ಪ್ಲೂವನ್ನು ನೀವೇ ಮುಗಿಸಬಹುದು

ಇನ್‍ಫ್ಲುಎನ್‍ಝಾ ಎಂಬುದು ಸಾಮಾನ್ಯವಾಗಿ ಪ್ಲೂ ಎಂದು ಕರೆಯಲಾಗುವ ವೈರಸ್‍ನ ಸೋಂಕಾಗಿದ್ದು ಅದು...
ಪ್ಲೂವನ್ನು ನೀವೇ ಮುಗಿಸಬಹುದು

ಬೆಂಗಳೂರು ಜೂನ್ 18, 2015: ಇನ್‍ಫ್ಲುಎನ್‍ಝಾ ಎಂಬುದು ಸಾಮಾನ್ಯವಾಗಿ ಪ್ಲೂ ಎಂದು ಕರೆಯಲಾಗುವ ವೈರಸ್‍ನ ಸೋಂಕಾಗಿದ್ದು ಅದು ಶ್ವಾಸಕಾಂಗ ವ್ಯವಸ್ಥೆಯ ಮೇಲೆ, ಅಂದರೆ ಮೂಗು, ಗಂಟಲು ಮತ್ತು ಶ್ವಾಸಕೋಶಗಳ ಮೇಲೆ, ದಾಳಿ ಮಾಡುತ್ತದೆ. ಇನ್‍ಫ್ಲುಎನ್‍ಝಾ ಎಲ್ಲಾ ವಯಸ್ಸಿನವರ ಮೇಲೂ ಪರಿಣಾಮ ಮಾಡುತ್ತದೆ, ಆದರೆ ಇದು ಮಕ್ಕಳಿಗೆ ಹಾಗೂ ರೋಗನಿರೋಧಕ ಶಕ್ತಿ ದುರ್ಬಲಗೊಂಡವರಿಗೆ ಪ್ರಾಣಘಾತಕವಾಗಬಲ್ಲದು.

ಇನ್‍ಫ್ಲುಎನ್‍ಝಾ ಜಗತ್ತಿನಾದ್ಯಾಂತ ಸಂಭವಿಸುತ್ತಿದ್ದು, ಅದರ ವಾರ್ಷಿಕ ದಾಳಿಯನ್ನು 5%-10% ವಯಸ್ಕರಲ್ಲಿ ಮತ್ತು 20%-30% ಮಕ್ಕಳಲ್ಲಿ ಎಂದು ಅಂದಾಜು ಮಾಡಲಾಗುತ್ತದೆ, ಭಾರತದಲ್ಲಿ ಈಚೆಗೆ ಪ್ರಕಟಿಸಲಾದ ಅಂಕೆಅಂಶಗಳ ಮಾಹಿತಿಯೊಂದರಲ್ಲಿ ಸುಮಾರು 5-10% ಶ್ವಾಸಕಾಂಗದ ತೀವ್ರ ಸೋಂಕುಗಳು(ARI) ಭಾರತದ ಕೊಡುಗೆ ಎಂದು ಹೇಳಲಾಗಿದೆ. ವರದಿ ಮಾಡಲಾಗಿರುವ ಇನ್‍ಫ್ಲುಎನ್‍ಝಾ ಯುಆರ್‍ಐ (URI) ಸಂಭವಿಸುವಿಕೆಯು 10/100 ಮಗು ವರ್ಷಕ್ಕೆ ಕಂಡುಬರುತ್ತದೆ.

ಇನ್‍ಫ್ಲುಎನ್‍ಝಾ ಪರಿಣಾಮಗಳು ಹೀಗಿವೆ:
•    ರೋಗ ಸಂಭವಿಸುವುದು ಮತ್ತು ಸಂಭವಿಸುವ ರೇಟ್ ಹೆಚ್ಚು
•    ರೋಗ ಹರಡುವುದು
•    ತೊಡಕುಗಳು
•    ಸಾವು
•    ಉತ್ಪಾದಕತೆಯಲ್ಲಿ ನಷ್ಟ

