
ಲಕನೌ: ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ಕುಟುಂಬದ ಐವರು ಹಂದಿ ಜ್ವರಕ್ಕೆ ತುತ್ತಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಸಂಜಯ್ ಗಾಂಧಿ ಪದವಿಪೂರ್ವ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ರೇಡಿಯೋಥೆರಪಿ ವಿಭಾಗದ ಗುತ್ತಿಗೆ ಕಾರ್ಮಿಕ ಬಿಲಾಲ್ ಸಯ್ಯದ್ ಎಚ್೧ಎನ್೧ ಸೋಂಕಿಗೆ ಒಳಗಾಗಿದ್ದರು. ಇವರಿಂದ ತಮ್ಮ ಕುಟುಂಬ ಸದಸ್ಯರಾದ ಅಬುಲ್ಲ(೪), ಸಲ್ಮಾ(೬೫), ಉಮ್ಮೆ ಹಬಿಬಾ(೨೬) ಮತ್ತು ಸಾಬಾ(೨೫) ಇವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಯಾದವ್ ತಿಳಿಸಿದ್ದಾರೆ.
"ಕಾಲೇಜಿನ ಕ್ಯಾಂಪಸ್ ನಲ್ಲಿ ಬಿಲಾಲ್ ಅವರಿಗೆ ಸೋಂಕು ತಗಲಿರುವ ಸಾಧ್ಯತೆ ಇದ್ದು ಇದರಿಂದ ಅವರ ಕುಟುಂಬ ಸದಸ್ಯರೂ ಸೋಂಕಿತರಾಗಿರಬಹುದು" ಎಂದು ಅವರು ತಿಳಿಸಿದ್ದಾರೆ.
ದೇಶಾದ್ಯಂತ ಹಂದಿ ಜ್ವರ ವ್ಯಾಪಕವಾಗಿ ಹಬ್ಬುತ್ತಿದ್ದು ಚಳಿಗಾಲದ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
Advertisement