ಅತಿಯಾದ ಆ್ಯಂಟಿ ಬಯೋಟಿಕ್ಸ್ ಸೇವನೆ ಮಕ್ಕಳಲ್ಲಿ ಸಂಧಿವಾತಕ್ಕೆ ದಾರಿ

ಸಣ್ಣ ಪುಟ್ಟ ಸಮಸ್ಯೆಗಳಿಗೆಲ್ಲಾ ಆಂಟಿ ಬಯೋಟಿಕ್ಸ್ ಮೊರೆ ಹೋಗುವ ಪೋಷಕರೇ ಎಚ್ಚರ. ಅತಿಯಾದ ರೋಗನಿರೋಧಕ ಔಷಧಿಗಳ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಸಣ್ಣ ಪುಟ್ಟ ಸಮಸ್ಯೆಗಳಿಗೆಲ್ಲಾ ಆ್ಯಂಟಿ ಬಯೋಟಿಕ್ಸ್ ಮೊರೆ ಹೋಗುವ ಪೋಷಕರೇ ಎಚ್ಚರ.  ಅತಿಯಾದ ರೋಗನಿರೋಧಕ ಔಷಧಿಗಳ ಬಳಕೆಯಿಂದ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಸಂಧಿವಾತ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.  

ಮಕ್ಕಳಿಗೆ ಪದೇ ಪದೇ ಕಾಣಿಸಿಕೊಳ್ಳುವ ಜ್ವರ, ಶೀತ, ಕೆಮ್ಮಗಳಿಗೆ ರೋಗ ನಿರೋಧಕ ಔಷಧಿಯನ್ನು ಹೆಚ್ಚಾಗಿ ನೀಡಿದರೆ ಮಕ್ಕಳಲ್ಲಿ ದೃಷ್ಠಿ ದೋಷ ಹಾಗೂ ಸಂಧಿವಾತ ಸಮಸ್ಯೆಗಳು ಅತಿ ಚಿಕ್ಕ ವಯಸ್ಸಿನಲ್ಲೇ ಆರಂಭವಾಗುತ್ತದೆ.

ಸೋಂಕು ಅಥವಾ ಗಾಯಗಳಾದ ಸಂದರ್ಭದಲ್ಲಿ ಮಕ್ಕಳಿಗೆ ರೋಗ ನಿರೋಧಕ ಔಷಧಿಯನ್ನು ಪದೇ ಪದೇ ನೀಡಬಾರದು. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ನ್ಯೂಜೆರ್ಸಿಯ ರಟ್ಜರ್ ವಿಶ್ವವಿದ್ಯಾನಿಲಯ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.

ಬ್ರಿಟನ್ ನ ಸುಮಾರು 11 ದಶಲಕ್ಷ ಜನರ ಮೇಲೆ ಸಂಶೋಧನೆ ನಡೆಸಿತು.  450.000 ಮಕ್ಕಳಲ್ಲಿ ಸುಮಾರು 152 ಮಕ್ಕಳಿಗೆ ಬಾಲ್ಯದಲ್ಲೇ ಸಂಧಿವಾತ ಕಾಣಿಸಿಕೊಂಡಿರುವುದು ಸಾಬೀತಾಗಿದೆ.

 ಅತಿ ಹೆಚ್ಚು ಪ್ರಮಾಣದ ರೋಗ ನಿರೋಧಕ ಔಷಧಿ ಸೇವೆನಯಿಂದ ಈ ಮಕ್ಕಳಿಗೆ ಸಂಧಿವಾತ ಸಮಸ್ಯೆ ಎದುರಾಗಿದೆ ಎಂದು ವರದಿ ತಿಳಿಸಿದೆ. ರೋಗ ನಿರೋಧಕ ಔಷಧಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ 2 ವರ್ಷದಲ್ಲೇ ಮಕ್ಕಳಿಗೆ ಬಾಲ್ಯದ ಸಂಧಿವಾತ ಸಮಸ್ಯೆ ಕಾಣಿಸಿಕೊಂಡಿದೆ.

ಆ್ಯಂಟಿ ವೈರಲ್ ಮತ್ತು ಆ್ಯಂಟಿ ಫಂಗಸ್ ಔಷಧಿಗಳಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಆ್ಯಂಟಿ ಬಯೋಟಿಕ್ಸ್  ಔಷಧಿಯಿಂದ ಮಾತ್ರವೇ ಈ ಸಮಸ್ಯೆ ಎಂದು ಸಮೀಕ್ಷೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com