ಸಂಗಾತಿ ಆಯ್ಕೆಗೆ ಇಲ್ಲಿದೆ ಸಲಹೆಗಳು...

ಜೀವನ ಸಂಗಾತಿ ಬಗ್ಗೆ ಎಲ್ಲರೂ ತಮ್ಮದೇ ಆದಂತ ಕನಸು ಕಟ್ಟಿರುತ್ತಾರೆ. ನನ್ನ ಸಂಗಾತಿ ಹೀಗೆ ಇರಬೇಕು ಎಂದು ಅಂದುಕೊಂಡು ಮದುವೆ ಆಗುತ್ತಾರೆ. ಆದರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೀವನ ಸಂಗಾತಿ ಬಗ್ಗೆ ಎಲ್ಲರೂ ತಮ್ಮದೇ ಆದಂತ ಕನಸು ಕಟ್ಟಿರುತ್ತಾರೆ. ನನ್ನ ಸಂಗಾತಿ ಹೀಗೆ ಇರಬೇಕು ಎಂದು ಅಂದುಕೊಂಡು ಮದುವೆ ಆಗುತ್ತಾರೆ. ಆದರೆ, ಮದುವೆ ಆಗುತ್ತಿದ್ದಂತೆ ನನ್ನ ಆಯ್ಕೆ ತಪ್ಪಾಗಿದೆ ಎಂದು ಕೊರಗುವುದು ಸಹಜವಾಗಿಬಿಟ್ಟಿದೆ. ಸಂಗಾತಿ ಆಯ್ಕೆಯಲ್ಲಿ ಅನೇಕ ಮಂದಿ ಎಡವುದು ಸಾಮಾನ್ಯವಾಗಿದೆ. ಬಾಳ ಸಂಗಾತಿ ಆಯ್ಕೆಯಲ್ಲಿ ಎಡವಿದರೆ, ಬಾಳಲ್ಲಿ ಎಡವಿದಂತಾಗುತ್ತದೆ. ಅದಕ್ಕಾಗಿ ಸಂಗಾತಿ ಆಯ್ಕೆಯಲ್ಲಿ ಕೆಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.
ಉತ್ತಮ ಸಂಗಾತಿಗೆ ಆಯ್ಕೆ ಮಾಡಿಕೊಳ್ಳುಲು ಇಲ್ಲಿದೆ ಕೆಲವು ಸಲಹೆಗಳು...

ನಿಮ್ಮ ಬಳಿ ಬೇಗನೆ ಬೆರತುಕೊಳ್ಳುವಂತಹವರು
ನಿಮ್ಮ ಬಳಿ ಬಹಳ ಆರಾಮಾಗಿ ಮಾತನಾಡುವಂತವರನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಬಳಿ ಮಾತನಾಡುತ್ತಿರಬೇಕಾದರೆ, ಯಾವುದೇ ರೀತಿಯ ಸಂಕೋಚ ಅಥವಾ ಇರಿಸುಮುರಿಸು ಕಾಡಬಾರದು. ಸಂವಹನ ನಡೆಸಬೇಕಾದರೆ, ಆ ಮಾತು ಬೇಸರ ತರಬಾರದು. ಪರಸ್ಪರ ಮಾತನಾಡುತ್ತಿರಬೇಕಾದರೆ, ನಿಮ್ಮ ಮಾತನ್ನು ಅರ್ಥೈಸಿಕೊಂಡು ಪ್ರತಿಕ್ರಿಯೆ ನೀಡುವಂತಹ ಸಂಗಾತಿಯಾಗಬೇಕು.

ತಮ್ಮದೇ ಅಭಿರುಚಿ ಹೊಂದಿರುವಂತವರು
ನೀವು ಆಯ್ಕೆ ಮಾಡಿಕೊಳ್ಳುವ ಸಂಗಾತಿ ತಮ್ಮದೇ ಅಭಿರುಚಿಗಳನ್ನು ಹೊಂದಿದ್ದರೆ ಉತ್ತಮ. ಇಬ್ಬರಿಗೂ ಒಂದೇ ವಿಷಯದಲ್ಲಿ ಆಸಕ್ತಿ ಇದ್ದರೆ ಉತ್ತಮ. ಇದರಿಂದ ವೈಮನಸ್ಸು ಉಂಟಾಗುವುದು ಕಡಿಮೆಯಾಗುತ್ತದೆ. ಹಾಗಂತ ಪ್ರತಿಯೊಂದು ವಿಷಯದಲ್ಲಿ ಒಂದೇ ಅಭಿರುಚಿ ಹೊಂದಿರಬೇಕೆಂದಲ್ಲ. ಕೆಲವು ಸೂಕ್ಷ್ಮ ವಿಚಾರಗಳು ವಿಕೋಪಕ್ಕೆ ತಿರುಗತ್ತವೆ. ಅಂತಹ ವಿಚಾರಗಳಲ್ಲಿ ಒಂದೇ ಅಭಿಪ್ರಾಯ ಇದ್ದರೆ ಒಳ್ಳೆಯದು. ಉದಾಹರಣೆಗೆ.. ನಿವು ಸಿನಿಮಾ ಹೆಚ್ಚಾಗಿ ನೋಡುತ್ತಿದ್ದರೆ, ನೀವು ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವವರೊಂದಿಗೆ ಕಾಲ ಕಳೆಯಲು ಇಚ್ಛಿಸುತ್ತೀರಿ. ಸಿನಿಮಾ ಬಗ್ಗೆ ಆಸಕ್ತಿ ಹೊಂದಿರುವ ಸಂಗಾತಿ ಆಯ್ಕೆ ಮಾಡಿಕೊಂಡರೆ,ಇಬ್ಬರನ್ನು ಸಿನಿಮಾ ನೋಡುವಾಗ ಸಂತೋಷದಿಂದಿರುತ್ತೀರಿ.

