ಕ್ಯಾರೆಟ್ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ!

ಇತ್ತೀಚೆಗೆ ಸುಂದರವಾಗಿ ಕಾಣಬೇಕೆನ್ನುವ ಉತ್ಸಾಹದಲ್ಲಿರುವವರು ಕಾಸ್ಮೆಟಿಕ್ ಬಳಕೆಯ ಬ್ಯೂಟಿಪಾರ್ಲರ್‌ನತ್ತ ಮೊರೆ ಹೋಗುತ್ತಾರೆ.
ಕ್ಯಾರೆಟ್ ಜ್ಯೂಸ್
ಕ್ಯಾರೆಟ್ ಜ್ಯೂಸ್

ಇತ್ತೀಚೆಗೆ ಸುಂದರವಾಗಿ ಕಾಣಬೇಕೆನ್ನುವ ಉತ್ಸಾಹದಲ್ಲಿರುವವರು ಕಾಸ್ಮೆಟಿಕ್ ಬಳಕೆಯ ಬ್ಯೂಟಿಪಾರ್ಲರ್‌ನತ್ತ ಮೊರೆ ಹೋಗುತ್ತಾರೆ. ಆದರೆ, ಅದು ತಕ್ಷಣಕ್ಕೆ ಮಾತ್ರ ಪರಿಹಾರ ಸಿಗಬಹುದು. ಪಾರ್ಲರ್‌ಗೆ ಹೋಗಿ ಬಂದು ಒಂದೆರಡು ದಿನಗಳ ತನಕ ಮುಖದ ಕಾಂತಿ ಉಳಿದಿರುತ್ತದೆ. ನಂತರ ಮುಖದ ಕಾಂತಿ ಬಾಡಿದಂತಾಗಿ, ಮತ್ತೆ ಪಾರ್ಲರ್‌ಗೆ ಹೋಗಬೇಕಾಗುವ ಸ್ಥಿತಿ ಎದುರಾಗುತ್ತದೆ. ಇದಕ್ಕೆ ಸಾಕಷ್ಟು ಹಣ ವ್ಯಯವಾಗುವುದಂತು ಕಂಡಿತ.

ನೈಸರ್ಗಿಕವಾಗಿ ಮುಖದ ಸೌಂದರ್ಯ ಹೆಚ್ಚಿಸಬೇಕಾದರೆ ಸಮಯ ಇರೋಲ್ಲ ಅನ್ನೋದು ಕೆಲವರ ವಾದ. ಆದರೆ, ಇರುವ ಸಮಯದಲ್ಲಿ ನೈಸರ್ಗಿಕ ಆಹಾರ ಸೇವಿಸಿ ತಮ್ಮ ದೇಹದ ಸೌಂದರ್ಯ ಹೆಚ್ಚಿಸಕೊಳ್ಳಬಹುದು.

ಕ್ಯಾರೆಟ್ ನಿಂದ ಸಿಗುವಂತದ್ದು...


ಕ್ಯಾರೆಟ್ ಬಳಕೆ ಆರೋಗ್ಯಕ್ಕೆ ಉತ್ತಮ. ದಿನಾ ಕ್ಯಾರೆಟ್ ತಿನ್ನುವುದರಿಂದ ಯೌವನದ ಕಳೆಯನ್ನು ವೃದ್ಧಿಗೊಳಿಸಿಕೊಳ್ಳಬಹುದು. ಇದರ ಸೇವನೆಯಿಂದ ಮುಖದ ಕಾಂತಿ ಹೆಚ್ಚುವುದಲ್ಲದೇ, ಇದರಿಂದ ಶೇ.210ರಷ್ಟು ವಿಟಮಿನ್ ಎ, ಶೇ.10ರಷ್ಟು ವಿಟಮಿನ್ ಕೆ, ಶೇ.6ರಷ್ಟು ವಿಟಮಿನ್ ಸಿ ಹಾಗೂ ಶೇ.2ರಷ್ಟು ಕ್ಯಾಲ್ಶಿಯಮ್ ಸಿಗಲಿದೆ.

ಕ್ಯಾರೆಟ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾರೆಟ್‌ನಲ್ಲಿ ಬೀಟಾ ಕೆರೋಟಿನ್ ಅಂಶ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ವೃದ್ಧಿಸಲಿದೆ. ಕ್ಯಾರೆಟ್‌ನ್ನು ಬೇಯಿಸಿ ತಿಂದರೆ ವಿಟಮಿನ್ ಎ ದೊರೆತ್ತದೆ ಹಾಗೆ, ಹಸಿಯಾಗಿ ತಿಂದರೆ ದೈಹಿಕ ಶಕ್ತಿ ಹೆಚ್ಚುತ್ತದೆ.

ಪೋಷಕಾಂಶ ಹೊಂದಿರುವ ಚಿನ್ನದ ಗಣಿ ಎಂದೇ ಹೇಳಲಾಗುವು ಕ್ಯಾರೆಟ್ ಜ್ಯೂಸ್ ಕುಡಿದರೆ ತ್ವಚೆಯ ಕಾಂತಿ ಹೆಚ್ಚಿಸುತ್ತದೆ. ದೇಹದ ಮೂಳೆಗಳನ್ನು ಮತ್ತು ಹಲ್ಲನ್ನು ಗಟ್ಟಿಗೊಳಿಸುವಲ್ಲಿ, ಕ್ಯಾನ್ಸ್‌ರ್ ನಿವಾರಣೆಗೆ ಸಹಕಾರಿಯಾಗಲಿದೆ. ಪ್ರತಿ ನಿತ್ಯ ಕ್ಯಾರೆಟ್ ಜ್ಯೂಸ್ ಸೇವನೆಯಿಂದ ದೇಹಕ್ಕೆ ತಾಜಾತನ ನೀಡುವುದಲ್ಲದೇ, ಸಕ್ರಿಯವಾಗಿಡುತ್ತದೆ.

ಕ್ಯಾರೆಟ್ ಡಿಟಾಕ್ಸ್ ಆಹಾರವಾಗಿದ್ದು, ಲಿವರ್‌ನಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸಿ, ಲಿವರ್‌ನ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತದೆ. ಹಾಗಾಗಿ, ಪ್ರತಿನಿತ್ಯ ಕ್ಯಾರೆಟ್ ಸೇವನೆ ಉತ್ತಮ ಆರೋಗ್ಯಕ್ಕೆ ಒಳಿತು.

-ಮೈನಾಶ್ರೀ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com