ಕ್ಷಯ: ಅಸಡ್ಡೆ ಬೇಡ

ಒಬ್ಬ ವ್ಯಕ್ತಿ ಕ್ಷಯ ರೋಗದಿಂದ ಬಳಲುತ್ತಿದ್ದರೆ ಇತರರಿಗೂ ಈ ರೋಗ ಹರಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಜಾಗರೂಕರಾಗಿ...
ಕ್ಷಯ
ಕ್ಷಯ
Updated on

ಕ್ಷಯ ಅಥವಾ ಟಿಬಿ (Tuberculosis) ಈ ರೋಗಕ್ಕೆ ಯಾರು ಬೇಕಾದರೂ ತುತ್ತಾಗಬಹುದು. ಅದಕ್ಕೆ ಲಿಂಗ, ಜಾತಿ, ವಯಸ್ಸಿನ ಹಂಗಿಲ್ಲ. ಯಾರಿಗೆ ಯಾವ ವಯಸ್ಸಿನಲ್ಲಿ ಈ ರೋಗ ಬರುತ್ತದೆ ಎಂದು ಹೇಳಲಾಗದು. ಒಬ್ಬ ವ್ಯಕ್ತಿ ಕ್ಷಯ ರೋಗದಿಂದ ಬಳಲುತ್ತಿದ್ದರೆ ಇತರರಿಗೂ ಈ ರೋಗ ಹರಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಜಾಗರೂಕರಾಗಿ ಇರುವುದು ಮುಖ್ಯ.  
ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುವುದರ ಜತೆಗೆ ಅದರ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುವುದು ಕೂಡಾ ಅಷ್ಟೇ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ. ಇದು ಒಬ್ಬ ರೋಗ ಪೀಡಿತ ವ್ಯಕ್ತಿಯನ್ನು ಬಾಧಿಸುವುದರ ಜತೆಗೆ ಇತರರಿಗೂ ರೋಗ ಹರಡುವಂತೆ ಮಾಡುತ್ತದೆ. ಹಾಗೆಯೇ ಕ್ಷಯರೋಗದ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ವಿಷಯಗಳೂ ಬಹಳಷ್ಟಿವೆ.

ನಿರ್ಲಕ್ಷ್ಯ ಸಲ್ಲ


ಕ್ಷಯರೋಗ ಪೀಡಿತರಿಂದ ದೂರವಿರುವ ಮೂಲಕ ರೋಗಾಣು ಹರಡದಂತೆ ಎಚ್ಚರವಹಿಸಬಹುದು. ರೋಗಿ ಎಂದು ಗೊತ್ತಾದ ಕೂಡಲೇ ಅಥವಾ ಕ್ಷಯ ರೋಗ ಪತ್ತೆಯಾದ ಕೂಡಲೇ ಬಾಧಿತ ವ್ಯಕ್ತಿಯು  ತನಗೆ ಕ್ಷಯ ಇದೆ ಎಂಬುದನ್ನು ಎಲ್ಲರಿಂದಲೂ ಮುಚ್ಚಿಡಲು ಯತ್ನಿಸುತ್ತಾನೆ. ರೋಗಾಣು ಹರಡುವ ಭಯದಿಂದ ಜನ ತನ್ನನ್ನು ದೂರವಿರಿಸುತ್ತಾರೆ ಎಂಬ ಭಯವೇ ಇದಕ್ಕೆ ಕಾರಣ. ಹೀಗಿರುವಾಗ ರೋಗಿಯನ್ನು ದೂರವಿರಿಸುವುದು ಮಾತ್ರವಲ್ಲ ರೋಗಕ್ಕೆ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ವಾಸಿಯಾಗುವಂತೆ ಮಾಡಬೇಕು. ರೋಗ ಬಾಧಿತರಿಗೆ ಚಿಕಿತ್ಸೆ ಕೊಡಿಸುವ ಮನೋಭಾವವೂ ನಮ್ಮಲಿರಬೇಕು.

ಚಿಕಿತ್ಸೆ ಅರ್ಧದಲ್ಲಿ ನಿಲ್ಲಿಸುವುದು ಬೇಡ


ಸರಿಯಾದ ಚಿಕಿತ್ಸೆ ಪಡೆಯದೇ ಇರುವುದು ಅಥವಾ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುವುದು ಮಾರಕವಾಗಬಲ್ಲದು. ಚಿಕಿತ್ಸೆ ಅರ್ಧಕ್ಕೆ ನಿಲ್ಲಿಸಿದರೆ ರೋಗಾಣುಗಳು ಮತ್ತಷ್ಟು ಶಕ್ತಿಶಾಲಿಯಾಗಿ ಅದೇ ಔಷಧಿ ಮುಂದುವರಿಸಿದಾಗ ಅದು ಫಲಪ್ರದವಾಗದೇ ಇರಬಹುದು. ಚಿಕಿತ್ಸೆ ಅರ್ಧಕ್ಕೆ ನಿಲ್ಲಿಸಿದರೆ ಮಲ್ಟಿ ಡ್ರಗ್ ರೆಸಿಸ್ಟೆಂಟ್ ಟಿಬಿ ಇಲ್ಲವೇ ಎಕ್ಸ್‌ಟ್ರೀಂಲಿ ಡ್ರಗ್ ರೆಸಿಸ್ಟೆಂಟ್ ಟಿಬಿಯಾಗಿ ಅದು ಬದಲಾಗುವ ಸಾಧ್ಯತೆಗಳು ಜಾಸ್ತಿಯಾಗುತ್ತವೆ. ಆದ್ದರಿಂದ ಔಷಧಿ ಸೇವನೆಯನ್ನು ಅರ್ಧಕ್ಕೆ ನಿಲ್ಲಿಸುವುದು ಬೇಡ.

ರೋಗ ಹರಡದಿರಲಿ
ತನಗೆ ರೋಗವಿದೆ ಎಂದು ಗೊತ್ತಾದ ಕೂಡಲೇ ರೋಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ರೋಗ ಇನ್ನೊಬ್ಬರಿಗೆ ಹರಡದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

  • ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮುವುದು ಉಗುಳುವುದು ಬೇಡ
  • ಕೆಮ್ಮಿದ ಕಫದ ಪಾತ್ರೆಯನ್ನು ಸುಡುವುದೊಳಿತು
  • ಕೆಮ್ಮುವಾಗ ಬಾಯಿಗೆ ಅಡ್ಡವಾಗಿ ಕರವಸ್ತ್ರವಿರಲಿ
  • ಮದ್ಯಪಾನ, ದೂಮಪಾನದಿಂದ ದೂರವಿರಿ
  • ರೋಗಿಯ ಕೋಣೆಯಲ್ಲಿ ವಾಯು ಸಂಚಾರ ಯಥೇಚ್ಛವಿರಲಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com