ಹಂದಿ ಜ್ವರದಿಂದ ಮತ್ತೆ ೯ ಜನ ಸಾವು; ಸಾವಿನ ಸಂಖ್ಯೆ ೨೦೪೪ಕ್ಕೆ ಏರಿಕೆ

ಎಚ್೧ಎನ್೧ ವೈರಸ್ ಸೋಂಕು ತಗಲಿರುವ ಜನರ ಸಂಖ್ಯೆ ದೇಶದಲ್ಲಿ ಸುಮಾರು ೩೪೦೦೦ ಮುಟ್ಟಿದ್ದು, ಈಗ ೯ ಜನ ಮತ್ತೆ ಮೃತಪಟ್ಟಿರುವುದರಿಂದ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಎಚ್೧ಎನ್೧ ವೈರಸ್ ಸೋಂಕು ತಗಲಿರುವ ಜನರ ಸಂಖ್ಯೆ ದೇಶದಲ್ಲಿ ಸುಮಾರು ೩೪೦೦೦ ಮುಟ್ಟಿದ್ದು, ಈಗ ೯ ಜನ ಮತ್ತೆ ಮೃತಪಟ್ಟಿರುವುದರಿಂದ ಸಾವಿನ ಸಂಖ್ಯೆ ೨೦೪೪ಕ್ಕೆ ಏರಿದೆ. ಮಾರ್ಚ್ ೨೯ರವರೆಗೆ ೩೩೮೭೭ ಜನರಿಗೆ ಸೋಂಕು ತಗಲಿದ್ದು, ೨೦೪೪ ಜನ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಅತಿ ಹೆಚ್ಚು ಸೋಂಕು ತಗುಲಿದ ರಾಜ್ಯ ಗುಜರಾತ್ ಆಗಿದ್ದು, ಇಲ್ಲಿಯವರೆಗೂ ೪೩೦ ಸಾವು ದಾಖಲಾಗಿದೆ. ಇಲ್ಲಿಯವರೆಗೂ ಜನವರಿಯಿಂದ ಗುಜರಾತಿನಲ್ಲಿ ೬೫೦೭ ಜನಕ್ಕೆ ಸೋಂಕು ತಗಲಿದೆ. ರಾಜಸ್ಥಾನದಲ್ಲಿ ಈ ರೋಗ ೪೧೭ ಜನರನ್ನು ಬಲಿ ತೆಗೆದುಕೊಂಡಿದೆ.

ಮಹಾರಾಷ್ಟ್ರದಲ್ಲಿ ೩೯೭, ಮಧ್ಯಪ್ರದೇಶದಲ್ಲಿ ೨೯೯, ಕರ್ನಾಟಕದಲ್ಲಿ ೮೨, ತೆಲಂಗಾಣದಲ್ಲಿ ೭೬, ಪಂಜಾಬ್ ನಲ್ಲಿ ೫೩, ಹರ್ಯಾಣದಲ್ಲಿ ೫೧, ಜಮ್ಮು ಕಾಶ್ಮೀರದಲ್ಲಿ ೧೮, ಉತ್ತರಾಖಂಡದಲ್ಲಿ ೧೨, ಪಶ್ಚಿಮ ಬಂಗಾಳದಲ್ಲಿ ೨೫, ಉತ್ತರಪ್ರದೇಶದಲ್ಲಿ ೩೮, ದೆಹಲಿಯಲ್ಲಿ ೧೨, ಕೇರಳದಲ್ಲಿ ೧೪, ಆಂಧ್ರಪ್ರದೇಶದಲ್ಲಿ ೨೨, ಚತ್ತೀಸ್ ಘರ್ ನಲ್ಲಿ ೨೨ ಮತ್ತು ಹಿಮಾಚಲ ಪ್ರದೇಶದಲ್ಲಿ ೨೧ ಜನ ಹಂದಿಜ್ವರದಿಂದ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com