ಪ್ಲಸ್ ಪಾಯಿಂಟ್

ಪಾನಕ ಮಾಡಿ ಕುಡಿದರೆ ಟೈಫಾಯಿಡ್, ನ್ಯೂಮೋನಿಯಾದಂಥ ಅನೇಕ ಅಪಾಯಕಾರಿ ಕಾಯಿಲೆಗಳು...
ಪ್ಲಸ್ ಪಾಯಿಂಟ್
Updated on

ಪಾನಕ ಮಾಡಿ ಕುಡಿದರೆ ಟೈಫಾಯಿಡ್, ನ್ಯೂಮೋನಿಯಾದಂಥ ಅನೇಕ ಅಪಾಯಕಾರಿ ಕಾಯಿಲೆಗಳು ಗುಣಮುಖಗೊಳ್ಳುವುದರೊಂದಿಗೆ ರೋಗಿಯಲ್ಲಿ ಚೇತರಿಕೆ ಕಂಡು ಬರುತ್ತದೆ. ಅಲ್ಲದೇ ಇದರ ರಸ ದೇಹದಲ್ಲಿ ಉತ್ಪತ್ತಿಯಾಗುವ ಸೂಕ್ಷ್ಮ ವಿಷಕ್ರಿಮಿಗಳನ್ನು ನಾಶ ಪಡಿಸುವುದಲ್ಲದೇ ಅನೇಕ ಚರ್ಮ ರೋಗಗಳಿಗೆ ಪರಿಣಾಮಕಾರಿ ಮದ್ದು.

'ಹಾಸಿಗೆ ಇದ್ದಷ್ಟು ಕಾಲು ಚಾಚು' ಎಂಬ ಮೌಲ್ಯವನ್ನು ಅರಿತರ, ಜೀವನವೇ ಬದಲಾದೀತು. ಸತ್ಚಿಂತನೆಗಳೊಂದಿಗೆ ದಿನವನ್ನು ಆರಂಭಿಸಿ. ಬಾಯಿ ಚಪಲವೂ ಅನಾರೋಗ್ಯಕ್ಕೆಡೆ ಮಾಡಿಕೊಡಬಹುದು. ಹಿತಿಮಿತ ಆಹಾರ ಪದ್ಧತಿ ರೂಢಿಸಿಕೊಂಡಲ್ಲಿ ಅನಾರೋಗ್ಯ ನಮ್ಮನ್ನು ಬಾಧಿಸದು.

ಜೀವಿಯ ದೇಹ-ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯೇ ಆರೋಗ್ಯ. ವಿಶ್ವ ಸಂಸ್ಥೆಯ 1945ರ ಹೇಳಿಕೆಯ ಪ್ರಕಾರ, ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿ.

ಎಷ್ಟೋ ಜನ ಎದ್ದ ಕೂಡಲೇ ಸಾರಾಯಿ, ಸೇಂದಿ ಸೇವಿಸುವುದನ್ನು ರೂಢಿಸಿಕೊಂಡಿರುತ್ತಾರೆ. ಇಂಥವರ ಬದುಕು ಹದಗೆಟ್ಟು ಅನಾರೋಗ್ಯಕ್ಕೆ ತುತ್ತಾಗಿ ಬದುಕು ಹಾಳಾಗುತ್ತದೆ. ಬದಲಾಗಿ ಸಾಧ್ಯವಾದಷ್ಟೂ ನೀರು ಕುಡಿಯುವುದನ್ನು ರೂಢಿಸಿಕೊಂಡರೆ, ಮಲಬದ್ಧತೆ, ಕರುಳು ಹುಣ್ಣು, ಕಫ, ನೆಗಡಿ ಮುಂತಾದ ರೋಗಗಳು ಹತ್ತಿರವೂ ಸುಳಿಯುವುದಿಲ್ಲ.

