ಜಯದೇವ ಆಸ್ಪತ್ರೆಯಿಂದ ವಿಯಟ್‍ನಾಮ್‍ಗೆ ನೇರ ಪ್ರಸಾರ ಕಾರ್ಯಾಗಾರ

ಏಷ್ಯಾ ಪೆಸಿಫಿಕ್ ಹೃದ್ರೋಗ ಮತ್ತು ರಚನಾತ್ಮಕ ಇಂಟರ್‍ವೆನ್ಷನ್ - 2015 ರ ಸಮ್ಮೇಳನವು ವಿಯಟ್‍ನಾಮ್‍ನ ಹೋ ಚಿನ್ ಮಿನ್ ನಗರದಲ್ಲಿ
ಜಯದೇವ ಆಸ್ಪತ್ರೆ ವೈದ್ಯರು
ಜಯದೇವ ಆಸ್ಪತ್ರೆ ವೈದ್ಯರು

ಬೆಂಗಳೂರು: ಏಷ್ಯಾ ಪೆಸಿಫಿಕ್ ಹೃದ್ರೋಗ ಮತ್ತು ರಚನಾತ್ಮಕ ಇಂಟರ್‍ವೆನ್ಷನ್ - 2015 ರ ಸಮ್ಮೇಳನವು ವಿಯಟ್‍ನಾಮ್‍ನ ಹೋ ಚಿನ್ ಮಿನ್ ನಗರದಲ್ಲಿ ದಿನಾಂಕ  5 ರಿಂದ 7 ನೇ ಮಾರ್ಚ್ 2015 ರವರೆಗೆ ನಡೆಯಿತು.  ವಿಶ್ವದಾದ್ಯಂತ ಸುಮಾರು 600 ಹೃದ್ರೋಗ ತಜ್ಞರು ಈ ಸಭೆಯಲ್ಲಿ ಭಾಗವಹಿಸಿದ್ದರು.  ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಹಾಗು ಪ್ರಾಧ್ಯಾಪಕರಾದ ಡಾ. ಸಿ. ಎನ್. ಮಂಜುನಾಥ್‍ರವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ, ಎಂಟು ರೋಗಿಗಳು ಹೃದ್ರೋಗ ಚಿಕಿತ್ಸೆಗೆ ಒಳಾಗಾಗಿದ್ದು, ಇದನ್ನು ವಿಯಟ್‍ನಾಮ್‍ಗೆ ನೇರ ಪ್ರಸಾರ ಮಾಡಲಾಯಿತು.  ಎಲ್ಲಾ ವಿಧಾನಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದ್ದು ಅದರಲ್ಲಿ ಹುಟ್ಟಿನಿಂದ ಬಂದಂತಹ ಹೃದ್ರೋಗ ರಂಧ್ರದ ಕಾಯಿಲೆಗಳು, ವಾಲ್ವಲೋಪ್ಲಾಸ್ಟಿ (ಕವಾಟಗಳನ್ನು ಅಗಲಗೊಳಿಸುವಿಕೆ) ಮತ್ತು ಕೆಲವು ಇತರೆ ಅಪರೂಪದ ವಿಧಾನಗಳನ್ನು ಒಳಗೊಂಡಿತ್ತು. ಈ ಕಾರ್ಯಾಗಾರದಲ್ಲಿ ಹೃದ್ರೋಗ ತಜ್ಞರುಗಳಾದ ಡಾ. ಸಿ.ಎನ್.ಮಂಜುನಾಥ್,  ಡಾ. ಜಯರಂಗನಾಥ್, ಡಾ. ಕೆ.ಹೆಚ್. ಶ್ರೀನಿವಾಸ್, ಡಾ. ನಾಗೇಶ್ವರ ರಾವ್, ಡಾ. ಎಡ್ವಿನ್ ಫ್ರಾನ್ಸಿಸ್, ಡಾ. ಬಿ.ಸಿ.ಶ್ರೀನಿವಾಸ್, ಡಾ. ಸತೀಶ್ ಮತ್ತು ಡಾ. ಉಷಾರವರು ಚಿಕಿತ್ಸೆ ವಿಧಾನಗಳನ್ನು ನೆರವೇರಿಸಿದರು.

