ಕ್ಯಾನ್ಸರ್ ಪ್ರತಿರೋಧ ಶಕ್ತಿ ಹೆಚ್ಚಿಸುತ್ತದೆ ಜೇನು ತುಪ್ಪ!

ಜೇನು ತುಪ್ಪ ಕೆಮ್ಮು, ಶೀತ ಉಪಶಮನ ಮಾಡುವುದು ಮಾತ್ರವಲ್ಲ ಕ್ಯಾನ್ಸರ್ ಪ್ರತಿರೋಧ ಶಕ್ತಿಯನ್ನೂ ವರ್ಧಿಸುತ್ತದೆ...
ಜೇನು ತುಪ್ಪ
ಜೇನು ತುಪ್ಪ

ಜೇನು ತುಪ್ಪದಷ್ಟು ಮಧುರವಾಗಿರುವುದು ಬೇರೊಂದಿಲ್ಲ. ರುಚಿಗೆ ಮಾತ್ರವಲ್ಲ ಔಷಧಿಗಳ ಬಳಕೆಗೂ ಜೇನು ತುಪ್ಪವನ್ನು ಬಳಸಲಾಗುತ್ತದೆ. ಜೇನು ತುಪ್ಪದಲ್ಲಿನ ಔಷಧೀಯ ಗುಣಗಳನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸಲಾಗಿದೆ. ಭಾರತದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಜೇನುತುಪ್ಪವನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗಿತ್ತು. ಜೇನು ತುಪ್ಪ ಕೆಮ್ಮು, ಶೀತ ಉಪಶಮನ ಮಾಡುವುದು ಮಾತ್ರವಲ್ಲ  ಕ್ಯಾನ್ಸರ್ ಪ್ರತಿರೋಧ ಶಕ್ತಿಯನ್ನೂ ವರ್ಧಿಸುತ್ತದೆ.

ಜೇನು ತುಪ್ಪದಲ್ಲಿರುವ ಔಷಧೀಯ ಗುಣಗಳು

ಜೇನು ತುಪ್ಪದಲ್ಲಿರುವ ಫ್ಲೆವನೋಯ್ಡ್, ಆ್ಯಂಟಿ ಆಕ್ಸಿಡೆಂಟ್ ಮೊದಲಾದವುಗಳು ಕ್ಯಾನ್ಸರ್ ರೋಗವನ್ನು ತಡೆಯುತ್ತವೆ.

ಹೃದಯ ಸಂಬಂಧಿ ರೋಗ ತಡೆಗೂ ಜೇನು ಉತ್ತಮ

ಬ್ಯಾಕ್ಟೀರಿಯಾದಿಂದ ಬರುವ ಉದರ ಸಂಬಂಧಿ ರೋಗಗಳನ್ನು  ತಡೆಯಲು ಜೇನು ತುಪ್ಪ ಸೇವಿಸುವುದು ಒಳ್ಳೆಯದು.

ಫಂಗಸ್, ಬ್ಯಾಕ್ಟೀರಿಯಾ ಇವುಗಳನ್ನು ಜೇನು ತುಪ್ಪ ಪ್ರತಿರೋಧ ಮಾಡುತ್ತದೆ. ಜೇನು ಹುಳಗಳು ಹೈಡ್ರೋಜನ್  ಪೆರೋಕ್ಸೈಡ್‌ನಿಂದುಂಟಾಗುವ ಎನ್‌ಜೈಮ್ ಗಳನ್ನು ಉತ್ಪಾದಿಸುವ ಕಾರಣ ಜೇನು ಆ್ಯಂಟಿ ಬ್ಯಾಕ್ಟೀರಿಯಾ ಆಗಿ ಕಾರ್ಯ ನಿರ್ವಹಿಸುತ್ತದೆ.

ಕ್ರೀಡಾಪಟುಗಳ ಸಾಮರ್ಥ್ಯ ವೃದ್ಧಿಗೆ ಜೇನು ಉತ್ತಮ.

ಗಂಟಲು ನೋವು, ಕೆಮ್ಮು ಮೊದಲಾದವುಗಳಿಗೆ ಔಷಧವಾಗಿ ಜೇನು ತುಪ್ಪ ಬಳಸಬಹುದು.

ಮಕ್ಕಳಿಗೆ ರಾತ್ರಿ ಹೊತ್ತು ಕಾಣಿಸಿಕೊಳ್ಳುವ ಒಣ ಕೆಮ್ಮಿಗೆ ಇದು ಉತ್ತಮ ಔಷಧಿ.

ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಜೇನು ಸಹಾಯ ಮಾಡುತ್ತದೆ. ಜೇನು ತುಪ್ಪದಲ್ಲಿರುವ ಫ್ರುಕ್ಟೋಸ್ ಮತ್ತು ಗ್ಲುಕೋಸ್ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ.

ಮೂತ್ರನಾಳದಲ್ಲಿನ ರೋಗಗಳು, ಅಸ್ತಮಾ, ಅತಿಸಾರ ಮೊದಲಾದ ರೋಗಗಳಿಗೆ ಜೇನು ರಾಮಬಾಣ. ದೇಹದ ಭಾರ ಕಡಿಮೆ ಮಾಡಲು ಹಾಗೂ  ಕಣ್ಣಿನ ದೃಷ್ಟಿ ಶಕ್ತಿ ವರ್ಧಿಸಲು  ಜೇನು ಸಹಕಾರಿ.

ದೇಹದಲ್ಲಿ ಬಿಸಿ ನೀರು ಬಿದ್ದು ಗುಳ್ಳೆಗಳೆದ್ದಿದ್ದರೆ ಅಥವಾ ಸುಟ್ಟ ಗಾಯಗಳಾದರೆ ಬೇಗನೆ ವಾಸಿಯಾಗಲು ತ್ವಚೆಗೆ ಜೇನು ತುಪ್ಪ ಸವರಿ. ಇದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯ ಗುಣ ಗಾಯವನ್ನು ಬೇಗ ವಾಸಿ ಮಾಡುತ್ತದೆ.

ಜೇನು ಸೌಂದರ್ಯ ವರ್ಧಕ ಕೂಡ ಹೌದು. ತ್ವಚೆಗೆ ಜೇನು ತುಪ್ಪ ಹಚ್ಚಿ, ಉಗುರು ಬೆಚ್ಚಗಿನ ನೀರಿನಿಂದ ತೊಳೆದರೆ ತ್ವಚೆ ಕಾಂತಿಯುತವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com