ತಿಳುವಳಿಕೆವುಳ್ಳ ಸಂಗಾತಿ ಆಯ್ಕೆ ಉತ್ತಮ
ನೀವು ಆಯ್ಕೆ ಮಾಡಿಕೊಳ್ಳುವ ಸಂಗಾತಿ ನಿಮಗಿಂತ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದರೆ, ಅದು ನಿಮಗೆ ಭಯ ಹುಟ್ಟಿಸುತ್ತದೆ. ಹಾಗಾಗಿ, ಎಷ್ಟೇ ಸಾಧನೆ ಮಾಡಿದರೂ, ನಿಮ್ಮನ್ನು ಅಣಕಿಸದೇ, ನಿಮ್ಮನ್ನು ಅರ್ಥಮಾಡಿಕೊಂಡು ಹೋಗುವಂತಹ ಸಂಗಾತಿ ಆಯ್ಕೆ ಉತ್ತಮ. ತಾನು ಮೇಲೂ, ನೀನು ಕೀಳು ಎಂಬ ಮನೋಭಾವವಿಲ್ಲದೇ ತಿಳುವಳಿಕೆಯಿಂದ ನಡೆದುಕೊಳ್ಳುವ ಸಂಗಾತಿ ಆಯ್ಕೆ ಉತ್ತಮ. ಯಾವುದೇ ವ್ಯಕ್ತಿಯ ಬಗ್ಗೆ ಕೀಳರಿಮೆ ಹೊಂದಂತಹ ಸಂಗಾತಿ ಆಯ್ಕೆ ಅಗತ್ಯ.

ಕುಟುಂಬಕ್ಕೆ ತಕ್ಕ ಸಂಗಾತಿ ಆಯ್ಕೆ ಅಗತ್ಯ
ನಿಮ್ಮ ಕುಟುಂಬದ ಘನತೆಗೆ ತಕ್ಕಂತೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಸಂಗಾತಿ ನಿಮ್ಮ ಜೊತೆಯಲ್ಲದೇ, ನಿಮ್ಮಕುಟಂಬದ ಸದಸ್ಯರೊಡನೆಯೂ ಬೆರೆಯಬೇಕಾಗುತ್ತದೆ. ಈ ವಿಷಯದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇತ್ತೀಚೆಗೆ, ಗಂಡ ಹೆಂಡತಿ ಸಂಬಂಧ ಗಟ್ಟಿಯಾಗಿದ್ದರು, ಕುಟುಂಬ ಸದಸ್ಯರ ನಡುವೆ ಮನಸ್ಥಾಪ ಹೆಚ್ಚಾಗಿರುತ್ತದೆ. ಇದಕ್ಕೆ ಘನತೆ ಗೌರವವೂ ಕಾರಣವಾಗಿರುತ್ತದೆ. ಹಾಗಾಗಿ, ನಿಮ್ಮ ಕುಟುಂಬಕ್ಕೆ ತಕ್ಕಂತೆ ಸಂಗಾತಿ ಆಯ್ಕೆ ಉತ್ತಮ. ಕುಟುಂಬದ ಘನತೆಗೆ ಸ್ವಲ್ಪ ಹೆಚ್ಚಾದರೂ, ಕಡಿಮೆಯಾದರೂ ಮನಸ್ತಾಪ ಉಂಟಾಗಿ, ಕೊನೆಗೇ ಗಂಡ ಹೆಂಡಿರ ಜಗಳ ಗ್ಯಾರಂಟಿ. ಹಾಗಾಗಿ, ಕುಟುಂಬ ಸದಸ್ಯರ ಅಭಿರುಚಿ ಮತ್ತು ನಿಮ್ಮ ಅಭಿರುಚಿಗೆ ತಕ್ಕಂತ ಸಂಗಾತಿ ಆಯ್ಕೆ ಒಳಿತು.

