
ನುಗ್ಗೆಸೊಪ್ಪು ಯಾರಿಗೆ ತಾನೇ ಗೊತ್ತಿಲ್ಲ.. ಹಳ್ಳಿಗಳಲ್ಲಿ ಯಥೇಚ್ಫವಾಗಿ ಬೆಳೆಯುವ ನುಗ್ಗೆಗಿಡದ ಸೊಪ್ಪು, ಕೋಡು, ಹೂವು ಎಲ್ಲವನ್ನೂ ಅಡುಗೆಗೆ ಸಾಮಾನ್ಯವಾಗಿ ಬಳಕೆ ಮಾಡುತ್ತಾರೆ. ತಿನ್ನಲು ವಿಶೇಷ ರುಚಿಯನ್ನು ಹೊಂದಿದ್ದು ಆರೋಗ್ಯಕ್ಕೂ ಪೂರಕವಾಗಿರುವ ನುಗ್ಗೆಸೊಪ್ಪನ್ನು ಆಷಾಢ ಮಾಸದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ.
ಒಂದಿಡಿ ನುಗ್ಗೆ ಸೊಪ್ಪು ತಿಂದರೆ ಒಂದು ಲೋಟ ಹಾಲು, ಒಂದು ಲೋಟ ಕಿತ್ತಳೆ ಹಣ್ಣಿನ ರಸ ಹಾಗೂ 7 ಬಾಳೆಹಣ್ಣು ತಿನ್ನುವುದಕ್ಕೆ ಸಮ. ಹೌದು ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ ವಿಟಮಿನ್ ಸಿ ಮತ್ತು ಕಣ್ಣಿನ ದೃಷ್ಟಿಗೆ ಅವಶ್ಯಕವಾದ ಜೀವಸತ್ವ 'ಎ ' ಹೇರಳವಾಗಿದೆ. ಇಂತ ನುಗ್ಗೆ ಸೊಪ್ಪನ್ನು ಪ್ರತಿ ದಿನ್ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ಹಲವು ರೋಗಗಳಿಂದ ದೂರವಿರುಬಹುದು.
ಮಕ್ಕಳಿಗೆ ನುಗ್ಗೆ ಸೊಪ್ಪು ತಿನ್ನಿಸುವುದರಿಂದ ದೇಹದಲ್ಲಿ ಖನಿಜಾಂಶ ಹೆಚ್ಚುತ್ತದೆ. ನುಗ್ಗೆಸೊಪ್ಪು ರಕ್ತ ಶುದ್ದೀಕರಿಸುವ ಜತೆಗೆ ಮೂಳೆಗಳನ್ನು ಬಲಪಡಿಸುತ್ತದೆ. ಅನೀಮಿಯಾ ದಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ಪೋಷಕಾಂಶ ಪೂರೈಸುತ್ತದೆ. ಭಾರತದಲ್ಲಿ ಬಹುತೇಕವಾಗಿ ಮಕ್ಕಳಿಗೆ ಕಾಡುವ ಸಂಜೆಗುರುಡು ಅಥವಾ ಇರುಳುಗಣ್ಣು ಸಮಸ್ಯೆಯನ್ನು ದೂರ ಮಾಡುತ್ತದೆ.
ಇನ್ನು ಬಾಣಂತಿಯರಿಗೆ ಹಾಗೂ ನವಜಾತ ಶಿಶುವಿಗೆ ನುಗ್ಗೆ ಸೊಪ್ಪು ತೀವ್ರ ಪರಿಣಾಮಕಾರಿ. ಬಾಣಂತಿಯರಿಗೆ ನುಗ್ಗೆಸೊಪ್ಪು ನೀಡುವುದರಿಂದ ರಕ್ತ ಹೀನತೆ ಸಮಸ್ಯೆ ದೂರವಾಗುತ್ತದೆ. ದೇಹದಲ್ಲಿ ಖನಿಜಾಂಶ ಹೆಚ್ಚು. ತಾಯಿ ತಿಂದ ಆಹಾರ ಮಗುವಿಗೆ ಎದೆಎ ಹಾಲಿನ ರೂಪದಲ್ಲಿ ಹೋಗುವುದರಿಂದ ನವಜಾತಶಿಶುವಿನ ಮೂಳೆಗಳು ಬಲಿಷ್ಠವಾಗಲು ಅನುಕೂಲವಾಗುತ್ತದೆ.
ಲೈಂಗಿಕ ನಿಶ್ಶಕ್ತಿ ಎನ್ನುವುದು ವಯಸ್ಸಾದಂತೆ ಕಾಡುವ ತೀರಾ ಸಾಮಾನ್ಯ ಖಾಯಿಲೆಗಳಲ್ಲೊಂದು. ನುಗ್ಗೆಸೊಪ್ಪಿನಲ್ಲಿ ಲೈಂಗಿಕ ಶಕ್ತಿ ಜಾಗೃತಗೊಳಿಸುವ ತಾಕತ್ತು ಇರುವಂತೆಯೇ ಜೀವನಿರೋಧಕ ಶಕ್ತಿಯೂ ಹೇರಳವಾಗಿದೆ. ನುಗ್ಗೆ ಸೊಪ್ಪು ಬಳಸಿ ಪ್ರತಿದಿನ ಚಹಾ ಮಾಡಿಕೊಂಡು ಕುಡಿಯುವುದರಿಂದ ಕಳೆದುಹೋದ ಲೈಂಗಿಕ ಶಕ್ತಿಯನ್ನು ಮತ್ತೆ ಪಡೆಯಬಹುದು.
ದೇಹದಲ್ಲಾದ ಯಾವುದೇ ಗಾಯವನ್ನು ಬೇಗನೆ ಶಮನಗೊಳಿಸುವ ಶಕ್ತಿ ಹೊಂದಿರುವ ನುಗ್ಗೆಸೊಪ್ಪಿನ ಚಹಾ ನಿತ್ಯ ಸೇವಿಸುತ್ತಿದ್ದರೆ ರಕ್ತದೊತ್ತಡ, ಸಕ್ಕರೆ ಖಾಯಿಲೆಯನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎನ್ನುವುದು ಈಗಾಗಲೇ ಸಾಬೀತಾಗಿದೆ. ಅತೀ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ನುಗ್ಗೆಸೊಪ್ಪು ಖಾಯಿಲೆಯ ವಿರುದ್ಧ ಹೋರಾಡುವಲ್ಲಿ ಸಹಕರಿಸುತ್ತದೆ.
Advertisement