ಕ್ಯಾನ್ಸರ್ ನಿರೋಧಕ, ಆರೋಗ್ಯವರ್ಧಕ ಬೆಳ್ಳುಳ್ಳಿ

ಒಂದು ಲೋಟ ಬಿಸಿ ನೀರಿಗೆ ಲಿಂಬೆ ರಸ ಮತ್ತು ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಕುಡಿದಲ್ಲಿ ಕ್ಯಾನ್ಸರ್ ನಿಯಂತ್ರಣಕ್ಕೆ ಒಳ್ಳೆಯದು. ಕ್ಯಾನ್ಸರ್ ರೋಗಿಗಳು ...
ಬೆಳ್ಳುಳ್ಳಿ
ಬೆಳ್ಳುಳ್ಳಿ
Updated on

ಅತಿ ಹೆಚ್ಚೆಚ್ಚು ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಸೇರಿದಂತೆ ಹಲವು ರೋಗಗಳಿಗೆ ಬೆಳ್ಳುಳ್ಳಿ ಉತ್ತಮ ಮನೆ ಮದ್ದಾಗಿದೆ.

ಬೆಳ್ಳುಳ್ಳಿ ಸುವಾಸನೆ ಹೊಂದಿರುವ ಜೊತೆಗೆ ಒಳ್ಳೆಯ ಮನೆಮದ್ದು ಕೂಡ. ಬೆಳ್ಳುಳ್ಳಿ ಹಾಕದ ಅಡುಗೆ ಅಡುಗೆಯೇ ಅಲ್ಲ.  ಪುರಾತನ ಕಾಲದಿಂದಲೂ ಬೆಳ್ಳುಳ್ಳಿ ಉಪಯೋಗದ ಬಗ್ಗೆ ಮಾಹಿತಿ ಇದೆ. ಆಯುರ್ವೇದದಲ್ಲಿ ಬೆಳ್ಳುಳ್ಳಿಯನ್ನು ಔಷಧಿಗಾಗಿ ಬಹಳಸಲಾಗುತ್ತದೆ.

ಸಲ್ಫರ್ ಪ್ರಮಾಣ ಹೆಚ್ಚು ಇರುವ ಬೆಳ್ಳುಳ್ಳಿ ಬಳಕೆಯಿಂದ ರಕ್ತ ಶುದ್ಧೀಕರಣವಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ರಕ್ತ ಶುದ್ದೀಕರಣವಾಗುತ್ತದೆ ದೇಹದಲ್ಲಿರುವ ಅನಗತ್ಯ ಅಂಶ ಹಾಗೂ ಟಾಕ್ಸಿನ್ ಅನ್ನು ಹೊರಹಾಕುತ್ತದೆ. ಜೊತೆಗೆ  ಗಂಟಲು ಬೇನೆ, ಕೆಮ್ಮು ಶೀತ ಮುಂತಾದ ರೋಗಗಳಿಗೆ ಉತ್ತಮ ಔಷಧಿಯಾಗಿದೆ.

ಬೆಳ್ಳುಳ್ಳಿ ಸೇವನೆಯು ಚರ್ಮವನ್ನು ಕಾಂತಿಯುಕ್ತಗೊಳಿಸುವುದಲ್ಲದೆ ನೆರಿಗೆಯನ್ನು ಇಲ್ಲವಾಗಿಸುತ್ತದೆ. ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗ ನಿಯಂತ್ರಣಕ್ಕೆ ಬೆಳ್ಳುಳ್ಳಿಯು ಮಿತ್ರನಂತೆ ಕೆಲಸಮಾಡುತ್ತದೆ. ಬೆಳ್ಳುಳ್ಳಿ ಎಸಳುಗಳನ್ನು ಸಕ್ಕರೆಯೊಂದಿಗೆ  ಹಾಲಿನಲ್ಲಿ ಬೇಯಿಸಿ ಹಲ್ವ ಮಾಡಿ ದಿನಕ್ಕೆರಡು ಬಾರಿ ಸೇವಿಸಿದಲ್ಲಿ ಸೊಂಟನೋವು ಮಾಯವಾಗುವುದು.

