ಬಾಳೆ ಹಣ್ಣು ಮನಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸುತ್ತದೆ, ಕೇವಲ ಜೀರ್ಣ ಶಕ್ತಿ ಅಲ್ಲದೇ ಇನ್ನು ಅನೇಕ ರೀತಿಯಲ್ಲಿ ಮಾನವ ದೇಹದ ಆರೋಗ್ಯ ಕಾಪಾಡುವಲ್ಲಿ ಬಾಳೆಹಣ್ಣು ಉಪಾಯೋಗಕ್ಕೆ ಬರುತ್ತದೆ.
ಬಾಳೆ ಹಣ್ಣಿನಿಂದ ಆಗುವಂತ ಉಪಯೋಗಗಳು
ಹೃದಯಕ್ಕೆ ಹಾಗೂ ಹೃದಯ ಬಡಿತಕ್ಕೆ ಸಹಕಾರಿಯಾಗಿ, ರಕ್ತದೊತ್ತಡವನ್ನು ನಿವಾರಿಸುತ್ತದೆ.
ಟ್ರೈಪ್ಟೋಫನ್ ನಿಂದ ಒತ್ತಡ ಹೆಚ್ಚಾಗಿದ್ದರೆ ಬಾಳೆ ಹಣ್ಣು ಸೇವನೆಯಿಂದ ಇದು ನಿವಾರಣೆಯಾಗುತ್ತದೆ.
ಶ್ರಮದಾಯಕ ಕೆಲಸ ಮಾಡುವ ಮುನ್ನ ಎರಡು ಬಾಳೆಹಣ್ಣು ಸೇವಿಸಬೇಕು, ಇದರಿಂದ ಶಕ್ತಿ ಬರುವುದಲ್ಲದೇ, ಬ್ಲಡ್ ಶುಗರ್ ನನ್ನು ಕುಸಿಯದಂತೆ ಕಾಪಾಡುತ್ತದೆ.
ಬಾಳೆ ಹಣ್ಮು ಸೇವನೆ ಮಾಡಿ ವರ್ಕ್ ಔಟ್ ಮಾಡಿದರೆ, ಸ್ನಾಯು ಎಳೆತ ನಿವಾರಣೆಯಾಗುತ್ತದೆ.
ಮೂತ್ರವಿಸರ್ಜನೆ ಸಂದರ್ಭದಲ್ಲಿ ಉಂಟಾಗುವ ಕ್ಯಾಲ್ಸಿಯಂ ನಷ್ಟವನ್ನು ಪ್ರತಿರೋಧಿಸಲು ಬಾಳೆಹಣ್ಣು ಪೂರಕವಾಗಿ ಕೆಲಸ ಮಾಡುತ್ತದೆ.
ಬಿಳಿ ರಕ್ತದ ಕಣಗಳನ್ನು ಹೆಚ್ಚಿಸುತ್ತದೆ. ಅಲ್ಲದೇ, ವಿಟಮಿನ್ ಬಿ-6 ನನ್ನು ಹೆಚ್ಚಿಸುತ್ತದೆ.
ರಕ್ತವನ್ನು ಚಲವಲನವನ್ನು ಹೆಚ್ಚಿಸಿ, ರಕ್ತಹೀನತೆ ನೀವಾರಣೆ ಮಾಡುತ್ತದೆ.
ಹೃದಯಘಾತ ಮತ್ತು ಪಾರ್ಶ್ವವಾಯುನಿಂದ ಕಾಪಾಡುತ್ತದೆ.
ಕರುಳಿನ ವ್ಯವಸ್ಥೆಯಲ್ಲಿ ಉಂಟಾಗುವ ಸಮಸ್ಯೆಯನ್ನು ನಿವಾರಣೆ ಮಾಡಲು ಇದು ಸಹಕಾರಿ.
ದೇಹದ ಮೂಳೆಯನ್ನು ಗಟ್ಟಿಯಾಗಿಸುತ್ತದೆ.
ಕಿಡ್ನಿ ಕ್ಯಾನ್ಸರ್ ತಡೆಯುವಲ್ಲಿ ಸಹಕಾರಿ
ಹೊಟ್ಟೆ ಹುಣ್ಣನ್ನು ನಿವಾರಣೆ ಮಾಡುತ್ತದೆ.
ದೇಹದಲ್ಲಿ ತುರಿಕೆ ಮತ್ತು ಕಿರಿಕಿರಿ ಇದ್ದರೆ, ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜಿ, ತಕ್ಷಣವೇ ನಿವಾರಣೆಯಾಗುತ್ತದೆ.
ಬೇಸಿಗೆಗಾಲದಲ್ಲಿ ಜ್ವರ ಬಂದಾಗ ಬಾಳೆಹಣ್ಣು ಸೇವನೆಯಿಂದ ದೇಹ ತಂಪಾಗುವುದಲ್ಲದೇ, ಜ್ವರವನ್ನು ಕಡಿಮೆ ಮಾಡುತ್ತದೆ.