ಔಷಧಿಯಾಗಿ ಲೋಳೆಸರ

ಲಿಲ್ಲಿಯೇಸಿಯಾ ಎಂಬ ಕುಟುಂಬಕ್ಕೆ ಸೇರಿದ ಲೋಳೆಸರವನ್ನು ಆಂಗ್ಲ ಭಾಷೆಯಲ್ಲಿ ಅಲೋಯಿ ಅಥವಾ ಅಲೊವೆರಾ ಎಂದು ಕರೆಯುತ್ತಾರೆ...
ಲೋಳೆಸರ
ಲೋಳೆಸರ
Updated on

ಲಿಲ್ಲಿಯೇಸಿಯಾ ಎಂಬ ಕುಟುಂಬಕ್ಕೆ ಸೇರಿದ ಲೋಳೆಸರವನ್ನು ಆಂಗ್ಲ ಭಾಷೆಯಲ್ಲಿ ಅಲೋಯಿ  ಅಥವಾ ಅಲೊವೆರಾ ಎಂದು ಕರೆಯುತ್ತಾರೆ.

 ಲೋಳೆಸರ ಸುಮಾರು ೩೦ ರಿಂದ ೬೦ ಸೆಂ.ಮೀ. ಎತ್ತರಕ್ಕೆ ಬೆಳೆಯಬಲ್ಲ ಅಗಲ ಎಲೆಯುಳ್ಳ ಸಸ್ಯ. ಎಲೆಯ ಎರಡೂ ಬದಿಗಳಲ್ಲಿ ಮುಳ್ಳುಗಳಿದ್ದು, ಇದರ ಎಲೆ ಚೂಪಾಗಿದೆ. ನಮ್ಮಲ್ಲಿ ಕಂಡು ಬರುವ ಲೋಳೆಸರದಲ್ಲಿ ಮುಖ್ಯವಾಗಿ ೨ ವಿಧಗಳಿವೆ. ಮೊದಲನೆ ಗಿಡ ಹಚ್ಚಹಸಿರಿನದ್ದಾದರೆ ಎರಡನೆಯದ್ದು ಗಿಳಿಯ ಬಣ್ಣದ್ದಾಗಿ ಎಲೆಯಲ್ಲಿ ಸಣ್ನ ಚುಕ್ಕೆಗಳಿರುತ್ತದೆ. ಇದರ ಎಲೆಯನ್ನು ತುಂಡರಿಸಿದಾಗ ಒಂದು ದಪ್ಪನಾದರಸ ಹೊರಬರುವದು. ಈ ರಸವನ್ನು ಸಂಸ್ಕರಿಸಿ ಔಷಧಿಯಾಗಿ ಬಳಸಲಾಗುವುದು.

ಆಯುರ್ವೇದದಲ್ಲಿ ಬಹಳ ಬೇಡಿಕೆಯಿರುವ ಲೋಳೆಸರ ಗಿಡದಲ್ಲಿ ಅಮಿನೊ ಆಸಿಡ್ ಮತ್ತು ವಿಟಮಿನ್ ಗಳಾದ ಎ, ಎಫ್, ಸಿ ಮತ್ತು ಬಿಗಳಿರುತ್ತವೆ.

ಲೋಳೆಸರದ ಎಲೆಯಲ್ಲಿ ಸಿಗುವ ಅಂಟು ರೀತಿಯ ಹೇರಳವಾದ ದ್ರವವನ್ನು ದೇಹದ ಯಾವುದೇ ಭಾಗಗಳಿಗೆ ಸುಟ್ಟ ಗಾಯವಾದ ತಕ್ಷಣವೇ ಹಚ್ಚಿದಲ್ಲಿ ಗಾಯದ ನೋವು, ಉರಿ ಸ್ವಲ್ಪ ಹೊತ್ತಿನಲ್ಲಿಯೇ ಕಡಿಮೆಯಾಗುತ್ತದೆ.

