2030ರ ವೇಳೆಗೆ ಏಡ್ಸ್ ಗೆ ಚುಚ್ಚು ಮದ್ದು

ಎಚ್ಐವಿಯಂಥ ಮದ್ದಿಲ್ಲದ ಸೋಂಕಿಗೆ 2030ರ ವೇಳೆಗೆ ಚುಚ್ಚು ಮದ್ದು ಲಭ್ಯ...
2030ರ ವೇಳೆಗೆ ಏಡ್ಸ್ ಗೆ ಚುಚ್ಚು ಮದ್ದು

ವಾಷಿಂಗ್ಟನ್: ಎಚ್ಐವಿಯಂಥ ಮದ್ದಿಲ್ಲದ ಸೋಂಕಿಗೆ 2030ರ ವೇಳೆಗೆ ಚುಚ್ಚು ಮದ್ದು ಲಭ್ಯ!

ಹೀಗೆಂದವರು ಮೈಕ್ರೋಸಾಫ್ಟ್ನ ಸಂಸ್ಥಾಪಕ ಬಿಲ್ ಗೇಟ್ಸ್. ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.

ಮೂರು ದಶಕದಲ್ಲಿ ಲಕ್ಷಾಂತರ ಮಂದಿಯನ್ನು ಬಲಿಪಡೆದ ಏಡ್ಸ್ ಸೋಂಕು ಹರಡುವ ವೈರಸ್ಗೆ 2030ರ ವೇಳೆಗೆ ಮದ್ದು ಸಿದ್ಧವಾಗಲಿದೆ. ಈ ಸೋಂಕು ತಡೆಗಟ್ಟುವ ಸಂಬಂಧ ಚುಚ್ಚು ಮದ್ದು ಹಾಗೂ ಹೊಸ ಔಷಧ ಚಿಕಿತ್ಸೆ ಆ ವೇಳೆಗೆ ಲಭ್ಯವಾಗಲಿದೆ. ಈ ವಿಚಾರದಲ್ಲಿ ನಾವು ಆಶಾವಾದಿಯಾಗಿದ್ದೇವೆ ಎಂದಿದ್ದಾರೆ ಗೇಟ್ಸ್.

ಒಂದು ವೇಳೆ ಚುಚ್ಚು ಮದ್ದು ಕಂಡು ಹಿಡಿದರೆ ಏಡ್ಸ್ಗೆ ಜೀವನಪೂರ್ತಿ ಔಷಧ ತೆಗೆದುಕೊಳ್ಳುವ ಕಿರಿಕಿರಿಯಿಂದ ಜನ ಮುಕ್ತರಾಗಲಿದ್ದಾರೆ ಎಂದು ಗೇಟ್ಸ್ ಹೇಳಿದ್ದಾರೆ. ಬಿಲ್ಗೇಟ್ಸ್ ಅವರ ಬಿಲ್ ಆ್ಯಂಡ್ ಮೆಲಿಂದಾ ಗೇಟ್ಸ್ ಫೌಂಡೇಷನ್ ವೈದ್ಯಕೀಯ ಸಂಶೋಧನೆಗೆಂದೇ ಕೋಟ್ಯಂತರ ರುಪಾಯಿಯನ್ನು ದೇಣಿಗೆಯಾಗಿ ನೀಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com