ಇನ್‍ಫ್ಲುಎನ್‍ಝಾ ಸೋಂಕು ತಗಲುವ ಅಪಾಯ ಅಧಿಕವಿರುವ ಮಕ್ಕಳಂತೆಯೇ ಆರೋಗ್ಯವಂತ ಮಕ್ಕಳಿಗೂ ಅದು ತಗಲುವ ಅಪಾಯ ಅಷ್ಟೇ ಇರುತ್ತದೆ. ಅಮೆರಿಕದಲ್ಲಿ 2009ರಲ್ಲಿ ಇದು ಸರ್ವಾವ್ಯಾಪಿ ರೋಗವಾಗಿ ಹರಡಿದ್ದಾಗ ಯಾವುದೇ ಅಂತರ್ನಿಹಿತ ವೈದ್ಯಕೀಯ ಸಮಸ್ಯೆಯೂ ಇಲ್ಲದಿದ್ದ ಮಕ್ಕಳಲ್ಲಿ 47% ಸಾವು ಸಂಭವಿಸಿತು. ಆಸ್ಪತ್ರೆಗೆ ಸೇರಿಸಲಾದ ಮಕ್ಕಳಲ್ಲಿ 43% ಮಂದಿ ಕೂಡ ಇನ್‍ಫ್ಲುಎನ್‍ಝಾ ತಗಲುವ ಮೊದಲು ಆರೋಗ್ಯವಾಗಿಯೇ ಇದ್ದರು. (ಪೀಡಿಯಾಟ್ರಿಕ್ಸ್ 2014; 134; ಇ1503-ಇ1519).
ಇನ್‍ಫ್ಲುಎನ್‍ಝಾ ಸೋಂಕು ಇರುವ ಯಾರಾದರೂ ಕೆಮ್ಮಿದಾಗ, ಸೀನಿದಾಗ ಅಥವಾ ಮಾತಾಡಿದಾಗ ಫ್ಲೂ ವೈರಸ್‍ಗಳು ಕಿರು ಹನಿಗಳಲ್ಲಿ ಗಾಳಿಯಲ್ಲಿ ತೇಲಿ ಬರುತ್ತವೆ. ಈ ಹನಿಗಳನ್ನು ಒಬ್ಬರು ನೇರವಾಗಿ ಉಸಿರಲ್ಲಿ ಎಳೆದುಕೊಳ್ಳಬಹುದು ಅಥವಾ ಹನಿಗಳು ತಗುಲಿರುವ ವಸ್ತುಗಳಿಂದ ಉದಾ. ಟೆಲಿಫೋನ್ ಅಥವಾ ಕಂಪ್ಯೂಟರ್ ಕೀಬೋರ್ಡ್‍ನಿಂದ ರೋಗಾಣುಗಳನ್ನು ಹತ್ತಿಕೊಂಡು ಕಣ್ಣು, ಮೂಗು, ಅಥವಾ ಬಾಯಿಗೆ ಸೇರಬಹುದು. ವೈರಸ ತಗುಲಿರುವ ಜ£ರು ಲಕ್ಷಣಗಳು ಕಾಣಿಸಿಕೊಳ್ಳುವ ಒಂದು ದಿನ ಮೊದಲಿಂದ ಹಿಡಿದು ಲಕ್ಷಣಗಳು ಆರಂಭವಾಗಿ 5 ರಿಂದ 10 ದಿನಗಳ ವರೆಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ಸರ್ವಸಾಮಾನ್ಯ ಲಕ್ಷಣಗಳು ಇವನ್ನು ಒಳಗೊಳ್ಳುತ್ತವೆ: ಇದ್ದಕ್ಕಿದ್ದಂತೆ ಶುರುವಾಗುವ ಅಧಿಕ ಜ್ವರ (101 ಫ್ಯಾ 101ºಫ್ಯಾ &102ºಫ್ಯಾ), ಸ್ನಾಯು/ದೇಹದ ದೀರ್ಘ ನೋವು, ಚಳಿ, ಸುಸ್ತು, ಮತ್ತು ಇದ್ದಕ್ಕಿದ್ದಂತೆ ಶರುವಾಗುವುದು. ಹೆಚ್ಚಿನ ಸರ್ತಿ ಇನ್‍ಫ್ಲುಎನ್‍ಝಾದಿಂದಾಗಿ ಜನರು ಶಾಲೆ ಅಥವಾ ಕೆಲಸವನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ; ಆದರೆ ಕೆಲವು ಪ್ರಸಂಗಗಳಲ್ಲಿ ನ್ಯುಮೋನಿಯದಂತಹ ಗಂಭೀರ ತೊಡಕುಗಳು ಉಂಟಾಗುತ್ತವೆ.
ಡಾ. ಭಾಸ್ಕರ್ ಶೆಣ್ಯೆ , ಕನ್ಸಲ್ಟೆಂಟ್, ಮಣಿಪಾಲ ಆಸ್ಪೆತ್ರೆ. ಹೇಳುತ್ತಾರೆ, “ಜನ ಸಮುದಾಯದಲ್ಲಿ ಮಕ್ಕಳು ರೋಗ ಹರಡುವ ಮುಖ್ಯ ಸಾಧನವಾಗಬಹುದು; ಯಾಕೆಂದರೆ ಅವರು ಹೆಚ್ಚಿನ ಸರ್ತಿ ಪರಸ್ಪರ ಸಂಪರ್ಕದಲ್ಲಿ ಹಾಗೂ ಮನೆಮಂದಿಯ ಸಂಪರ್ಕದಲ್ಲಿ ಇರುತ್ತಾರೆ, ಜೊತೆಗೆ ವಯಸ್ಕರ ಹೋಲಿಕೆಯಲ್ಲಿ ಮಕ್ಕಳಿಗೆ ಇನ್‍ಫ್ಲುಎನ್‍ಝಾ ಸೋಂಕು ತಗಲುವ ಸಾಧ್ಯತೆ ಹೆಚ್ಚು ಇರುತ್ತದೆ,

