5 ತಾಸಿಗಿಂತ ಕಡಿಮೆ ನಿದ್ದೆ: ಮೆದುಳಿನ ಮೇಲೆ ಕುಡಿತದ್ದೇ ಪರಿಣಾಮ!

ಕಡಿಮೆ ನಿದ್ದೆ ಮಾಡಿ ಮಂಪರಿನಲ್ಲಿರುವವರನ್ನು ಕುಡಿದಿದ್ದೀಯಾ? ಎಂದು ತಮಾಷೆ ಮಾಡುತ್ತೇವೆ ಆದರೆ ಅಂತಹವರ ಮೆದುಳಿನ ಮೇಲೆ ಕುಡಿತದ್ದೇ ಪರಿಣಾಮವಿರುತ್ತದೆ...
ಕಡಿಮೆ ನಿದ್ದೆಯಿಂದ ಮೆದುಳಿನ ಮೇಲೆ ಮದ್ಯಪಾನದ ಎಫೆಕ್ಟ್(ಸಾಂದರ್ಭಿಕ ಚಿತ್ರ)
ಕಡಿಮೆ ನಿದ್ದೆಯಿಂದ ಮೆದುಳಿನ ಮೇಲೆ ಮದ್ಯಪಾನದ ಎಫೆಕ್ಟ್(ಸಾಂದರ್ಭಿಕ ಚಿತ್ರ)

ಲಂಡನ್: ಕಡಿಮೆ ನಿದ್ದೆ ಮಾಡಿ ಮಂಪರಿನಲ್ಲಿರುವವರನ್ನು ಕುಡಿದಿದ್ದೀಯಾ? ಎಂದು ತಮಾಷೆ ಮಾಡುತ್ತೇವೆ, ಆದರೆ ನಿಜವಾಗಿಯೂ ಮದ್ಯಪಾನ ಮಾಡಿದಾಗ ಮನುಷ್ಯನ ಮೆದುಳಿ ನ ಮೇಲೆ ಉಂಟಾಗುವ ಪರಿಣಾಮ ಕಡಿಮೆ ನಿದ್ದೆ ಮಾಡುವುದರಿಂದಲೂ ಆಗುತ್ತದೆ.

ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ನರವಿಜ್ಞಾನ ತಜ್ಞ ಪ್ರೊ.  ರುಸೇಲ್ ಫಾಸ್ಟರ್ ಪ್ರಕಾರ, 5 ಗಂಟೆಗಳಿಗಿಂತಲೂ ಕಡಿಮೆ ನಿದ್ದೆ ಮಾಡುವುದು ಮೆದುಳಿನ ಮೇಲೆ ಮದ್ಯಪಾನ ಮಾಡಿದಷ್ಟೇ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ನಾವು 5 ಗಂಟೆಗೂ ಮೀರಿ ನಿದ್ದೆ ಮಾಡುವುದಿಲ್ಲ ಎಂದು ಹೆಮ್ಮೆ ಪಟ್ಟುಕೊಳ್ಳುವವರನ್ನು ಧೂಮಪಾನ ಮಾಡುವವರನ್ನು ದೂಷಿಸುವಂತೆಯೇ ದೂಷಿಸಬೇಕು ಎಂದು ರುಸೇಲ್ ಫಾಸ್ಟರ್ ಹೇಳಿದ್ದಾರೆ.

ಕಡಿಮೆ ನಿದ್ದೆ ಮಾಡುವುದರಿಂದ ಹೆಚ್ಚು ಒತ್ತಡ ಉಂಟಾಗುತ್ತದೆ ಇದರಿಂದಾಗಿ ರಕ್ತದೊತ್ತಡ ಅಧಿಕವಾಗಿ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಡಿಮೆ ನಿದ್ದೆ ಮಾಡುವುದರಿಂದ ಕೇವಲ ಒತ್ತಡ ಉಂಟಾಗುವುದಷ್ಟೇ ಅಲ್ಲದೇ ನಾವು ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ರಾತ್ರಿ ವೇಳೆ ಬೇಗ ನಿದ್ದೆ ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ  ಎಂದು ಪ್ರೊ.ರುಸೇಲ್  ಅಭಿಪ್ರಾಯಪಟ್ಟಿದ್ದಾರೆ.

2010 ರಲ್ಲಿ ನಡೆದಿದ್ದ ವಾರ್ವಿಕ್ ವಿವಿ ಅಧ್ಯಯನದ ಪ್ರಕಾರ, ಪ್ರತಿ ರಾತ್ರಿ 6 ಗಂಟೆಗಿಂತಲೂ ಕಡಿಮೆ ನಿದ್ದೆ ಮಾಡುವವರು 8 ಗಂಟೆಗಳ ಕಾಲ ನಿದ್ದೆ ಮಾಡುವವರಿಗಿಂತಲೂ ಶೇ.12 ರಷ್ಟು ಹೆಚ್ಚು 65 ನೇ ವಯಸ್ಸಿನಲ್ಲೇ ನಿಧನರಾಗುತ್ತಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com