ಬಹುಪಯೋಗಿ ಜೇನುತುಪ್ಪ

ಆರೋಗ್ಯವಾಗಿ ಹಾಗೂ ಸ್ಲಿಮ್ ಆಗಿ ಮತ್ತು ಸುಂದರವಾಗಿ ಕಾಣಬೇಕೇಂಬುದು ಎಲ್ಲರ ಬಯಕೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆರೋಗ್ಯವಾಗಿ ಹಾಗೂ ಸ್ಲಿಮ್ ಆಗಿ ಮತ್ತು  ಸುಂದರವಾಗಿ ಕಾಣಬೇಕೇಂಬುದು ಎಲ್ಲರ ಬಯಕೆ. ಹೀಗಾಗಿ ದಪ್ಪಗಿರುವವರು ತಮ್ಮ ತೂಕ ಇಳಿಸಿಕೊಳ್ಳಲು ಪ್ರತಿ ನಿತ್ಯ ಡಯಟ್ ಮಾಡ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಹಲವು ಬಗೆಯ ಡಯಟ್ ಗೆ ಬೇಕಾದ ಆಹಾರ ಪದಾರ್ಥಗಳನ್ನು ಕೊಂಡು ಉಪಯೋಗಿಸುತ್ತಾರೆ.

ಇಂದಿನ ಡಯಟ್ ಮಾಡುವವರು ಬಳಸುವ ಪದಾರ್ಥಗಳಲ್ಲಿ ಜೇನುತುಪ್ಪಕ್ಕೆ ಸ್ಥಾನ ಇದ್ದೇ ಇರುತ್ತದೆ. ಮಲಗುವ ಮೊದಲು ಒಂದು ಗ್ಲಾಸ್ ಉಗುರು ಬೆಚ್ಚಗಿನ ಬಿಸಿ ನೀರಿಗೆ  ಚಮಚ ಜೇನು ತುಪ್ಪ ಹಾಗೂ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಜೇನು ತುಪ್ಪ ಹಾಕಿ 3 ವಾರಗಳ ಕಾಲ ನಿಯಮಿತವಾಗಿ ಕುಡಿಯುತ್ತಾ ಬಂದರೇ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು.

ಜೇನು ತುಪ್ಪವನ್ನು ಪ್ರತಿ ದಿನ ಬಿಸಿ ನೀರಿಗೆ ಹಾಕಿಕೊಂಡು ಕುಡಿಯುವುದರಿಂದ ದೇಹದಲ್ಲಿನ  ಕೊಬ್ಬನ್ನು ದಹಿಸುತ್ತದೆ. ಜೊತಗೆ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.  ಪಿತ್ತಜನಾಕಾಂಗ  ಗ್ಲುಕೋಸ್ ಅನ್ನು ಉತ್ಪಾದಿಸುತ್ತದೆ. ಇದಕ್ಕೆ ಜೇನುತುಪ್ಪ  ಇಂಧನದ ರೀತಿ ಕೆಲಸ ಮಾಡುತ್ತದೆ. ಹಾರ್ಮೋನ್ಸ್ ಅಸಮತೋಲನದಿಂದ ಬಳಲುತ್ತಿರುವವರು ಜೇನುತುಪ್ಪ ಸೇವನೆ ಮಾಡಿದರೆ ಉತ್ತಮ. ಜೇನುತುಪ್ಪ ಜೀರ್ಣ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹಸಿವನ್ನು ನಿಯಂತ್ರಿಸುವ ಜೇನು ತುಪ್ಪ ದೇಹರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೇನುತುಪ್ಪದಲ್ಲಿರುವ ಖನಿಜಾಂಶ ನರಗಳನ್ನು ಸದೃಢಗೊಳಿಸುತ್ತದೆ.

ಇನ್ನು ಜೇನುತುಪ್ಪವನ್ನು ಕಣ್ಣಿಗೂ ಕೂಡ ಉತ್ತಮ. ಸದಾ ಕಾಲ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು, ಒಂದು ಹನಿ ಜೇನು ತುಪ್ಪವನ್ನು ಬೆರಳಿಗೆ ಹಾಕಿಕೊಂಡು ನಿಧಾನವಾಗಿ ವೃತ್ತಾಕಾರದಲ್ಲಿ ಕಣ್ಣಿನ ಸುತ್ತ ಮಸಾಜ್ ಮಾಡಿದರೆ, ಕಣ್ಣಿಗೆ ಉಂಟಾಗಿರುವ ಸುಸ್ತು, ನಿಶಕ್ತತೆಯನ್ನು ಹೋಗಲಾಡಿಸುತ್ತೆ

ಇನ್ನು ಪ್ರತಿ ನಿತ್ಯ ನಾವು ಬಳಸುವ ಆಹಾರ ಪದಾರ್ಥಗಳಲ್ಲಿ ಸಕ್ಕರೆ ಬದಲಿಗೆ ಜೇನುತುಪ್ಪ ಬಳಸಬೇಕು. ರಾತ್ರಿ ಮಲಗುವ ಮುನ್ನ ಜೇನುತುಪ್ಪ ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಕ್ಯಾಲರಿ ಬರ್ನ್ ಮಾಡುತ್ತದೆ. ಒಟ್ಟಾರೆ ಜೇವುತುಪ್ಪ ಹಲವು ಕಾರಣಗಳಿಗೆ ವಿಶೇಷವಾಗಿದೆ.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com