಿದ್ದರೆ ಅಥವಾ ಮುಂದೂಡದಿದ್ದರೆ, ಎಚ್೧ಎನ್೧ ವೈರಸ್ ಹರಡದಂತೆ ಸರಿಯಾದ ಕ್ರಮಗಳನ್ನು ತೆಗೆದುಕೊಂಡು ಅನುಮತಿ ಪಡೆಯಬೇಕಾಗಿದೆ ಎನ್ನಲಾಗಿದೆ.
ಹಂದಿ ಜ್ವರದ ಸದ್ಯದ ಪರಿಸ್ಥಿತಿಯ ಕುರಿತು ಸಂಸತ್ತಿನ ಎರಡೂ ಮನೆಗಳಲ್ಲಿ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡ ನೆನ್ನೆ ಹೇಳಿಕೆ ನೀಡಿದ್ದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಜ್ಯಗಳಿಗೆ ಹಂದಿ ಜ್ವರ ನಿಯಂತ್ರಣಕ್ಕೆ ಸಹಕಾರ ನೀಡಲು ತಂಡಗಳನ್ನು ಕಳುಹಿಸಲಾಗುತ್ತಿದೆ ಎಂದಿದ್ದರು ನಡ್ದ.
Advertisement