ಒಬ್ಬರಿಗೊಬ್ಬರು ಗೌರವಿಸಬೇಕು
ಸಂಗಾತಿಯ ಬಗ್ಗೆ ಗೌರವವಿರಬೇಕು. ಯಾವುದೇ ರೀತಿಯಲ್ಲಿ ಸಂಗಾತಿಯನ್ನು ಟೀಕಿಸಬಾರದು. ತಮಾಷೆಗಾಗಿಯೂ ಸಂಗಾತಿಯನ್ನು ಟೀಕಿಸಿದರೆ, ಅದನ್ನು ಅವರು ಯಾವ ರೀತಿ ಪರಿಗಣಿಸುತ್ತಾರೆ ಎಂಬುದು ಅಗತ್ಯ. ನೀವು ತಮಾಷೆ ಮಾಡಿದರೂ, ಅದನ್ನು ಗಂಭೀರವಾಗಿ ತೆಗೆದುಕೊಂಡು ದೊಡ್ಡ ವಿಷಯದಂತೆ ಎಳೆದಾಡಿದಾಗ ಮನಸ್ತಾಪ ಉಂಟಾಗುತ್ತದೆ. ಹಾಗಾಗಿ, ಒಬ್ಬರಿಗೊಬ್ಬರು ಗೌರವದಿಂದ ಕಾಣಬೇಕು. ಒಬ್ಬರ ಕನಸನ್ನು ಮತ್ತೊಬ್ಬರು ಗೌರವಿಸಿ ನನಸು ಮಾಡಬೇಕು. ಯಾವುದೇ ಕನಸಿರಲಿ ಅಥವಾ ಗುರಿ ಇರಲಿ ನಿಮ್ಮ ಸಹಕಾರ ಅಗತ್ಯ. ನಿಮ್ಮ ಗುರಿ ಹಾಗೂ ನಿಮ್ಮ ಕನಸನ್ನು ನನಸು ಮಾಡುವಂತಹ ಸಂಗಾತಿ ಆಯ್ಕೆ ಮುಖ್ಯವಾಗಿರುತ್ತದೆ. ನಿಮ್ಮ ಸಾಧನೆಯಿಂದೆ ಬೆನ್ನೆಲುಬಾಗಿ ನಿಲ್ಲುವ ಸಂಗಾತಿ ಆಯ್ಕೆ ಮಾಡಿಕೊಳ್ಳಿ.

ನಂಬಿಕೆಗೆ ಯೋಗ್ಯವಾದಂತವರು
ಯಾವುದೇ ಸಂಬಂಧ ಗಟ್ಟಿಯಾಗಿರಬೇಕಾದರೆ ನಂಬಿಕೆ ಅಗತ್ಯ. ವಿಶ್ವಾಸವುಳ್ಳಂತಹ ಸಂಗಾತಿಯನ್ನು ಹುಡುಕಿಕೊಳ್ಳಿ. ನಂಬಿಕೆಯಿಂದಲೇ ಜೀವನ ಇರುವುದರಿಂದ, ಇವರನ್ನು ನಂಬಬಹುದು ಎಂಬ ನಂಬಿಕೆ ನಿಮ್ಮಲ್ಲಿ ಹುಟ್ಟಬೇಕು. ಒಬ್ಬರಿಗೊಬ್ಬರು ವಿಶ್ವಾಸದಿಂದಿದ್ದರೆ ದಾಂಪತ್ಯ ಜೀವನದಲ್ಲಿ ಸಂತೋಷ ಕಾಣಬಹುದು.

ಸಂಗಾತಿಯೊಡನೆ ಕಾಲ ಕಳೆಯಿರಿ
ಒಂದೇ ಅಭಿರುಚಿ ಇದ್ದಂತೆ, ಒಬ್ಬರಿಗೊಬ್ಬರ ಜೊತೆಯಲ್ಲಿ ಸಮಯ ಕಳೆಯಬೇಕಾಗುತ್ತದೆ. ಸಂಗಾತಿಯೊಡನೆ ಕಾಲ ಕಳೆಯಲು ಸಮಯ ಮಾಡಿಕೊಳ್ಳಿ. ಒಬ್ಬರು ಸಮಯ ಮಾಡಿಕೊಂಡರೆ, ಮತ್ತೊಬ್ಬರು ತಮ್ಮ ಕೆಲಸದಲ್ಲಿ ಕಾರ್ಯನಿರತರಾಗಿದ್ದರೆ, ಇದು ಒಂಟಿತನವನ್ನು ಕಾಡಿ, ಸಂಬಂಧವನ್ನು ಹಾಳು ಮಾಡುತ್ತದೆ. ಹಾಗಾಗಿ, ಒಬ್ಬರಿಗೊಬ್ಬರ ಸಮಯ ಮಾಡಿಕೊಂಡು ಹೆಚ್ಚಾಗಿ ಜೊತೆಯಲ್ಲಿ ಕಾಲ ಕಳೆಯುವುದು ಉತ್ತಮ.

-ಮೈನಾಶ್ರೀ.ಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com