ಆಸ್ತಿ, ಅಧಿಕಾರ ಮತ್ತು ಮಾನಸಿಕ ರೋಗಕ್ಕೆ ಸಂಬಂಧವಿದೆ: ಹೊಸ ಅಧ್ಯಯನ

ತನ್ನ ಯೋಗ್ಯತೆಯ ಬಗ್ಗೆ ಹಿಗ್ಗಿದ, ಕುಗ್ಗಿದ ಭಾವನೆಗಳು, ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಶಿಂಗ್ ಟನ್: ತನ್ನ ಯೋಗ್ಯತೆಯ ಬಗ್ಗೆ ಹಿಗ್ಗಿದ, ಕುಗ್ಗಿದ ಭಾವನೆಗಳು, ಬೈಪೋಲಾರ್ ರೋಗ, ಆತ್ಮರತಿ ವ್ಯಕ್ತಿತ್ವದ ವೈಪರೀತ್ಯ, ತಲ್ಲಣ, ಖಿನ್ನತೆಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಹೊಸ ಅಧ್ಯನವೊಂದು ತಿಳಿಸಿದೆ.

"ಅಧಿಕಾರವನ್ನು ಪಡೆಯಲು ಅಪೇಕ್ಷೆ, ಅಧಿಕಾರವನ್ನು ಪಡೆಯಲು ಆಕ್ರಮಣಾಕಾರಿ ತಂತ್ರಗಳನ್ನು ಅನುಸರಿಸುವುದು, ಹಾಗೂ ಅಧಿಕಾರವನ್ನು ಪಡೆಯುವ ಭಾವೋದ್ವೇಗಗಳು ಇವುಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದೆವು" ಎಂದಿದ್ದಾರೆ ಕ್ಯಾಲಿಫೋರ್ನಿಯಾ ವಿಶ್ವಿದ್ಯಾಲಯದ ಮನೋಶಾಸ್ತ್ರಜ್ಞ ಹಾಗೂ ಈ ಅಧ್ಯಯನದ ಹಿರಿಯ ಲೇಖಕಿ ಶೆರಿ ಜಾನ್ಸನ್.

೬೦೦ ಕ್ಕೂ ಹೆಚ್ಚು ಯುವಕ ಯುವತಿಯರನ್ನು ಈ ಅಧ್ಯಯನಕ್ಕೆ ಒಳಪಡಿಸಿರುವ ತಂಡ, ಮಾನಸಿಕ ರೋಗಗಳಿಗೆ ಮುಖ್ಯ ಕಾರಣ ಒಬ್ಬ ತಾನು ಏರಬೇಕು ಎಂದುಕೊಳ್ಳುವ ಸಾಮಾಜಿಕ ಸ್ಥಾನ ಮತ್ತು ಅದನ್ನು ಸಾಧಿಸಲಾಗದ ಸ್ಥಿತಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ಖಿನ್ನತೆ ಮತ್ತು ತಲ್ಲಣಗಳಿಂದ ನರಳುವ ಜನರು ಸಾಮಾನ್ಯವಾಗಿ ತಮ್ಮ ಸಾಧನೆಗಳ ಬಗ್ಗೆ ಹಾಗೂ ತಮ್ಮ ಅಧಿಕಾರದ ಬಗ್ಗೆ ಸಣ್ಣತನದ ಕಲ್ಪನೆಯಿರುತ್ತದೆ, ಇದಕ್ಕೆ ತದ್ವಿರುದ್ಧವಾಗಿ ಆತ್ಮರತಿ ವ್ಯಕ್ತಿತ್ವದ ಲಕ್ಷಣ ಹೊಂದಿರುವವರು ತಮ್ಮ ಸಾಧನೆ ಬಗ್ಗೆ ವಿಪರೀತವಾದ ಒಣ ಅಭಿಮಾನ ಹೊಂದಿರುತ್ತಾರೆ" ಎಂದಿದ್ದಾರೆ.

ಒಟ್ಟಿನಲ್ಲಿ ತಾವು ಏನನ್ನು ಸಾಧಿಸಿದ್ದೇವೆ ಏನನ್ನು ಸಾಧಿಸಿಲ್ಲ ಎಂಬುದರ ತಮ್ಮ ಕಲ್ಪನೆಯೇ ಎಷ್ಟೋ ಮಾನಸಿಕ ತೊಂದರೆಗಳಿಗೆ ಕಾರಣ ಎನ್ನುತ್ತದೆ ಈ ಅಧ್ಯಯನ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com