ಮಕ್ಕಳು ಹೆಚ್ಚು ದೀರ್ಘಕಾಲ ಹೆಚ್ಚು ಪ್ರಮಾಣದ ವೈರಸ್‍ಗಳನ್ನು ಹೊರಹಾಕಬಲ್ಲರು. 4-6 ವರ್ಷದ ಮಕ್ಕಳಲ್ಲಿ ರೋಗ ಪ್ರಸರಣ ಸಾಧ್ಯತೆ ಅತ್ಯಧಿಕವಾಗಿರುತ್ತದೆ(ತಾಯ್‍ಪೆಯ್).” ಶಾಲೆಯ ವಾತಾವರಣದಲ್ಲಿ ರೋಗದ ಸೀಸನ್‍ನಲ್ಲಿ ಇನ್‍ಫ್ಲುಎನ್‍ಝಾ ಹರಡುವುದನ್ನು ಚೆನ್ನಾಗಿ ದಾಖಲಿಸಲಾಗಿದೆ; ಅದು ವಿಸ್ಫೋಟಕವಾಗಿರಬಹುದು, ಬಲು ಬೇಗ ಹರಡಿ ಗಣನೀಯ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರ ಮೇಲೆ ಪರಿಣಾಮ ಮಾಡಬಹುದು –ರೋಗ ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬರುವುದು, ಕ್ಲಾಸ್‍ರೂವiಲ್ಲಿ ರೋಗ ತಗುಲಿರುವ ವ್ಯಕ್ತಿಯೊಂದಿಗೆ ಕೂತಿರುವುದು, ಹಾಸ್ಟೆಲ್‍ಗಳಲ್ಲಿ ವಾಸ, ದೊಡ್ಡದೊಡ್ಡ ಗುಂಪುಗಳನ್ನು ಒಳಗೊಳ್ಳುವ ಶಾಲಾ ಸಂಬಂಧಿ ಚಟುವಟಿಕೆಗಳು, ಇವುಗಳ ಮೂಲಕ ರೋಗ ಹರಡಬಹುದು.

ಇನ್‍ಫ್ಲುಎನ್‍ಝಾ ಮಕ್ಕಳಲ್ಲಿ ಗಣನೀಯ ಪ್ರಮಾಣದಲ್ಲಿ ರೋಗ ಮತ್ತು ಸಾವಿಗೆ ಹೊಣೆಯಾಗಿದೆ. ವಾರ್ಷಿಕ ಪಿಡುಗುಗಳ ಕಾಲದಲ್ಲಿ ಇನ್‍ಫ್ಲುಎನ್‍ಝಾ ದಾಳಿಗೆ ರೇಟು ಸತತವಾಗಿ ಮಕ್ಕಳಲ್ಲಿ ಅತ್ಯಧಿಕವಾಗಿದೆ. ರೋಗ ನಿಯಂತ್ರಣ ಹಾಗೂ ರೋಗ ಪ್ರತಿಬಂಧ ಕೇಂದ್ರಗಳ (ಅಆಅ) ಪ್ರಕಾರ ಈ ಹಿಂದಿನ ವರ್ಷಗಳಲ್ಲಿ 90% ಬಾಲಮೃತ್ಯುಗಳು ವ್ಯಾಕ್ಸಿನೇಶನ್ ಮಾಡಿಸಿಕೊಂಡಿರದ ಮಕ್ಕಳಲ್ಲಿ ಸಂಭವಿಸಿದವು. ಮಕ್ಕಳಲ್ಲಿನ ಇನ್‍ಫ್ಲುಎನ್‍ಝಾ ಕಾರಣವಾಗಿ ಸಂಭವಿಸಿದ ಖರ್ಚುವೆಚ್ಚಗಳು ಇವನ್ನು ಒಳಗೊಳ್ಳುತ್ತವೆ: ನೇರ ವೈದ್ಯಕೀಯ ಚಿಕಿತ್ಸೆಯ ಖರ್ಚುಗಳು ಹಾಗೂ ಕೆಲಸ ಸಾಧ್ಯವಾಗದೆ ಉಂಟಾದ ಉತ್ಪಾದಕತೆಯ ನಷ್ಟಗಳು.

