ಕಿಡ್ನಿಯ ಕಲ್ಲು ಕರಗಿಸುತ್ತದೆ ಪವಿತ್ರ ತುಳಸಿ

ಹಿಂದೂಗಳಿಗೆ ತುಳಸಿ ಅತ್ಯಂತ ಪವಿತ್ರ ಹಾಗೂ ಪೂಜ್ಯನೀಯ ಗಿಡ. ತುಳಸಿ ಪೂಜಿಸಿದರೇ ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ...
ತುಳಸಿ ಗಿಡ
ತುಳಸಿ ಗಿಡ

ಹಿಂದೂಗಳಿಗೆ ತುಳಸಿ ಅತ್ಯಂತ ಪವಿತ್ರ ಹಾಗೂ ಪೂಜ್ಯನೀಯ ಗಿಡ. ತುಳಸಿ ಪೂಜಿಸಿದರೇ ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಮಾನವ ದೇಹದಲ್ಲಿ ಉಂಟಾಗುವ ಹಲವು ಸಮಸ್ಯೆಗಳಿಗೆ ತುಳಸಿ ದಿವ್ಯೌಷದ.

ತುಳಸಿ ಬಳಕೆಯಿಂದಾಗುವ ಪ್ರಯೋಜನ ಒಂದೆರಡಲ್ಲ. ಅದನ್ನು ವಿವರಿಸುತ್ತಾ ಹೋದರೆ ಅಂತ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಬಹುಪಯೋಗಿ ಈ ತುಳಸಿ. ಆಯುರ್ವೇದ ಔಷಧಿ ತಯಾರಿಕೆಯಲ್ಲಿ ತುಳಸಿಗೆ ಅಗ್ರ ಸ್ಥಾನ. ಕೇವಲ ತುಳಸಿ ಎಲೆ ಮಾತ್ರವಲ್ಲದೇ ಅದರ ಹೂವು, ಬೀಜಗಳನ್ನು ಹಲವು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ.

ಹಿಂದೆಲ್ಲಾ ಕೆಮ್ಮು ಶೀತ, ಜ್ವರಕ್ಕೆ ಮನೆ ಮದ್ದಾಗಿ ತುಳಸಿಯನ್ನು ಬಳಸಾಗುತ್ತಿತ್ತು. ತುಳಸಿ ಉಪಯೋಗ ಅಷ್ಟಕ್ಕೆ ಸೀಮಿತವಾಗದೇ, ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುತ್ತದೆ ತುಳಸಿ. ಪ್ರತಿ ದಿನ ತುಳಸಿ ಎಲೆಗೆ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ಮೂತ್ರ ಪಿಂಡದಲ್ಲಿರುವ ಕಲ್ಲನ್ನು ಕರಗಿಸಿ ಮೂತ್ರದ ಮೂಲಕ ಹೊರಹಾಕುತ್ತದೆ.

ತುಳಸಿ ಹಲ್ಲು ನೋವಿಗೂ ಉತ್ತಮ ಮದ್ದು. ಹಲ್ಲು ನೋವು ಇರುವವರು ಪ್ರತಿದಿನ ತುಳಸಿ ಎಲೆಯನ್ನು ಜಗಿಯಬೇಕು. ಇದರಿಂದ ಬಾಯಿಯ ದುರ್ವಾಸನೆ ದೂರಾಗಿ ಹಲ್ಲು ನೋವು ಗುಣವಾಗುತ್ತದೆ.

ಇನ್ನು ಮಕ್ಕಳಿಗೆ ಪ್ರತಿದಿನ ತುಳಸಿ ರಸದ ಜೊತೆ ಜೇನು ತುಪ್ಪ ಬೆರೆಸಿ ತಿನ್ನಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಯುತ್ತದೆ. ಹಾಗೂ ಕಫ, ಶೀತ, ಕೆಮ್ಮು  ಶೀಘ್ರ  ವಾಸಿಯಾಗುತ್ತದೆ.

ಗಂಟಲು ನೋವು ಇರುವವರು ಬಿಸಿನೀರಿಗೆ ತುಳಸಿ ಎಲೆ ಹಾಕಿ ಕುದಿಸಿ.ನೀರು ಸ್ವಲ್ಪ ತಣ್ಣಗಾದ ನಂತರ ಅದರಿಂದ ಮಪಕ್ಕಳಿಸಿದರೇ  ಗಂಟಿನಲ್ಲಿರುವ ಕೀಟಾಣುಗಳನ್ನು ಸಾಯಿಸಿ, ಗಂಟಲು ನೋವನ್ನು ಹೋಗಲಾಡಿಸುತ್ತದೆ.

ತುಳಸಿಯಿಂದ ಹಲವು ಚರ್ಮರೋಗಗಳು ವಾಸಿಯಾಗುತ್ತವೆ. ಈಗಿನ ಬಹಳ ಜನರಿಗೆ ಕಾಡುವ ಚರ್ಮ ಸಮಸ್ಯೆಯನ್ನು  ತುಳಸಿ ರಸದಿಂದ ಗುಣ ಪಡಿಸಬಹುದು. ಎಕ್ಸಿಮಾ, ಸೋರಿಯಾಸಿಸ್ ರೋಗಗಳಿಗೆ ತುಳಸಿ ಉತ್ತಮ ಔಷಧ. ಇನ್ನು ಮೊಡವೆ ಮತ್ತು ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ತುಳಸಿ ರಸಕ್ಕೆ ಸ್ವಲ್ಪ ನಿಂಬೆ ರಸ ಬೆರೆಸಿ ಫೇಸ್ ಪ್ಯಾಕ್ ರೀತಿ ಬಳಸಿದರೆ ಕಪ್ಪು ಕಲೆ ಮಾಯವಾಗಿ  ಮೊಡವೆಗಳನ್ನು ಕಡಿಮೆಯಾಗಿಸುತ್ತದೆ.

ತಲೆ ಹೊಟ್ಟಿನ ಸಮಸ್ಯೆ ಇರುವವರು  ತುಳಸಿ ರಸ ಹಚ್ಚಿದರೆ ಅತಿ ಶೀಘ್ರವಾಗಿ ಹೊಟ್ಟಿನ ಸಮಸ್ಯೆ ದೂರಾಗುತ್ತದೆ. ಗ್ಯಾಸ್ಚ್ರಿಕ್ ಸಮಸ್ಯೆ ಇರುವವರು ತುಳಸಿಯನ್ನು ಪ್ರತಿದಿನ ತಿನ್ನುವುದರಿಂದ ಆಸಿಡಿಟಿ ಕಡಿಮೆಯಾಗುತ್ತದೆ.

ಇದಲ್ಲದೆ ಕಣ್ಣಿನ ತೊಂದರೆ, ತಲೆ ನೋವು ಸೇರಿದಂತೆ ಹಲವು ಸಮಸ್ಯೆಗಳಿಗೆ ತುಳಸಿ ಬಳಸುವುದರಿಂದ ಶೀಘ್ರ ಗುಣಮುಖವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com