ಋತುಚಕ್ರದ ಸಮಯದಲ್ಲಿ ಹೊಟ್ಟೆನೋವು ಬರುತ್ತಿದ್ದರೆ ಒಂದು ವಾರಕ್ಕೆ ಮುಂಚೆ ಎರಡು ಎಸಳುಗಳನ್ನು ಬೆಲ್ಲದೊಂದಿಗೆ ಸೇರಿಸಿ ದಿನಾ ರಾತ್ರಿ ಮಲಗುವಾಗ ಸೇವಿಸತಕ್ಕದ್ದು.ನೀರಿಗೆ ಹಾಕಿ ಕಷಾಯ ಮಾಡಿ ಕುಡಿಯುವುದರಿಂದ ಸಂಧಿವಾತ, ನರದೌರ್ಬಲ್ಯಗಳಿಂದ ಚೇತರಿಕೆ ಪಡೆಯಬಹುದು. ಬೆಳ್ಳುಳ್ಳಿ ಗಡ್ಡೆಯನ್ನು ಸುಟ್ಟು ಪುಡಿಯನ್ನು ಅರಶಿನ  ಮತ್ತು ಬೆಣ್ಣೆಯೊಂದಿಗೆ  ಕಲಸಿ ಹಚ್ಚಿದರೆ  ಚರ್ಮದ ಮೇಲೇಳುವ  ಕುರವು ವಾಸಿಯಾಗುತ್ತದೆ.

ಹೊಟ್ಟೆಯೊಳಗೆ ಇನ್ ಫೆಕ್ಷನ್ ಉಂಟಾದಾಗ ಬೆಳ್ಳುಳ್ಳಿ ರಸ ಸೇವಿಸಿದರೆ ಸೋಂಕು ನಿವಾರಣೆಯಾಗುತ್ತದೆ. ಒಂದು ಲೋಟ  ಬಿಸಿ ನೀರಿಗೆ  ಲಿಂಬೆ ರಸ ಮತ್ತು ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಕುಡಿದಲ್ಲಿ ಕ್ಯಾನ್ಸರ್ ನಿಯಂತ್ರಣಕ್ಕೆ ಒಳ್ಳೆಯದು. ಕ್ಯಾನ್ಸರ್ ರೋಗಿಗಳು ದಿನಕ್ಕೆರಡು ಬಾರಿ ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು  ಕೊಂಚ ಜಜ್ಜಿ ಜೇನುತುಪ್ಪದಲ್ಲಿ ಹಾಕಿಟ್ಟರೆ ಕೆಲವುದಿನಗಳ ನಂತರ ಲೇಹ್ಯದಂತಾಗುವುದು. ಅದನ್ನು ಸ್ವಲ್ಪ ಸ್ವಲ್ಪವೇ ಸೇವಿಸುತ್ತಾ ಬಂದಲ್ಲಿ ಇಲ್ಲವೇ ಹಾಲಿಗೆ ಎರಡು ಎಸಳು ಬೆಳ್ಳುಳ್ಳಿ ಹಾಕಿ ಸ್ವಲ್ಪವೇ ಕುದಿಸಿ ದಿನಾ ರಾತ್ರಿ ಕುಡಿಯುವುದರಿಂದ ಸರ್ವವ್ಯಾಧಿಗಳು ನಿಯಂತ್ರಣಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ. ಆದರೆ ಹಸಿ ಬೆಳ್ಳುಳ್ಳಿಯಲ್ಲಿ ರಕ್ತವನ್ನು ತೆಳುಗೊಳಿಸುವ  ಗುಣಗಳಿರುವುದರಿಂದ ದಿನಕ್ಕೆರಡು ಎಸಳುಗಳಿಗಿಂತ ಹೆಚ್ಚು ಸೇವಿಸಕೂಡದು. ಉಷ್ಣಕಾರಕವೂ ಆಗಿರುವುದರಿಂದ ಬಿಸಿಲಿನಲ್ಲಿ ಕೆಲಸಮಾಡುವವರು ಹೆಚ್ಚಾಗಿ ಬಳಸುವಂತಿಲ್ಲ.

ಇನ್ನು ಮೂಳೆ ಮುರಿದ ವೇಳೆ ಅದಕ್ಕೆ ಕಟ್ಟು ಹಾಕುವಾಗ ಒಳಗೆ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಕಟ್ಟುವುದರಿಂದ ಮೂಳೆ ಶೀಘ್ರವೇ ಕೂಡಿಕೊಳ್ಳುತ್ತದೆ. ಇಷ್ಟೇ ಅಲ್ಲದೇ ಬೆಳ್ಳುಳ್ಳಿ ಹಲವು ರೋಗಗಳಿಗೆ ಪರಿಣಾಮಕಾರಿಯಾದ ಔಷಧವಾಗಿ ಕೆಲಸ ಮಾಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com