ಡಾ. ಎಸ್.ಎಂ. ಪ್ರಸಾದ್, ಸಹಾಯಕ ಪ್ರಾಧ್ಯಾಪಕ. ಡಾ: ಅಂಬೇಡ್ಕರ್ ವೈದ್ಯಕೀಯ ಕಾಲೇಜು. ಹೇಳುತ್ತಾರೆ, ಯಾವುದೇ ದೇಶದಲ್ಲೂ ಮಕ್ಕಳು ಅಲ್ಲಿನ ಭವಿಷ್ಯವಾಗಿರುತ್ತಾರೆ; ಆದರೆ ಇನ್‍ಫ್ಲುಎನ್‍ಝಾದ ಭಾರೀ ಹೊರೆ ಅವರ ದೈನಂದಿನ ಜೀವನವನ್ನು ಕುಗ್ಗಿಸಬಹುದು. ಅವರು ಶಾಲೆಯನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ ಮತ್ತು ತುಂಬಾ ದುರ್ಬಲರೂ ಆಗುತ್ತಾರೆ. ಸರಿಯಾದ ಸಮಯದಲ್ಲೇ ಫ್ಲೂ ರೋಗವನ್ನು  ತಡೆಗಟ್ಟಲು ನಮ್ಮಲ್ಲಿ ವ್ಯಾಕ್ಸಿನೇಶನ್ ಇರುವಾಗ, ಹಾಗೇಕೆ ಮಾಡಬಾರದು?

2009-2010, 2013ರಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ಕೂಡ ಫ್ಲೂ ಸಾವಿರಾರು ಜನರನ್ನು ಕೊಂದಿದ್ದನ್ನು ನಾವು ಕಂಡಿದ್ದೇವೆ. ಅಗತ್ಯವಾದ ಸಾಧನಗಳೆಲ್ಲ ನಮ್ಮ ಹತ್ತಿರ ಇದ್ದೂ, ಅದರೊಂದಿಗೆ ಹೊಡೆದಾಟ ಮಾಡಲು ನಾವು ಯಾಕೆ ತಯಾರಿಲ್ಲ? ಇನ್‍ಫ್ಲುಎನ್‍ಝಾದ ವಿರುದ್ದ ಅತ್ಯುತ್ತಮ ರಕ್ಷಣೆಯೆಂದರೆ ಇನ್‍ಫ್ಲುಎನ್‍ಝಾ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳುವುದು.
ಡಾ. ಎಸ್.ಎಂ. ಪ್ರಸಾದ್, ಸಹಾಯಕ ಪ್ರಾಧ್ಯಾಪಕ. ಡಾ: ಅಂಬೇಡ್ಕರ್ ವೈದ್ಯಕೀಯ ಕಾಲೇಜು. ಹೇಳುತ್ತಾರೆ, “ಮಕ್ಕಳಿಗೆ ಇನ್‍ಫ್ಲುಎನ್‍ಝಾ ತಗಲುವ ಸಾಧ್ಯತೆ ಹೆಚ್ಚು ಇರುತ್ತದೆ, ಯಾಕೆಂದರೆ ಅವರಿಗೆ ತಮ್ಮ ಬಗ್ಗೆ ಗಮನವಿರುವುದಿಲ್ಲ. ತಮ್ಮ ಮಗು ಆರೋಗ್ಯಶಾಲಿಯಾಗಿದೆ ಹಾಗೂ ಸುಸ್ಥಿತಿಯಲ್ಲಿದೆ ಎಂಬುದನ್ನು ನೋಡಿಕೊಳ್ಳುವುದು ತಾಯಿತಂದೆಯರ ಕರ್ತವ್ಯವಾಗಿರುತ್ತದೆ. ಆರು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಎಲ್ಲರೂ ವರ್ಷಕ್ಕೊಮ್ಮೆ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳುವುದು ಉತ್ತುಮ.
ವ್ಯಾಕ್ಸಿನೇಶನ್ ಈಗ ಎರಡು ರೀತಿಯಲ್ಲಿ ಲಭ್ಯವಿದೆ: ಮೂಗಿನ ಮೂಲಕ ಮತ್ತು ಇಂಜೆಕ್ಷನ್ ಮೂಲಕ. ಇನ್‍ಫ್ಲುಎನ್‍ಝಾಕ್ಕೆ ಸಂಬಂಧಿಸಿದಂತೆ ಮೂಗಿನ ವ್ಯಾಕ್ಸಿನ್ ಇಂಜೆಕ್ಷನ್‍ಗಿಂತ ಹೆಚ್ಚು ರಕ್ಷಣಾ ಸಾಮಥ್ರ್ಯವನ್ನು ಹೊಂದಿರುತ್ತದೆ.

References:
1. Indian Pediatrics 2013; 50: 867-874; Journal of Infection (2014) 68, S100eS107
2. http://aapnews.aappublications.org/content/early/2014/12/05/aapnews.20141205-1
1.1 http://emedicine.medscape.com/article/972269-overview

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com