ತ್ವಚೆಯ ರಕ್ಷಣೆಯಲ್ಲಿ ಲೋಳೆಸರ ಅತ್ಯಂತ ಉಪಕಾರಿ. ಮುಖದ ಮೇಲೆ ನೆರಿಗೆ, ಕಪ್ಪು ಕಲೆ, ಮೊಡವೆ ಕಾಣಿಸಿಕೊಂಡಲ್ಲಿ ಲೋಳೆಸರದ ಜೆಲ್‍ನ್ನು ಒಂದು ತಿಂಗಳವರೆಗೆ ಹಚ್ಚುತ್ತಾ ಬಂದರೆ ಕಲೆ, ಸುಕ್ಕುಗುಟ್ಟುವಿಕೆ ಮಾಯವಾಗಿ ಹೊಸ ಕಾಂತಿ ಬರುತ್ತದೆ.

ಒಣ ಚರ್ಮದವರಿಗೆ ಲೋಳೆಸರದ ಜೆಲ್ ಉತ್ತಮ. ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಮೊದಲು ಇದನ್ನು ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟ ನಂತರ ಮುಖ ತೊಳೆದುಕೊಂಡು ಆಮೇಲೆ ಮೇಕಪ್ ಮಾಡಿಕೊಳ್ಳಬೇಕು.

ಪುರುಷರು ಶೇವ್ ಮಾಡಿಕೊಳ್ಳುವ ಸಂದರ್ಭದಲ್ಲಿ ಗಾಯಗಳಾದರೆ ಲೋಳೆಸರವನ್ನು ಹಚ್ಚಿಕೊಂಡರೆ ನೋವು, ಗಾಯ, ರಕ್ತ ಬರುವುದು ನಿಲ್ಲುತ್ತದೆ.

ಚಳಿಗಾಲದಲ್ಲಿ ಚರ್ಮ, ಒಡೆಯುವುದು ಅಥವಾ ಒಣಗುವುದು ಸಾಮಾನ್ಯ. ಆಗ ಲೋಳೆಸರದ ದ್ರವವನ್ನು ಜೇನಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ತೊಳೆದರೆ ಮುಖ ಕಾಂತಿಯುಕ್ತವಾಗುತ್ತದೆ.

ದೇಹದಲ್ಲಿ ಕೊಬ್ಬು ಸಂಗ್ರಹವಾದಾಗ ಇಲ್ಲವೇ ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯ ಭಾಗದಲ್ಲಿ ಗೆರೆಗಳು ಉಂಟಾದರೆ ಆ ಭಾಗದಲ್ಲಿ ನಿತ್ಯವೂ ಲೋಳೆಸರವನ್ನು ಹಚ್ಚುತ್ತಾ ಬಂದರೆ ಕೆಲ ದಿನಗಳಲ್ಲಿ ಗೆರೆಗಳು ಮಾಯವಾಗುತ್ತದೆ.

ಆಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಲೋಳೆಸರದ ದ್ರವವನ್ನು ಬೆಳಿಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ಸಮಸ್ಯೆ ನಿವಾರಣೆಯಾಗುತ್ತದೆ.

ಲೋಳೆಸರದ ರಸವನ್ನು ಮೂಲವ್ಯಾದಿ, ಮುಟ್ಟುದೋಷ, ಕ್ಯಾನ್ಸರ್, ಕಣ್ಣು ನೋವು, ಇತ್ಯಾದಿಗಳಲ್ಲಿ ಬಳಸುತ್ತಾರೆ. ಇತ್ತೀಚೆಗೆ ಇದರ ರಸವನ್ನು ಏಡ್ಸ್‌ ರೋಗಿಗಳಿಗೂ ಕೊಟ್ಟು ಪ್ರಯೋಗ ನಡೆಸುತ್ತಿದ್ದಾರೆ. ಇದರಿಂದ ತಯಾರಾಗುವ ಕುಮಾರಿ ಆಸವ ಬಹಳ ಪ್ರಖ್ಯಾತವಾದ ಮದ್ದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com