2 ವರ್ಷದಲ್ಲಿ ಮಾನವನ ತಲೆ ಕಸಿ!

ಕಿಡ್ನಿ, ಹೃದಯ ಕಸಿ ಬಗ್ಗೆ ನಾವು ಕೇಳಿಯೇ ಇದ್ದೇವೆ. ಇದೇ ರೀತಿ ಮಾನವನ ತಲೆಯನ್ನೂ ಕಸಿ ಮಾಡಬಹುದೇ? ಸಾಧ್ಯವಿದೆ ಎನ್ನುತ್ತಿದ್ದಾರೆ ಇಟಲಿಯ ನರತಜ್ಞರು...
2 ವರ್ಷದಲ್ಲಿ ಮಾನವನ ತಲೆ ಕಸಿ!
Updated on

ಲಂಡನ್: ಕಿಡ್ನಿ, ಹೃದಯ ಕಸಿ ಬಗ್ಗೆ ನಾವು ಕೇಳಿಯೇ ಇದ್ದೇವೆ. ಇದೇ ರೀತಿ ಮಾನವನ ತಲೆಯನ್ನೂ ಕಸಿ ಮಾಡಬಹುದೇ? ಸಾಧ್ಯವಿದೆ ಎನ್ನುತ್ತಿದ್ದಾರೆ ಇಟಲಿಯ ನರತಜ್ಞರು.

ಇನ್ನೆರಡು ವರ್ಷದಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಮಾನವನ ತಲೆ ಕಸಿ ಪ್ರಯೋಗ ನಡೆಯಲಿದೆ. ಕ್ಯಾನ್ಸರ್ ನಿಂದಾಗಿ ಸ್ನಾಯು ಹಾಗೂ ನರದೌರ್ಬಲ್ಯಕ್ಕೆ ಗುರಿಯಾಗುವ ವ್ಯಕ್ತಿಗಳ ಬದುಕಿಗೆ ಆಶಾಕಿರಣವಾಗಿ ಈ ರೀತಿಯ ಕಸಿ ಪ್ರಯೋಗ ಮಾಡಲು ಟುರಿನ್ ಅಡ್ವಾನ್ಸ್ಡ್ ನ್ಯೂರೋ ಮಾಡ್ಯುಲೇಷನ್ ಗ್ರೂಪ್ ನ ಸರ್ಜಯೋ ಕ್ಯಾನವೆರೋ ನಿರ್ಧರಿಸಿದ್ದಾರೆ.

ಜೂನ್ ನಲ್ಲಿ ನಡೆಯಲಿರುವ ಅಮೆರಿಕನ್ ಅಕಾಡೆಮಿಕ್ ಆಫ್ ನ್ಯೂರೋಲಾಜಿಕಲ್ ಆ್ಯಂಡ್ ಆರ್ಥೋಪೆಡಿಕ್ ಸರ್ಜನ್ಸ್ (ಎಎಎನ್ಒಎಸ್) ಸಮಾವೇಶದಲ್ಲಿ ಈ ಕುರಿತ ಘೋಷಣೆಯನ್ನು ಕ್ಯಾನವೆರೋ ಮಾಡಲಿದ್ದಾರೆ. ಈ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾದವರು ವರ್ಷದಲ್ಲಿ ಮಾಮೂಲಿಯಂತೆ ಓಡಾಡಲು ಸಾಧ್ಯವಿದೆ. ಜತೆಗೆ, ಮೊದಲಿನಂತೆಯೇ ಹಳೆಯ ಧ್ವನಿಯಲ್ಲೇ ಮಾತನಾಡಲು, ತಲೆಯನ್ನು ಆಚೀಚೆ ತಿರುಗಿಸಲು ಸಾಧ್ಯವಿದೆ. ಈ ರೀತಿ ತಲೆಯ ಕಸಿ ಮಾಡುತ್ತಿರುವುದು ಇದೇ ಮೊದಲೇನಲ್ಲ. 1970ರಲ್ಲೇ ಅಮೆರಿಕ ಕ್ಲೇವ್ಲ್ ಯಾಂಡ್ ನಲ್ಲಿ ನಡೆಸಲಾಗಿತ್ತು.

ಅದೊಂದು ಯಶಸ್ವಿ ಪ್ರಯೋಗ. ಆದರೆ, ಆಗ ಈ ಪ್ರಯೋಗ ಮಾಡಿದ್ದು ಮಾನವನ ಮೇಲಲ್ಲ. ಮಂಗನ ಮೇಲೆ. ಆದರೆ, ಈ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಂಗಳ ಬದುಕಿದ್ದು ಕೇವಲ ಒಂಬತ್ತೇ ದಿನ. ಆದರೆ, ಇದು ಎರಡು ವರ್ಷಗಳಲ್ಲಿ ಸಾಧ್ಯವಾಗುವುದು ಸುಳ್ಳು. ಇಂಥ ಪ್ರಯತ್ನಗಳು ಯಶಸ್ಸು ಸಾಧಿಸಬೇಕಿದ್ದರೆ ಇನ್ನೂ ಹಲವು ವರ್ಷಗಳು ಬೇಕು. ಸದ್ಯ ನಮ್ಮ ವೈದ್ಯಕೀಯ ಕ್ಷೇತ್ರವು ಮಾನವನ ತಲೆಯನ್ನೇ ಕಸಿಮಾಡುವಷ್ಟು ಮುಂದುವರಿದಿಲ್ಲ ಎನ್ನುತ್ತಾರೆ ಸಂಶೋಧಕರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com