ಐಸ್ಪರ್ಮ್
ಐಸ್ಪರ್ಮ್

ಐಸ್ಪರ್ಮ್ ಮೂಲಕ ನೀವೇ ಮನೆಯಲ್ಲೇ ವೀರ್ಯ ಪರೀಕ್ಷೆ ಮಾಡಿಕೊಳ್ಳಿ

ತೈವಾನ್ ನ ಏಡ್ ಮಿಕ್ಸ್ (Aidmics) ಕಂಪನಿಯೊಂದು ಬಹಳ ಅಗ್ಗದ ದರದಲ್ಲಿ ವೀರ್ಯ ಪರೀಕ್ಷೆಯ ಸಾಧನವನ್ನು ಹೊರತಂದಿದೆ...
Published on

ತೈಪೇ: ವೀರ್ಯ ಗುಣಮಟ್ಟವನ್ನು ಅರಿಯಲು ಪರೀಕ್ಷೆ ಮಾಡಿಸಿಕೊಳ್ಳಬೇಕಾದರೆ ನೂರಾರು ರೂಪಾಯಿ ತೆರಬೇಕು. ಆದರೆ, ತೈವಾನ್ ನ ಏಡ್ ಮಿಕ್ಸ್ (Aidmics) ಕಂಪನಿಯೊಂದು ಬಹಳ ಅಗ್ಗದ ದರದಲ್ಲಿ ವೀರ್ಯ ಪರೀಕ್ಷೆಯ ಸಾಧನವನ್ನು ಹೊರತಂದಿದೆ.

ಈ ಸಾಧನವನ್ನು ಐಸ್ಪರ್ಮ್(ISperm) ಎಂದು ಕರೆಯಲಾಗಿದ್ದು, ಈ ವೀರ್ಯ ಪರೀಕ್ಷಕದಿಂದ ಮನೆಯಲ್ಲಿ ವೀರ್ಯ ಪರೀಕ್ಷೆ ಮಾಡಿಕೊಳ್ಳಬಹುದು. ಆದರೆ, ಫಲಿತಾಂಶ ಪಡೆಯಲು ಐಪ್ಯಾಡ್ ಬೇಕಾಗುತ್ತದೆ. ಈ ಮೂಲಕ ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಪಡೆಯಬಹುದಾಗಿದೆ.

ಇದನ್ನು ಬಳಸುವ ವಿಧಾನ
ಈ ಸಾಧನದಲ್ಲಿ ಬೆಳಕು ಬೀಳುವಂತೆ ವ್ಯವಸ್ಥೆ ಮಾಡಲಾಗಿದ್ದು ಆ ಪುಟ್ಟ ಕೊಳವೆಯೊಳಗೆ ವೀರ್ಯವನ್ನು ಬೇಕು. ಬಹಳ ಚಿಕ್ಕದಾದ ಸೂಕ್ಷ್ಮದರ್ಶಕವು(Microscope) ಈ ವೀರ್ಯವನ್ನು ಪರಿಶೀಲಿಸುತ್ತದೆ. ಬೆಳಕಿನ ಕಿರಣಗಳು ವೀರ್ಯಗಳ ಚಿತ್ರವನ್ನು ಐಪ್ಯಾಡ್ ಕ್ಯಾಮೆರಾಗೆ ರವಾನಿಸುತ್ತವೆ. ಅಲ್ಲಿ ವೀರ್ಯಗಳ ಪ್ರಮಾಣ ಮತ್ತು ಚಲನಶೀಲತೆಯನ್ನು ಗ್ರಹಿಸುವಂಥ ಸಾಫ್ಟ್ ವೇರನ್ನು ಐಪ್ಯಾಡ್'ನಲ್ಲಿ ಅಳವಡಿಸಲಾಗಿರುತ್ತದೆ.

ಎರಡು ವರ್ಷಗಳ ಹಿಂದೆಯೇ ಅಮೆರಿಕದ ಹಸುಗಳಿಗೆ ಈ ತಂತ್ರಜ್ಞಾನದ ಸಾಧನವನ್ನು ಉಪಯೋಗಿಸಲಾಗುತ್ತಿತ್ತು. ಈಗ ಮನುಷ್ಯರಿಗೂ ಸೇವೆ ವಿಸ್ತರಿಸಿದೆ ಕಂಪನಿ. ಸುಮಾರು 6-10 ಸಾವಿರ ರುಪಾಯಿಗೆ ಈ ಐಸ್ಪರ್ಮ್ ಸಾಧನ ಲಭ್ಯವಾಗುವ ಸಾಧ್ಯತೆ ಇದೆ. ಆದರೆ, ಈ ಪರೀಕ್ಷಕ ಎಷ್ಟು ನಿಖರವಾಗಿ ವೀರ್ಯ ಪರೀಕ್ಷೆ ನಡೆಸುತ್ತದೆ ಎಂಬುದು ಇನ್ನೂ ಖಚಿತವಾಗಿ ಗೊತ್ತಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com