ಡಾ.ಸಿ.ಎನ್.ಮಂಜುನಾಥ್‍ರವರ ಪ್ರಕಾರ – ಇತ್ತೀಚಿನ ದಿನಗಳಲ್ಲಿ ಶೇ. 50% ರಷ್ಟು ಹೃದಯದ ಕಾಯಿಲೆಗಳು ತೆರೆದ ಹೃದಯ ಶಸ್ತ್ರಚಿಕಿತ್ಸೆಯ ವಿಧಾನವನ್ನು ಬಳಸದೆ ವಾಸಿಮಾಡಲಾಗುತ್ತಿದೆ.  ಆದರೆ ಹಿಂದಿನ ದಿನಗಳಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಮೂಲಕವೇ ಮಾಡಲಾಗುತ್ತಿತ್ತು. ಈ ಚಿಕಿತ್ಸೆಗೆ ಒಳಗಾದ 8 ರೋಗಿಗಳ ಪೈಕಿ, 6 ರೋಗಿಗಳು ಹೃದಯ ರಂಧ್ರಗಳನ್ನು ಹೊಂದಿದ್ದು; ಕೆಲವರು ಕವಾಟದ ತೊಂದರೆಯಿಂದ ಬಳಲುತ್ತಿದ್ದು,  ಮತ್ತೆ ಕೆಲವರು ಸಂಕುಚಿತಗೊಂಡ ಅಪಧಮನಿಯ ತೊಂದರೆಯಿಂದ ಬಳಲುತ್ತಿದ್ದರು. ಈ ಹೃದಯ ರಂಧ್ರಗಳನ್ನು ಚತ್ರಿ ಸಾಧನಗಳನ್ನು (UmbrellaDevices) ಬಳಸಿಕೊಂಡು ಮುಚ್ಚಲಾಯಿತು ಮತ್ತು ಉಳಿದ ರೋಗಿಗಳು ವಾಲ್ವಲೋಪ್ಲಾಸ್ಟಿ ಚಿಕಿತ್ಸೆಯನ್ನು ಮಾಡಿಸಿಕೊಂಡಿರುತ್ತರೆ.  

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಕಳೆದ 5-6 ವರ್ಷಗಳಲ್ಲಿ ವಿಶ್ವದ ಇತರ ಭಾಗಗಳಿಗೆ ಇಂತಹ ಹಲವು ಕಾರ್ಯಾಗಾರಗಳನ್ನು ನೆರವೇರಿಸಿದ್ದು, ಇದೂ ಕೂಡ ಅದರಲ್ಲಿ ಒಂದಾಗಿದೆ.  ಇಂಟರ್‍ನ್ಯಾಷನಲ್ ಹೃದಯ ಸಮುದಾಯವು (TheInternational Cardiology Community) ನಮ್ಮ ಸಂಸ್ಥೆಯನ್ನು ಉತ್ಕೃಷ್ಟ ಸಂಸ್ಥೆಯೆಂದು ಗುರುತಿಸಿದ್ದು - ನಿಯಮಿತವಾಗಿ ಚಿಕಿತ್ಸಾ ವಿಧಾನಗಳನ್ನು ಮಾಡಲು ಮನವಿಯನ್ನು ಮಾಡಿರುತ್ತಾರೆ ಎಂದು                ಡಾ.ಸಿ.ಎನ್. ಮಂಜುನಾಥ್ ರವರು ತಿಳಿಸಿರುತ್ತಾರೆ.

ಇಂತಹ ಕಾರ್ಯಾಗಾರಗಳು ಈ ರೀತಿಯ ವೈಜ್ಞಾನಿಕ ವಿಚಾರ ವಿನಿಮಯ ಮತ್ತು ಹೊಸ ತಂತ್ರಗಳನ್ನು ಮುಂದುವರಿಸಿಕೊಂಡು ಹೋಗಲು ಸಹಾಯವಾಗಿವೆ.  ಈ ಸಭೆಯಲ್ಲಿ ಹಾಜರಿದ್ದ ಪ್ರತಿನಿಧಿಗಳು ನಮ್ಮ ಸಂಸ್ಥೆಯನ್ನು ಇನ್ನು ಮುಂದೆಯೂ ಕೂಡ ಈ ರೀತಿಯ ನೇರ ಪ್ರಸರಣ ನಿರೀಕ್ಷಿಸುತ್ತೇವೆಂದು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com