ಓದುವಂಥ ಒಳ್ಳೆಯ ಅಭ್ಯಾಸದಿಂದ ದುರಾಲೋಚನೆ, ನಿರಾಶಾಭಾವ ಮಾಯವಾಗುತ್ತದೆ. ಜಂಜಾಟದಲ್ಲಿ ಸುಖ ದುಃಖಗಳ ಛಾಯೆ ಎಲ್ಲ ರೀತಿಯಲ್ಲೂ ಹರಿಯುತ್ತದೆ. ಅದಕ್ಕೆ ಮನಸ್ಸು ಸದಾ ಒಳ್ಳೆಯದನ್ನೇ ತುಡಿದರೆ ಬದುಕು ಬಂಗಾರವಾಗುತ್ತದೆ. ತಾಳ್ಮೆ, ಸಂಯಮ ರೂಢಿಸಿಕೊಳ್ಳಬೇಕು.

ದೈನಂದಿನ ಕೆಲಸಗಳನ್ನು ಸಾಧ್ಯವಾದಷ್ಟು ಮುಂದೆ ಹಾಕದೇ ಅಂದೇ ಮುಗಿಸಿದಲ್ಲಿ ಮನಸ್ಸು ನರಾಳವಾಗುತ್ತದೆ. ಇಂಥ ನಿರಾಳತೆ ನಮ್ಮ ಮಾನಸಿಕ ಆರೋಗ್ಯದೊಂದಿಗೆ, ದೈಹಿಕ ಆರೋಗ್ಯವನ್ನೂ ವೃದ್ಧಿಸುತ್ತದೆ. ನಗ್ ನಗ್ತಾ, ಒಳ್ಳೆ ಮಾತನಾಡಿ, ಸಿಟ್ಟು, ಕೋಪ, ಕಿರುಚಾಟಗಳನ್ನು ಬದುಕಿನಿಂದ ದೂರವಿಡಿ. ನಿರಂತರ ದುಡಿಮೆ ಇರಲಿ.

ದಣಿದ ಮನಸ್ಸಿಗೆ ಶರೀರದ ಮೂಲಕ ವಿಶ್ರಾಂತಿ ಅಗತ್ಯ. ಒಂದು ಹಾಸ್ಯ ಚಟಾಕಿ ಹಾರಿಸಿ ಉಲ್ಲಾಸಮಯ ವಾತಾವರಣ ಸೃಷ್ಟಿಸಿ. ಅಹಂಕಾರ, ನಿರಾಸೆ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಾದರೆ ಮನಸ್ಸು ಒತ್ತಡಕ್ಕೆ ಒಳಗಾಗುವುದು. ಮನಸ್ಸಿನ ತಾಳ್ಮೆಯೂ ಮುಖ್ಯ. ಒಳ್ಳೆಯದೆಡೆಗೆ ಮನಸ್ಸು ಎಳೆಯುವುದು ಅಪರೂಪ. ಎಚ್ಚರಿಕೆಯಿಂದ ಸನ್ನಡತೆಯೆಡೆಗೆ ಗಮನ ಹರಿಸುವ ಮೂಲಕ ನಮ್ಮ ಜೀವನವನ್ನು ಉತ್ತಮಗೊಳಿಸಬಹುದು.

  • ಆರೋಗ್ಯಕ್ಕೆ ತ್ರಿ ಸೂತ್ರಗಳು
  • ಆಸೆ, ಕೋಪ, ನಾಲಗೆಯನ್ನು ಹತೋಡಿಯಲ್ಲಿಡಿ.
  • ವ್ಯಾಪಾರ, ಪ್ರಯಾಣ, ಮದುವೆಗೆ ಆತುರ ಬೇಡ.
  • ಬುದ್ಧಿ ಶಕ್ತಿ, ಸಾಮರ್ಥ್ಯ, ಸಂತೋಷಕ್ಕೆ ಬೆಲೆಕೊಡಿ.
  • ಹಣ, ಸಮಯ, ಶಕ್ತಿಯನ್ನೂ ವ್ಯಯಿಸಬೇಡಿ.
  • ಧರ್ಮ, ನ್ಯಾಯ, ವಿನಯವನ್ನು ಗೌರವಿಸಿ.
  • ದೇಶ, ಗೌರವ, ರಾಷ್ಟ್ರಧ್ವಜಕ್ಕಾಗಿ ಹೋರಾಡಿ.
  • ಅನ್ಯಾಯ, ಅಹಂಕಾರ ದ್ರೋಹಗಳಿಂದ ದೂರವಿರಿ.

-ವೈ.ಬಿ.ಕಡಕೋಳ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com