ಮಜ್ಜಿಗೆ: ಆಗದು ಹೆಚ್ಚಿಗೆ

ಮಜ್ಜಿಗೆ ಅಂದ ತಕ್ಷಣ ಮೂಗುಮುರಿಯುವವರೇ ಅಧಿಕ ಮಂದಿ...
ಮಜ್ಜಿಗೆ
ಮಜ್ಜಿಗೆ
Updated on

ಮಜ್ಜಿಗೆ ಅಂದ ತಕ್ಷಣ ಮೂಗುಮುರಿಯುವವರೇ ಅಧಿಕ ಮಂದಿ. ಉರಿಬಿಸಿಲಿನಲ್ಲಿ ಕುಡಿಯಲು ಇಷ್ಟಪಡುವುದನ್ನು ಬಿಟ್ಟರೆ ಇತ್ತೀಚಿನ ಯುವಜನರು, ಮಕ್ಕಳು ಮಜ್ಜಿಗೆ ಎಂದರೆ ಮಾರುದೂರು ಹೋಗುತ್ತಾರೆ. ಅದು ಹುಳಿಯಾಗಿರುತ್ತದೆ, ಒಂಥರಾ ಸ್ಮೆಲ್ ಬರುತ್ತದೆ ಎಂದು ಅದನ್ನು ಕುಡಿಯಲು ಹಿಂದೇಟು ಹಾಕುತ್ತಾರೆ. ಇನ್ನು ಊಟದ ಜೊತೆ ಸೇರಿಸಿ ತಿನ್ನುವುದಂತೂ ದೂರದ ಮಾತು. ಗಟ್ಟಿ ಮೊಸರಾದ್ರೆ ಅನ್ನದ ಜೊತೆ ಕಲಸಿ ತಿನ್ನಬಹುದು, ಮಜ್ಜಿಗೆ ಹೇಗೆ ಅನ್ನದ ಜೊತೆ ಸೆಟ್ ಆಗತ್ತೆ ಎಂದು ಕೇಳುತ್ತಾರೆ.

 ಆರೋಗ್ಯಕ್ಕೆ ಮಜ್ಜಿಗೆ ತುಂಬಾ ಉಪಕಾರಿ.

  • ನಿಮಗೆ ನೀರು ಪದೇ ಪದೇ ಕುಡಿಯಲು ಬೇಜಾರೆನಿಸಿದರೆ  ಮಜ್ಜಿಗೆ ಕುಡಿದು ನೋಡಿ, ದೇಹ ಉಲ್ಲಸಿತವಾಗುತ್ತದೆ.
  • ಅಜೀರ್ಣ, ಹೊಟ್ಟೆನೋವು ಕಂಡುಬಂದಲ್ಲಿ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.
  • ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಮನೆಯಲ್ಲಿ ಹಬ್ಬಹರಿದಿನಗಳ ಸಂದರ್ಭದಲ್ಲಿ, ಯಾವುದೋ ಸಮಾರಂಭಕ್ಕೆ ಹೋಗಿ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ  ಉಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ. ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿದರೆ ಇನ್ನಷ್ಟು ರುಚಿ ಕೊಡುತ್ತದೆ.
  • ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಕೊನೆಯಲ್ಲಿ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ಹೊಟ್ಟೆಗೆ ಸುಖಕರ.
  • ಮಜ್ಜಿಗೆ ದೇಹದಲ್ಲಿರುವ ಉಷ್ಣತೆಯನ್ನು ಕಡಿಮೆ ಮಾಡಿ ತಂಪು ನೀಡುತ್ತದೆ. ಅದಕ್ಕೆ ಬೇಸಿಗೆ ಕಾಲದಲ್ಲಿ ಎಲ್ಲರೂ ಮಜ್ಜಿಗೆ ನೀರಿಗೆ ಮೊರೆ ಹೋಗುತ್ತಾರೆ.
  •  ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶವಿರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲೊರಿ, ಕೊಬ್ಬಿನ ಅಂಶ ತೀರಾ ಕಡಿಮೆ.
  • ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಗ್ಲಾಸು ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.
  • ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.
  • ಮಜ್ಜಿಗೆ ನೀರಿನಲ್ಲಿ ಹೇರಳವಾಗಿ ಪೊಟಾಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್ ಹಾಗೂ ವಿಟಮಿನ್ ಬಿ12 ಇರುತ್ತದೆ.
  • ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಸಲ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com