ಲೈಂಗಿಕಾಸಕ್ತಿಯನ್ನು ಕೆರಳಿಸಲು ದಿನವೂ ಕಾಫಿ ಕುಡಿಯಿರಿ

ನಿಮ್ಮ ಆರೋಗ್ಯಕರ ಲೈಂಗಿಕ ಜೀವನದ ದಿನಕ್ಕೆ ಎರಡು ಮೂರು ಲೋಟ ಕಾಫಿ ಅತಿ ಹೆಚ್ಚಿನ ಸಹಕಾರ ನೀಡುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.
ಕಾಫಿ ಮತ್ತು ಲೈಂಗಿಕ ಆರೋಗ್ಯ
ಕಾಫಿ ಮತ್ತು ಲೈಂಗಿಕ ಆರೋಗ್ಯ

ನ್ಯೂಯಾರ್ಕ್: ನಿಮ್ಮ ಆರೋಗ್ಯಕರ ಲೈಂಗಿಕ ಜೀವನದ ದಿನಕ್ಕೆ ಎರಡು ಮೂರು ಲೋಟ ಕಾಫಿ ಅತಿ ಹೆಚ್ಚಿನ ಸಹಕಾರ ನೀಡುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧನೆಯೊಂದರ ಪ್ರಕಾರ ದಿನಕ್ಕೆ ಎರಡರಿಂದ ಮೂರೂ ಕಪ್ ಕಾಫಿ ಕುಡಿಯುವವರು 'ಎರೆಕ್ಟೈಲ್ ಡಿಸ್ ಫಂಕ್ಷನ್' (ಇ ಡಿ - ಶಿಶ್ನೋದ್ರೇಕ ದೌರ್ಬಲ್ಯ)ಗೆ ತುತ್ತಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

"ನಾವು ಅತಿ ತೂಕದ ವ್ಯಕ್ತಿಗಳಲ್ಲಿ, ರಕ್ತದೊತ್ತಡದ ವ್ಯಕ್ತಿಗಳಲ್ಲಿ  ಇ ಡಿ ತೊಂದರೆ ಕಡಿಮೆಯಾಗಿದ್ದನ್ನು ಗಮನಿಸಿದ್ದೇವೆ. ಆದರೆ ಡಯಾಬೆಟಿಸ್ ಇರುವವರಲ್ಲಿ ಯಾವುದೇ ಪ್ರಗತಿ ಕಂಡುಬರಲಿಲ್ಲ" ಎಂದು ಸಂಶೋಧಕರು ತಿಳಿಸಿದ್ದಾರೆ.

"ಇ ಡಿ ಗೆ ದಯಾಬೆಟಿಸ್ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಆಧುದರಿಂದ ಇದರಲ್ಲಿ ಆಶ್ಚರ್ಯವೇನಿಲ್ಲ" ಎಂದು ಹೌಸ್ಟನ್ ನ ಟೆಕ್ಸಾಸ್ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ವಿಭಾಗದ ಸಹ ಪ್ರೊಫೆಸರ್ ಹಾಗೂ ಈ ಅಧ್ಯಯನದ ಪ್ರಧಾನ ಲೇಖಕ ಡೇವಿಡ್ ಎಸ್ ಲೋಪೆಜ್ ತಿಳಿಸಿದ್ದಾರೆ.

ಇ ಡಿ ತೊಂದರೆ ವರದಿ ಮಾಡಿದವರಲ್ಲಿ, ದಿನಕ್ಕೆ ೮೫ ರಿಂದ ೧೭೦ ಮಿಲಿಗ್ರಾಂ ಕೆಫಿನ್ ಸೇವಿಸಿದ ಪುರುಷರಲ್ಲಿ  ೪೨% ಇಳಿಮುಖ ಕಂಡಿದೆ ಎಂದಿದ್ದಾರೆ.

ಇ ಡಿ ತೊಂದರೆ ವರದಿ ಮಾಡಿದವರಲ್ಲಿ, ೧೭೧ ರಿಂದ ೩೦೩ ಮಿಲಿಗ್ರಾಂ ಕೆಫಿನ್ ಸೇವಿಸಿದ ಪುರುಷರಲ್ಲಿ  ೩೯% ಇಳಿಮುಖ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com