ಉತ್ತಮ ನಿದ್ರೆಯಿಂದ ಹೆಚ್ಚುತ್ತೆ ನೆನಪಿನ ಶಕ್ತಿ

ಮನುಷ್ಯ ಬದುಕಲು ಆಹಾರ, ನೀರು, ಗಾಳಿ ಎಷ್ಟು ಅವಶ್ಯಕವೋ ಹಾಗೆಯೇ ಮನುಷ್ಯ ಆರೋಗ್ಯವಾಗಿರಲು ನಿದ್ದೆ ಕೂಡ ಅಷ್ಟೇ ಅವಶ್ಯಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮನುಷ್ಯ ಬದುಕಲು ಆಹಾರ, ನೀರು, ಗಾಳಿ ಎಷ್ಟು ಅವಶ್ಯಕವೋ ಹಾಗೆಯೇ ಮನುಷ್ಯ ಆರೋಗ್ಯವಾಗಿರಲು ನಿದ್ದೆ ಕೂಡ ಅಷ್ಟೇ ಅವಶ್ಯಕ. ರಾತ್ರಿಯಿಡಿಯ ಉತ್ತಮ ನಿದ್ದೆಯಿಂದ ಮನುಷ್ಯನಿಗೆ ಸ್ಮರಣಾ ಶಕ್ತಿ ಹೆಚ್ಚುತ್ತದೆ.

ಪ್ರತಿಯೊಬ್ಬ ಮನುಷ್ಯನಿಗೂ ಇಂತಿಷ್ಟು ಗಂಟೆ ಕಡ್ಡಾಯವಾಗಿ ನಿದ್ದೆ ಮಾಡುವುದು ಅವಶ್ಯಕ. ಹೀಗಾಗಿ ರಾತ್ರಿ ಚೆನ್ನಾಗಿ ನಿದ್ದೆ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಎಂದು ಲಂಡನ್ ನ ವಿಶ್ವ ವಿದ್ಯಾನಿಲಯವೊಂದು ತನ್ನ ಸಂಶೋಧನೆಯಿಂದ ತಿಳಿಸಿದೆ.

ನಿದ್ದೆ ನೆನಪಿನ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅನಾವಶ್ಯಕವಾಗಿ ಕಾಡುವ ಬೇಡದ ವಿಷಯಗಳನ್ನು ಮರೆಯಲು ಸಹಾಯ ಮಾಡುತ್ತದೆ. ನಿಯಮಿತ ಅವಧಿಯ ನಿದ್ದೆ ಮಾಡದ ಮನುಷ್ಯರಲ್ಲಿ ಹಿಂದಿನ 12 ಗಂಟೆಗಳಲ್ಲಿ ನಡೆದ ವಿಷಯಗಳನ್ನು ನೆನಪಿಟ್ಟುಕೊಳ್ಳುವಲ್ಲಿ ವೀಕ್ ಆಗಿರುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ಸ್ಮರಣಾ ಶಕ್ತಿಯನ್ನು ಹೆಚ್ಚಿಸಲು ಮಿದುಳಿನ ಕಾರ್ಯ ಪ್ರಮುಖವಾದದ್ದು. ಹೀಗಾಗಿ ನಮ್ಮ ಮಿದುಳಿಗೆ ಉತ್ತಮ ವಿಶ್ರಾಂತಿ ಸಿಕ್ಕಾಗ ಬಹಳ ಹಿಂದಿನ ಘಟನೆಗಳನ್ನುನೆನಪಿಟ್ಟುಕೊಳ್ಳುವಲ್ಲಿ ಸಹಾಯವಾಗುತ್ತದೆ. ನೆನಪಿನ ಶಕ್ತಿ ಹೆಚ್ಚುವುದರಿಂದ ಪರಿಣಾಮಕಾರಿಯಾದ ಘಟನೆಗಳ ಅನುಭವವನ್ನು ಮತ್ತೆ ಮೆಲುಕು ಹಾಕಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಉತ್ತಮ ನಿದ್ದೆ ನೆನಪಿನ ಶಕ್ತಿ ಹೆಚ್ಚಿಸುವುದರ ಜೊತೆಗೆ ಮರೆವಿನ ಕಾಯಿಲೆ ಯನ್ನು ಕಡಿಮೆ ಮಾಡುತ್ತದೆ.





ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com